Karnataka polls

ಒಂದು ರಾಷ್ಟ್ರ, ಒಂದು ಚುನಾವಣೆ: ಕರ್ನಾಟಕ ಚುನಾವಣೆ ಕಾರಣವೇ? ಜೂನ್‌ನಲ್ಲಿಯೇ ಸಿದ್ಧತಾ ಕಾರ್ಯ ಆರಂಭಿಸಿದ್ದ ಕೋವಿಂದ್!
ಒಂದು ರಾಷ್ಟ್ರ, ಒಂದು ಚುನಾವಣೆ' ಸಿದ್ದತಾ ಕಾರ್ಯವನ್ನು ಜೂನ್ ತಿಂಗಳಲ್ಲಿಯೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆರಂಭಿಸಿದ್ದಾರೆ.ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಇದು ಪ್ರಾರಂಭವಾಯಿತು

ಕರ್ನಾಟಕ ಚುನಾವಣೆ: ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಬಿಜೆಪಿ ವಿಫಲ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾ ಸೋಲು ಅನುಭವಿಸಿದ ಆಡಳಿತರೂಢ ಬಿಜೆಪಿ ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಮೀಸಲಾದ ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿದೆ.

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ಮುಂದಿನ ಐದು ವರ್ಷ ಜನರ ಹೃದಯ ಗೆಲ್ಲಬೇಕು: ಕಪಿಲ್ ಸಿಬಲ್
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯರಹಿತವಾಗಿ ಆಡಳಿತ ನಡೆಸುವ ಮೂಲಕ "ಜನರ ಹೃದಯ ಗೆಲ್ಲಬೇಕು" ಎಂದು ಒತ್ತಾಯಿಸಿದ್ದಾರೆ.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ: ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ, ಸಿಎಂ ಹುದ್ದೆಯತ್ತ ಸಿದ್ದು, ಡಿಕೆಶಿ ಚಿತ್ತ
ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದೆ. ಗೆಲುವಿನ ಸಂಭ್ರಮದಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕರಾದ...

ದಕ್ಷಿಣ ಆಫ್ರಿಕಾದಲ್ಲಿ ಬಳಸಿದ್ದ ಇವಿಎಂಗಳನ್ನು ಕರ್ನಾಟಕ ಚುನಾವಣೆಯಲ್ಲಿ ಬಳಸಿಲ್ಲ: ಆಯೋಗ
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 13ರಂದು ಹೊರಬೀಳಲಿದೆ. ಆದರೆ ಅದಕ್ಕೂ ಮುನ್ನ ಚುನಾವಣಾ ಆಯೋಗ ಇವಿಎಂ ಯಂತ್ರದ ಬಗ್ಗೆ ಕಾಂಗ್ರೆಸ್ ಮಾಡಿದ್ದ ಆರೋಪವನ್ನು ತಿರಸ್ಕರಿಸಿದೆ.

ಕರ್ನಾಟಕ ಚುನಾವಣೆ: ಮತದಾನಕ್ಕೆ ಕ್ಷಣಗಣನೆ, ಮುದ್ರಣ ಮಾಧ್ಯಮಗಳು ಜಾಹೀರಾತು ಪ್ರಕಟಿಸಬಾರದು- ಆಯೋಗ
ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ಮತದಾನಕ್ಕೆ ಮುನ್ನ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯ ಅನುಮತಿಯಿಲ್ಲದೆ ಚುನಾವಣಾ ದಿನದಂದು ಮತ್ತು ಒಂದು ದಿನದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.

ವಿಧಾನಸಭೆ ಚುನಾವಣೆ: ಮೈಕ್‌ಗಳು ಆಫ್ ಆಗುವ ಮುನ್ನ ಪ್ರಚಾರದ ಅಬ್ಬರ ತಾರಕಕ್ಕೆ
ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬೀಳಲಿದ್ದು, ಮೈಕ್ ಗಳು ಆಫ್ ಆಗುವ ಮುನ್ನ ಪ್ರಮುಖ ಮೂರು ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ.

ಬಿಜೆಪಿ ರೋಡ್'ಶೋ: ಸಂಚಾರ ಅಸ್ತವ್ಯಸ್ತ, ಪ್ರಧಾನಿ ಮೋದಿಯನ್ನು 'ಮಾಸ್ಟರ್ ಆಫ್ ಡಿಸ್ಟಾರ್ಶನ್' ಎಂದು ಜರಿದ ಕಾಂಗ್ರೆಸ್
ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸಿದ್ದು, ರೋಡ್ ಶೋ ಪರಿಣಾಮ ನಗರದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಮೋದಿಯವರನ್ನು 'ಮಾಸ್ಟರ್ ಆಫ್ ಡಿಸ್ಟಾರ್ಶನ್' ಎಂದು ಜರಿದಿದೆ.

ಕರ್ನಾಟಕ ಚುನಾವಣೆ: ರಾಯಚೂರಿನಲ್ಲಿ ಮತ ಚಲಾಯಿಸಿ ಅರ್ಧ ಗಂಟೆಯಲ್ಲೇ ಅಸುನೀಗಿದ 82 ವರ್ಷದ ವೃದ್ಧೆ!
ರಾಜ್ಯ ವಿಧಾನಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಮೂಲಕ ಮನೆಯಿಂದಲೇ ಮತದಾನ ಮಾಡಿದ ನಂತರ ಅರ್ಧ ಗಂಟೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ನಡೆದಿದೆ.

