karnataka loksabha election 2024

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಪಕ್ಷ, ಅಭ್ಯರ್ಥಿ ಗೌಣ; ಅಭಿವೃದ್ಧಿಗೆ ಮಾತ್ರ ಮತದಾನ; ಶೋಭಾ-ರಾಜೀವ್ ಗೌಡ ನೇರ ಹಣಾಹಣಿ!
ಕರ್ನಾಟಕ ಮಾತ್ರವಲ್ಲದೆ, ದೇಶದ ಐದು ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ದೇವೇಗೌಡರ ಕುಟುಂಬಕ್ಕೆ ಹಿಂದಿನಿಂದಲೂ ಶಿವಕುಮಾರ್ ಮೇಲೆ ಹಗೆತನ: ಡಿಕೆ ಸುರೇಶ್
ದೇವೇಗೌಡರ ಕುಟುಂಬ ಹಿಂದಿನಿಂದಲೂ ಶಿವಕುಮಾರ್ ಅವರ ಮೇಲೆ ಹಗೆತನ ಸಾಧಿಸುತ್ತಿದೆ, ನಮಗೆ ಅವರಂತೆ ದ್ವೇಷದ ಭಾವನೆ ಇಲ್ಲ. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಾವು ಅವರಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ.

ಆದಿ ಚುಂಚನಗಿರಿ ಮಠ ವಿಭಜಿಸಿದ್ದು ಯಾರು? ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದು ಯಾರು? HDKಗೆ ಚಲುವರಾಯಸ್ವಾಮಿ ಟಾಂಗ್
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಮಠ ರಾಜಕೀಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ, ಜೆಡಿಎಸ್-ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಒಕ್ಕಲಿಗರ ಪ್ರಭಾವಿ ಮಠಾಧೀಶ ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿಯ ಭೇಟಿಗೆ ಮುಗಿಬೀಳುತ್ತಿದ್ದಾರೆ.

ರಾಜಕೀಯ ಚಟುವಟಿಕೆಗಳ ತಾಣವಾದ ಆದಿ ಚುಂಚನಗಿರಿ ಮಠ: ಸ್ವಾಮೀಜಿಗಳ ಆಶೀರ್ವಾದಕ್ಕಾಗಿ ಗಿರಕಿ ಹೊಡೆಯುತ್ತಿರುವ ಅಭ್ಯರ್ಥಿಗಳು!
ಲೋಕಸಭಾ ಚುನಾವಣೆಯ ಪ್ರಚಾರ ಗರಿಗೆದರಿದ್ದು, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವನ್ನು ಓಲೈಸಲು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ: ಬಸವರಾಜ ಬೊಮ್ಮಾಯಿ
ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಕಷ್ಟು ಸ್ಥಾನಗಳಲ್ಲಿ ಸ್ಪರ್ಧಿಸದ ಕಾಂಗ್ರೆಸ್, ಮತದಾರರನ್ನು ಮೂರ್ಖರನ್ನಾಗಿಸಿ ಅಲ್ಲೊಂದು ಇಲ್ಲೊಂದು ಸ್ಥಾನ ಗೆಲ್ಲಲು ದೊಡ್ಡ ಆಶ್ವಾಸನೆ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಸೀಟು ಗೆದ್ದು, ಮೋದಿಗೆ ಉಡುಗೊರೆಯಾಗಿ ನೀಡುತ್ತೇವೆ: ಯಡಿಯೂರಪ್ಪ
ಲೋಕಸಭೆ ಚುನಾವಣೆಯಲ್ಲಿ "ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿಯವರಿಗೆ ಅರ್ಪಿಸುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಲೋಕಸಭೆ ಚುನಾವಣೆ: ಅನುಕಂಪದ ಕಾರ್ಡ್ ಮುಂದಿಟ್ಟ ಶ್ರೀರಾಮುಲು; ಸೋಲೊಪ್ಪಿಕೊಂಡಿದ್ದಾರೆ ಎಂದ ಕಾಂಗ್ರೆಸ್
2023ರ ವಿಧಾನಸಭೆ ಚುನಾವಣೆಯಲ್ಲಿನ ಸೋಲನ್ನು ನೆನಪಿಸಿಕೊಂಡು ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಇತ್ತೀಚೆಗೆ ನೀಡಿರುವ ಹೇಳಿಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಲಿದೆಯೇ? ಇದು ಗಣಿ ಜಿಲ್ಲೆ ಬಳ್ಳಾರಿಯ ಬಿಜೆಪಿ ಕಾರ್ಯಕರ್ತರ ಮನದಲ್ಲಿ ಮೂಡಿರುವ ಪ್ರಶ್ನೆಯಾಗಿದೆ.

ಮೇಕೆದಾಟು ವಿವಾದ: ಅಧಿಕಾರದಲ್ಲಿದ್ದಾಗಲೇ ಏನೂ ಮಾಡಿಲ್ಲ ಎಂದ ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ
ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಮೇಕೆದಾಟು, ಮಹದಾಯಿ ಯೋಜನೆ ವಿಚಾರವಾಗಿ ಏನನ್ನೂ ಮಾಡಿಲ್ಲ, ಈಗ ಏನು ಮಾಡುತ್ತಾರೆ ಎಂದಿರುವ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಜ್ಯದ ಕೆಲ ಕ್ಷೇತ್ರಗಳ ಮೇಲೆ ಹೈಕಮಾಂಡ್ ಕಣ್ಗಾವಲು: ಭಿನ್ನಮತೀಯ ನಾಯಕರ ಮೇಲೆ ಅಮಿತ್ ಶಾ ತೀವ್ರ ನಿಗಾ!
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಜೆಪಿಯ ದೆಹಲಿ ತಂಡವು ಕೆಲವು ಪೈಪೋಟಿಯುತ ಕ್ಷೇತ್ರಗಳ ಮೇಲೆ ತೀವ್ರಾ ನಿಗಾ ಇಡಲಾಗಿದೆ.

