Kashmir issue

ಸ್ಪೀಕರ್ ಸಮಾವೇಶದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್ ವಿರುದ್ಧ ಭಾರತ ಆಕ್ರೋಶ
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸುವ ಪಾಕ್ ನಿಯೋಗದ ನಿಲುವನ್ನು ಭಾರತ ಪ್ರಬಲವಾಗಿ ವಿರೋಧಿಸಿದೆ.

ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಕದ ತಟ್ಟಿದ ಪಾಕ್ ಗೆ ಭಾರತ ಚಾಟಿ: ಮೊದಲು ಉಗ್ರರ ನಿಗ್ರಹಿಸಿ ಎಂದ ವಿದೇಶಾಂಗ ಇಲಾಖೆ
ಕಾಶ್ಮೀರ ವಿಷಯವಾಗಿ ಕಾಲು ಕೆರೆಯುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೆ ಬಿಸಿ ಮುಟ್ಟಿಸಿದ್ದು, ಭಾರತದ ಆಂತರಿಕ ಮತ್ತು ಸೂಕ್ಷ್ಮ ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನಿ ಮತ್ತು ಸಚಿವರು ಬೇಜಬಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

'ಕಾಶ್ಮೀರ ನಮ್ಮದು' ಶಾಹಿದ್ ಆಫ್ರಿದಿ ಟ್ವೀಟ್‌ಗೆ ಟಾಂಗ್ ಕೊಟ್ಟ ಗೌತಮ್ ಹೇಳಿದ್ದೇನು?
ಕಾಶ್ಮೀರ ನಮ್ಮದು ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಾಡಿದ್ದ ಟ್ವೀಟ್ ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟಾಂಗ್ ಕೊಟ್ಟಿದ್ದಾರೆ.

ದ್ವಿಮುಖ ತಂತ್ರದಿಂದ ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ಮುಂದಾದ ಟ್ರಂಪ್ ಆಡಳಿತ- ಮೂಲಗಳು
ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ಬವಿಸಿರುವ ಬಿಕ್ಕಟ್ಟನ್ನು ದ್ವಿಮುಖ ತಂತ್ರದ ಮೂಲಕ ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಸುಳ್ಳು ಬಟಾಬಯಲು: ಕಾಶ್ಮೀರ ಮಧ್ಯಸ್ಥಿಕೆಗೆ ಭಾರತ ಮನವಿ ಮಾಡಿರಲಿಲ್ಲ ಎಂದ ಅಮೆರಿಕ ಅಧಿಕಾರಿಗಳು!
ಕಾಶ್ಮೀರ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಳ್ಳು ಬಟಾ ಬಯಲಾಗಿದ್ದು, ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವಂತೆ ಭಾರತ ಮನವಿ ಮಾಡಿರಲಿಲ್ಲ ಎಂದು ಸ್ವತಃ ಅಮೆರಿಕ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ.

ಜೈಷ್ ಸೇರಿ ಗಡಿ ಭಯೋತ್ಪಾದಕ ಚಟುವಟಿಕೆ ನಿಗ್ರಹಿಸಲು ಮೋದಿ-ಮ್ಯಾಕ್ರೊನ್ ಪಣ
ಭಯೋತ್ಪಾದಕರ ಸುರಕ್ಷಿತ ತಾಣಗಳು ಮತ್ತು ಅವರಿಗೆ ನೀಡುತ್ತಿರುವ ಮೂಲಸೌಕರ್ಯವನ್ನು ಬೇರುಮಟ್ಟದಿಂದ ತೊಡೆದುಹಾಕಲು ಮತ್ತು ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸು ಜಾಲಗಳನ್ನು ಕಡಿದುಹಾಕಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಭಾರತ ಮತ್ತು ಫ್ರಾನ್ಸ್ ಕರೆ ನೀಡಿವೆ.

ಕಾಶ್ಮೀರ ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ವಿಚಾರ, 3ನೇ ವ್ಯಕ್ತಿಯ ಮಧ್ಯಸ್ಥಿಕೆ ಅನಪೇಕ್ಷಿತ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ಕಾಶ್ಮೀರ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಇಲ್ಲಿ 3ನೇ ವ್ಯಕ್ತಿ ಅಥವಾ ದೇಶದ ಮಧ್ಯಸ್ಥಿಕೆ ಅನಪೇಕ್ಷಿತ ಎಂದು ಹೇಳುವ ಮೂಲಕ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ ಪರೋಕ್ಷ ಟಾಂಗ್ ನೀಡಿದ್ದಾರೆ.

'ಅಣುಬಾಂಬ್' ಮೂಲಕ ಭಾರತವನ್ನು 'ಸ್ವಚ್ಛ' ಮಾಡಿ ಬಿಡುತ್ತೇವೆ: ಪಾಕ್ ಮಾಜಿ ಕ್ರಿಕೆಟಿಗ ಮಿಯಾಂದಾದ್ ಬೆದರಿಕೆ
ಪಾಕಿಸ್ತಾನದ ಬಳಿ ಇರುವ ಅಣುಬಾಂಬ್ ಗಳ ಮೂಲಕ ಭಾರತವನ್ನು ಸ್ವಚ್ಛ ಮಾಡಿ ಬಿಡುತ್ತೇವೆ ಎಂದು ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನೇರವಾಗಿಯೇ ಅಣ್ವಸ್ತ್ರ ಬೆದರಿಕೆ ಹಾಕಿದ್ದಾರೆ.

ಕಾಶ್ಮೀರ ವಿಚಾರ ಇಂಡೋ-ಪಾಕ್ ನಡುವಿನ ದ್ವಿಪಕ್ಷೀಯ ವಿಚಾರ: ಫ್ರಾನ್ಸ್
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿರುವ ಕಾಶ್ಮೀರ ವಿಚಾರ ಆ ದೇಶಗಳ ನಡುವಿನ ದ್ವಿಪಕ್ಷೀಯ ವಿಷಯ ಎಂದು ಫ್ರಾನ್ಸ್ ಸರ್ಕಾರ ಹೇಳಿದೆ.

