karnataka govt

ಅಪಾರ್ಟ್ ಮೆಂಟ್ ಗಳಿಗೆ ಅಧಿಭೋಗ ಪ್ರಮಾಣಪತ್ರ ಕಡ್ಡಾಯ ಕುರಿತು ರಾಜ್ಯ ಸರ್ಕಾರದ ನಿರ್ಧಾರ ಶೀಘ್ರದಲ್ಲೆ!
ಅಪಾರ್ಟ್ ಮೆಂಟ್ ಗಳಲ್ಲಿ ವಿದ್ಯುತ್ ಹಾಗೂ ನೀರು ಮುಂತಾದ ಪೂರೈಕೆಗಳಿಗೆ ಅಗತ್ಯ ಅನುಮತಿಗಳನ್ನು ಪಡೆಯುವುದಕ್ಕೆ ಈಗ ಅಧಿಭೋಗ ಪ್ರಮಾಣ ಪತ್ರ (ಒ.ಸಿ)ಯ ಕಡ್ಡಾಯ ನಿಯಮವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಸಿಎಂ ಬೊಮ್ಮಾಯಿ ಸದಾಶಯದಿಂದ ಹೊಣೆಗಾರಿಕೆ ನೀಡಿದರೆ, ಜವಾಬ್ದಾರಿ ಮರೆತ ಸಚಿವರಿಂದ ವಿಜಯೋತ್ಸವ: ಎಚ್ ಡಿಕೆ ತೀವ್ರ ಕಿಡಿ
ಕೋವಿಡ್ ನಿರ್ವಹಣೆ ದೃಷ್ಟಿಕೋನದಿಂದ ಸಿಎಂ ಬಸವರಾಜ ಬೊಮ್ಮಾಯಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಬೇಜವಾಬ್ದಾರಿ ಸಚಿವರು ವಿಜಯೋಯತ್ಸವ ಆಚರಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ತುರ್ತಾಗಿ ಸೆರೋಸರ್ವೆ ನಡೆಸಿ: ರಾಜ್ಯ ಸರ್ಕಾರಕ್ಕೆ ಟಿಎಸಿ ಸಲಹೆ
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯನ್ನು ತಗ್ಗಿಸಲು ತುರ್ತಾಗಿ ಮಕ್ಕಳನ್ನು ಒಳಗೊಂಡಂತೆ ಮೂರನೇ ಸೆರೋಸರ್ವೇ ನಡೆಸುವಂತೆ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ(ಟಿಎಸಿ) ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಸಿಎಂ ಸ್ಥಾನಕ್ಕೆ ರಾಜಿನಾಮೆ: ಬಿಎಸ್ ವೈ ಬಣದಲ್ಲಿ ನೀರವ ಮೌನ, ರೆಬೆಲ್ ನಾಯಕರ ಮನದಲ್ಲಿ ಸಂಭ್ರಮಾಚರಣೆ
ಹಲವು ರೀತಿಯ ರಾಜಕೀಯ ಬೆಳವಣಿಗೆಗಳ ಬಳಿಕ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ಇದೀಗ ಅವರದೇ ಪಕ್ಷದ ನಾಯಕರ ನಡುವೆ ಪರ-ವಿರೋಧ ಬಣಗಳಲ್ಲಿ ವಿವಿಧ ರೀತಿಯ ಭಾವನೆಗಳು ಮನೆ ಮಾಡಿವೆ.

ಬಿಎಸ್ ಯಡಿಯೂರಪ್ಪ: ನಾಲ್ಕು ಬಾರಿ ಸಿಎಂ, ಆದರೂ ಒಮ್ಮೆಯೂ ಅಧಿಕಾರಾವಧಿ ಪೂರ್ಣಗೊಳಿಸದ 'ರಾಜಾಹುಲಿ'
ಬಿಜೆಪಿ ಪಾಳಯದಲ್ಲಿ ರಾಜಾಹುಲಿ ಎಂದೇ ಖ್ಯಾತರಾಗಿದ್ದ ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ನಾಲ್ಕು ಬಾರಿಯೂ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

4 ಬಾರಿ ಸಿಎಂ ಆದರೂ ಒಮ್ಮೆಯೂ ಪೂರ್ಣಾವಧಿ ಇಲ್ಲ; ಹೆಸರು ತಿದ್ದುಪಡಿಯೂ 'ಬಿಎಸ್ ವೈ' ಕೈ ಹಿಡಿಯಲಿಲ್ಲ
ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜಿನಾಮೆ ನೀಡಿದ್ದು, ಆ ಮೂಲಕ ಸತತ ನಾಲ್ಕನೇ ಬಾರಿಯೂ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ರಾಜ್ಯ ಸರ್ಕಾರದಿಂದ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಸದಸ್ಯರ ನೇಮಕ
ರಾಜ್ಯ ಸರ್ಕಾರ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಸದಾಶಿವ ಶೆಣೈ ಅವರನ್ನು ನೇಮಕ ಮಾಡಿದೆ.

ಜಕ್ಕೂರ್ ಏರೋಡ್ರಮ್ ವ್ಯಾಪ್ತಿಯಲ್ಲಿ ನಿಯಮ ಮೀರಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಸಚಿವ ನಾರಾಯಣ ಗೌಡ ಸೂಚನೆ
ಜಕ್ಕೂರು ಏರೋ ಡ್ರಮ್ ನ 5ಕಿಮೀ ವ್ಯಾಪ್ತಿಯಲ್ಲಿ ನಿಯಮ ಮೀರಿ 45 ಮೀಟರ್ ಗಿಂತಲೂ ಎತ್ತರ ಕಟ್ಟಿರುವ ಕಟ್ಟಡಗಳನ್ನು ತಕ್ಷಣವೆ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ, ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಆದೇಶಿಸಿದರು.

ತಮಿಳುನಾಡು ನಡೆಯಿಂದ ಅಚ್ಚರಿಯೇನಿಲ್ಲ... ಮೇಕೆದಾಟು ಯೋಜನೆಯನ್ನು ಮಾಡಿಯೇ ಮಾಡುತ್ತೇವೆ: ಬೊಮ್ಮಾಯಿ
ಸುಮಾರು ನಾಲ್ಕು ದಶಕಗಳ ಹಿಂದಿನ ಈ ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ಆಗಿದ್ದು, ಈ ಯೋಜನೆಯನ್ನು ನಾವು ಮಾಡಿಯೇ ಮಾಡುತ್ತೇವೆ ಎಂದು ಗೃಹಸಚಿವರೂ ಆಗಿರುವ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

