Karnataka Lokasabha Election 2024

ಲೋಕಸಭೆ ಚುನಾವಣೆ: ಪ್ರತಿ ಬೂತ್‌ನಲ್ಲಿ ಶೇಕಡಾ 10 ರಷ್ಟು ಹೆಚ್ಚು ಮತ ಗಳಿಕೆ; ಜೆಡಿಎಸ್- ಬಿಜೆಪಿ ಮೈತ್ರಿ ಗುರಿ!
2019 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕರ್ನಾಟಕ ಬಿಜೆಪಿ ಈ ಬಾರಿ ಪ್ರತಿ ಬೂತ್‌ನಲ್ಲಿ ಶೇ. 10 ರಷ್ಟು ಹೆಚ್ಚು ಮತಗಳನ್ನು ಗಳಿಸುವ ಗುರಿಯನ್ನು ಹೊಂದಿದೆ.

ಸುಮಲತಾ ನಿರ್ಧಾರಕ್ಕೆ ಕೌಂಟ್ ಡೌನ್: ಸಂಸದೆಯ ಮುಂದೇನಿದೆ ಆಫ್ಷನ್? ಬಂಡಾಯವೋ, ಋಣ ಸಂದಾಯವೋ?
ದಿವಂಗತ ಜನ ಅಂಬರೀಷ್ ಜನಪ್ರಿಯತೆಯಿಂದಾಗಿ ಮಂಡ್ಯ ರಾಜಕೀಯದಲ್ಲಿ ಅವರ ಹೆಸರು ಅಜರಾಮರ, ಹೀಗಾಗಿ ಎಲ್ಲಾ ಪಕ್ಷಗಳು ಅಂಬರೀಷ್ ಅವರ ಹೆಸರು ಎಳೆದು ತರುತ್ತಿವೆ.

ಎಚ್.ಡಿ ಕುಮಾರಸ್ವಾಮಿ ಬದುಕಿದ್ದರೂ ಸಿದ್ಧಾಂತದಲ್ಲಿ ಸತ್ತಂತೆ: ಡಿ.ಕೆ. ಶಿವಕುಮಾರ್ ವ್ಯಂಗ್ಯ
ಹೆಚ್.ಡಿ. ಕುಮಾರಸ್ವಾಮಿ ಅವರು ಕಮಲದ ಧ್ವಜ ಹಾಕಿದ್ದಾರೆ, ಬದುಕಿದ್ದು ಸತ್ತಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ

ಬೆಳಗಾವಿ: ನಾನು ಯಾರ ಸ್ಥಾನವನ್ನು ಕಿತ್ತುಕೊಂಡಿಲ್ಲ, ಮಂಗಳಾ ಅಂಗಡಿಗೆ ರಾಜಕೀಯ ಅನುಭವ ಕಡಿಮೆ- ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆ ಆಗಿದ್ದೀರಿ. ಜಿಲ್ಲೆಯಲ್ಲಿ ನಿಮಗಿಂತ ಹಿರಿಯರಾದ ಮಹಾಂತೇಶ್ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನವನ್ನು ನೀವು ಕಿತ್ತುಕೊಂಡಿದ್ದೀರಿ.

ರಾಜ್ಯದಲ್ಲಿ ರಾಮ ಮಂದಿರದ ಅಲೆ ಇಲ್ಲ, ಕಾಂಗ್ರೆಸ್ 18-20 ಸ್ಥಾನ ಗೆಲ್ಲಲಿದೆ: ತನ್ವೀರ್ ಸೇಠ್
ಲೋಕಸಭೆ ಚುನಾವಣೆಗೆ ಮುನ್ನವೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ತನ್ವೀರ್ ಸೇಠ್, ಪಕ್ಷದ ಭವಿಷ್ಯ ಬಿಜೆಪಿಗಿಂತ ಉತ್ತಮವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, 28 ಕ್ಷೇತ್ರಗಳ ಪೈಕಿ 18-20 ರಿಂದ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೋಲಾರದಿಂದ ಅಳಿಯನಿಗೆ ಟಿಕೆಟ್ ನಿರಾಕರಣೆ; ಕಾಂಗ್ರೆಸ್ 'ರಾಜಿ ಸೂತ್ರ' ಕಂಡುಕೊಳ್ಳಬೇಕಿತ್ತು: ಕೆಎಚ್ ಮುನಿಯಪ್ಪ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಅಭ್ಯರ್ಥಿ ವಿಚಾರವಾಗಿ ಪಕ್ಷವು ರಾಜಿ ಸೂತ್ರವನ್ನು ಕಂಡುಕೊಳ್ಳಬೇಕಿತ್ತು ಮತ್ತು ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕಿತ್ತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆಎಚ್ ಮುನಿಯಪ್ಪ ಭಾನುವಾರ ಹೇಳಿದ್ದಾರೆ.

ಸಚಿವರು, ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ; ಚುನಾವಣಾಧಿಕಾರಿಗೆ ಬಿಜೆಪಿ ದೂರು
ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆಗಳು ಮುಂದುವರಿದಿರುವ ಬಗ್ಗೆ ಬಿಜೆಪಿ ಭಾನುವಾರ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರಲ್ಲಿ ಒಗ್ಗಟ್ಟಿಲ್ಲದ ಕಾರಣ ಚನ್ನಪಟ್ಟಣದಿಂದ ಅಮಿತ್ ಶಾ ರೋಡ್ ಶೋ: ಡಿಕೆ ಶಿವಕುಮಾರ್
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಒಗ್ಗಟ್ಟಿಲ್ಲದ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚನ್ನಪಟ್ಟಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರೋಡ್‌ಶೋ ನಡೆಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.

ದಕ್ಷಿಣ ಕನ್ನಡ: ಹಿಂದುತ್ವದ ಭದ್ರಕೋಟೆಯಲ್ಲಿ ಕಾಂಗ್ರೆಸ್- ಬಿಜೆಪಿ ರಣತಂತ್ರ; ಮತದಾರರು ಮಣೆ ಹಾಕುವುದು ಯಾರಿಗೆ?
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಕಳೆದ ಕೆಲವು ದಶಕಗಳಿಂದ ಎಂ ವೀರಪ್ಪ ಮೊಯ್ಲಿ, ಡಿವಿ ಸದಾನಂದ ಗೌಡ, ಬಿ ಜನಾರ್ದನ ಪೂಜಾರಿ ಮುಂತಾದ ಅನೇಕ ಹಿರಿಯ ರಾಜಕಾರಣಿಗಳ ಹೋರಾಟವನ್ನು ಕಂಡಿದೆ. ಆದರೆ, 2024ರ ಲೋಕಸಭೆ ಚುನಾವಣೆ ವೇಳೆಗೆ ಈ ವಾತಾವರಣ ಸಂಪೂರ್ಣ ವಿಭಿನ್ನವಾಗಿದೆ. ಬಿಜೆಪಿ ಅಭ್ಯರ್ಥಿಯಾದಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್ ಪದ್ಮರಾಜ್ ಮೊದಲ ಬಾರಿಗೆ ಚುನಾವಣೆಯ ಪರೀಕ್ಷೆ ಎದುರಿಸುತ್ತಿದ್ದಾರೆ.

