Karnataka Lockdown

ಕೊಪ್ಪಳ: ಮದ್ಯದ ಅಂಗಡಿ ಓಪನ್; ಮಹಿಳೆಯರ ಪ್ರತಿಭಟನೆ
40 ದಿನಗಳ ಬಳಿಕ ಮದ್ಯದಂಗಡಿ ತೆರೆಯಲಾಗಿದೆ ಎಂದು ಮದ್ಯ ಪ್ರಿಯರು ಖುಷಿ ಪಡುತ್ತಿದ್ದರೆ ಅತ್ತ ಕೊಪ್ಪಳದಲ್ಲಿ ಮಹಿಳಾ ಮಣಿಗಳು ತೆರೆದಿರುವ ಬಾರ್ ಗಳನ್ನು ಕೂಡಲೇ ಮುಚ್ಚಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.

ಏ.20ರ ಬಳಿಕ ಶೇ.50ರಷ್ಟು ಐಟಿ- ಬಿಟಿ ಸಿಬ್ಬಂದಿ ಕಚೇರಿಗೆ ಹೋಗಲು ಅವಕಾಶ, ಪಾಸ್ ಅವಶ್ಯಕತೆ ಇಲ್ಲ: ಡಿಸಿಎಂ ಡಾ. ಅಶ್ವತ್ಥನಾರಾಯಣ
ಇದೇ ತಿಂಗಳ 20ನೇ ತಾರೀಕಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಐಟಿ, ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಕೆಎಸ್ಆರ್‌ಟಿಸಿ ಸಿಬ್ಬಂದಿ ವೇತನ ಕಡಿತವಿಲ್ಲ: ಮೂರು ತಿಂಗಳ ಸಂಬಳ ಸರ್ಕಾರದಿಂದಲೇ ಪಾವತಿ
ಲಾಕ್ ಡೌನ್ ನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳು ಆದಾಯವಿಲ್ಲದೇ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ಎದುರಾಗಿರುವ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಯ ವೇತನವನ್ನು ಸರ್ಕಾರದಿಂದಲೇ ನೀಡಲು ನಿರ್ಧರಿಸಲಾಗಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ: ಸುರೇಶ್ ಕುಮಾರ್
ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ ಈ ಕುರಿತ ವರದಿಗಳು ಸುಳ್ಳು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

ಲಾಕ್‌ಡೌನ್ ಮುಂದುವರಿದರೆ ಸರ್ಕಾರಿ ನೌಕರರ ಸಂಬಳ ಕಡಿತ: ಸಿಎಂ ಬಿಎಸ್ ಯಡಿಯೂರಪ್ಪ
ಕೊರೋನಾ ವೈರಸ್ ನಿಂದಾಗಿ ಪರಿಸ್ಥಿತಿ ಹೀಗೆ ಮುಂದುವರೆದು, ಲಾಕ್ ಡೌನ್ ಮುಂದುವರೆದರೆ ಆರ್ಥಿಕ ಪರಿಸ್ಥಿತಿ ನಿಯಂತ್ರಣಕ್ಕಾಗಿ ಸರ್ಕಾರಿ ನೌಕರರ ಸಂಬಳ ಕಡಿತ ಅನಿವಾರ್ಯವಾಗಬಹುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ಎನ್‌ಡಿಆರ್‌ಎಫ್ ಸೂಚನೆ
ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸಲು ನೇರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಖಾಡಕ್ಕೆ ಇಳಿದಿದೆ.

ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಬಿಗಿ: ಸಚಿವ ಆರ್ ಅಶೋಕ್
ಕೊರೋನಾ ವೈರಸ್ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಈ ಸಂಬಂಧ ನೇರವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಅಖಾಡಕ್ಕಿಳಿದಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂಪ್ಯಾಕ್ಟ್: ಗಣಿ ಕಾರ್ಮಿಕರ ಕುಟುಂಬಗಳಿಗೆ ನೆರವಾದ ದಾನಿಗಳು
ಕೊರೋನ ಭೀತಿಯಿಂದ ಮನೆಯಿಂದ ಆಚೆ ಬರದೆ ಹಸಿವಿನಿಂದ ಬಳಲಿದ್ದ 70ಕ್ಕೂ ಹೆಚ್ಚು ಗಣಿ ಕಾರ್ಮಿಕರ ಕುಟುಂಬಗಳ ಹಸಿವನ್ನ ದಾನಿಗಳು ನೀಗಿಸಿದ್ದಾರೆ.

ಕೊರೋನಾ ವೈರಸ್ ಭೀತಿ: ಮಾನವೀಯತೆ ಮರೆತು ಈಶಾನ್ಯ ಭಾರತೀಯನ ಒಳಗೆ ಬಿಡದ ಸೂಪರ್ ಮಾರ್ಕೆಟ್ ಸಿಬ್ಬಂದಿ ಪೊಲೀಸ್ ವಶಕ್ಕೆ!
ದೇಶಾದ್ಯಂತ ವ್ಯಾಪಕವಾಗಿ ಪಸರಿಸುತ್ತಿರುವ ಕೊರೋನಾ ವೈರಸ್ ಭೀತಿಯಿಂದಾಗಿ ಮೈಸೂರಿನ ಸೂಪರ್ ಮಾರ್ಕೆಟ್ ಸಿಬ್ಬಂದಿ ಈಶಾನ್ಯ ಭಾರತದ ನಾಗರೀಕರಿಗೆ ಒಳಗೆ ಪ್ರವೇಶ ನೀಡದ ಆರೋಪದ ಮೇರೆಗೆ ಸೂಪರ್ ಮಾರ್ಕೆಟ್ ಸಿಬ್ಬಂದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

