karnataka police

ಲೋಕಾಯುಕ್ತರಿಗೆ ಚಾಕು ಇರಿತ: ಅಧಿಕಾರಿಗಳ ವಿರುದ್ಧ ರೋಸಿ ಹೋಗಿದ್ದ ತೇಜ್ ರಾಜ್ ಹೇಳಿದ್ದೇನು?
ತೇಜ್ ರಾಜ್ ಅಧಿಕಾರಿಗಳ ಲಂಚಬಾಕತನದಿಂದ ರೋಸಿ ಹೋಗಿದ್ದನಂತೆ.. ಅಲ್ಲದೆ ಪದೇ ಪದೇ ದೂರಿಗೆ ಸಾಕ್ಷಿ ಇಲ್ಲ ಎಂದು ಹೇಳಿ ಲೋಕಾಯುಕ್ತರು ಪ್ರಕರಣಗಳನ್ನು ತಿರಸ್ಕರಿಸಿದ್ದರಂತೆ ಇದರಿಂದ ಹತಾಶನಾಗಿ ಕೃತ್ಯವೆಸಗಿದ್ದಾನೆ.

ಲೋಕಾಯುಕ್ತರಿಗೆ ಚಾಕು ಇರಿತ: ಆರೋಪಿ ತೇಜ್ ರಾಜ್ ಶರ್ಮಾ ನಿವಾಸದಲ್ಲಿ ಮಾಟ-ಮಂತ್ರ ಪುಸ್ತಕ ಪತ್ತೆ
ಲೋಕಾಯುಕ್ತ ಪಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಆರೋಪಿ ತೇಜ್ ರಾಜ್ ಶರ್ಮಾ ನಿವಾಸದಲ್ಲಿ ಭಾನಾಮತಿ ಕುರಿತ ಪುಸ್ತಕಗಳು ಲಭ್ಯವಾಗಿ ಎಂದು ತಿಳಿದುಬಂದಿದೆ.

ಮಲ್ಯ ಆಸ್ಪತ್ರೆ ಬಳಿ ನಲಪಾಡ್ ಗ್ಯಾಂಗ್ ನನ್ನ ಮೇಲೂ ಹಲ್ಲೆ ಮಾಡಿತ್ತು: ವಿದ್ವತ್ ಸಹೋದರನ ಹೇಳಿಕೆ
ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ವಿದ್ವತ್ ಸಹೋದರ ಸಾತ್ವಿಕ್ ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದು, ತನ್ನ ಮೇಲೂ ನಲಪಾಡ್ ಗ್ಯಾಂಗ್ ಹಲ್ಲೆ ಮಾಡಿತು ಎಂದು ಹೇಳಿದ್ದಾರೆ.

ಬಾಲಕನಿಗೆ ಲೈಂಗಿಕ ಕಿರುಕುಳ: ಶಾಲಾ ಅಟೆಂಡರ್ ಬಂಧನ
ಶಾಲಾ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲಾ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂತೋಷ್ ಹತ್ಯೆ ಹಿಂದೆ ಯಾವ ಕೋಮುದ್ವೇಷ ಅಥವಾ ರಾಜಕೀಯವಿಲ್ಲ, ಕರ್ನಾಟಕ ಪೋಲೀಸ್ ಸ್ಪಷ್ಟನೆ
ಕೇಂದ್ರೀಯ ಅಪರಾಧ ತನಿಖಾ ದಳ (ಸಿಸಿಬಿ) ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದು ಈ ಹತ್ಯೆ .........

ಕೊಪ್ಪಳದಲ್ಲಿ ಭೀಕರ ಅಪಘಾತ: ಟ್ರ್ಯಾಕ್ಟರ್-ಟ್ಯಾಂಕರ್ ಢಿಕ್ಕಿಯಾಗಿ ನಾಲ್ವರ ಸಾವು
ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ಯಾಕ್ಟರ್-ಟ್ಯಾಂಕರ್ ಮುಖಾಮುಖಿ ಢಿಕ್ಕಿಯಾದ್ದರಿಂದ ಸ್ಥಳದಲ್ಲೇ ನಾಲ್ಕು ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಪರೇಶ್ ಮೇಸ್ತಾ ಸಾವು ಪ್ರಕರಣ; ಭಟ್ಕಳದಲ್ಲಿ ಮತ್ತೋರ್ವ ಆರೋಪಿಯ ಬಂಧನ
ಕಾರವಾರದ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಕರಾವಳಿ ಪೊಲೀಸರು ಮಂಗಳವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಸ್ಸಿನ ಅಡಿ ಶವ ಎಳೆದು ತಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಆ್ಯಕ್ಸಿಡೆಂಟ್ ಕುರಿತು ಚಾಲಕನ ತಪ್ಪೊಪ್ಪಿಗೆ
ಬಸ್ ನಡಿ ಶವ ಎಳೆದು ತಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಚಾಲಕ ತಾನೇ ಅಪಘಾತ ಮಾಡಿ ಬಸ್ ನಿಲ್ಲಿಸದೇ ಬಂದಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಅಪಹರಣಕಾರನಿಗೆ ಪೊಲೀಸರ ಗುಂಡು, ಎರಡೇ ದಿನದಲ್ಲಿ ಬಾಲಕನ ರಕ್ಷಣೆ!
ಹಣದಾಸೆಗೆ ಬಾಲಕನ ಅಪಹರಣ ಮಾಡಿದ್ದ ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದ ಬೆಂಗಳೂರು ಪೊಲೀಸರು ಅಪಹರಣಕಾರನೋರ್ವನಿಗೆ ಗುಂಡಿಕ್ಕಿ ಬಾಲಕನ ರಕ್ಷಣೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿ ನಡೆದಿದೆ.

