Karnataka Floods

ಕರ್ನಾಟಕ ಪ್ರವಾಹ: ರಂಗನತಿಟ್ಟು ಪಕ್ಷಿಧಾಮದಲ್ಲಿ ತಗ್ಗಿದ ನೆರೆ, ಆದರೂ ಪ್ರವಾಸಿಗರಿಗಿಲ್ಲ ಪ್ರವೇಶ!
ಕರ್ನಾಟಕದ ಖ್ಯಾತ ಪ್ರವಾಸಿತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಉಂಟಾಗಿದ್ದ ಪ್ರವಾಹ ತಗ್ಗಿದ್ದು, ದ್ವೀಪದಂತಾಗಿದ್ಜ ಗುಡ್ಡಗಳು ನಿಧಾನವಾಗಿ ಹೊರಜಗತ್ತಿಗೆ ಕಾಣತೊಡಗಿವೆ.

ಭಾರಿ ಮಳೆ: ಕೆಆರ್ ಎಸ್ ಜಲಾಶಯ ಭರ್ತಿ; ಅಪಾರ ಪ್ರಮಾಣದ ನೀರು ಹೊರಕ್ಕೆ!
ಕೊಡಗು ಮತ್ತು ಮಡಿಕೇರಿ ಭಾಗದಲ್ಲಿ ಭಾರಿ ಮಳೆ ಮುಂದುವರೆದ ಕಾರಣ ಮಂಡ್ಯದಲ್ಲಿರುವ ಕೃಷ್ಣ ರಾಜ ಸಾಗರ (ಕೆಎರ್ ಎಸ್)ಜಲಾಶಯ ಭರ್ತಿಯಾಗಿದ್ದು, ಡ್ಯಾಂನಲ್ಲಿನ ನೀರಿನ ಮಟ್ಟ ಗರಿಷ್ಠ 124.80 ಅಡಿ ತಲುಪಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಪ್ರವಾಹ: 62 ವರ್ಷದ ಹಿರಿಯ ನಾಗರಿಕ ಚಾರ್ಮಾಡಿ ಘಾಟ್ ಹೀರೋ!
ಧೈರ್ಯಶಾಲಿ ಹಿರಿಯ ನಾಗರಿಕರೊಬ್ಬರು ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸೂಪರ್ ಹೀರೋ ಆಗಿದ್ದಾರೆ.

ತಗ್ಗಿದ ಪ್ರವಾಹ ಪರಿಸ್ಥಿತಿ: ಮನೆಗಳಿಗೆ ಮರಳುತ್ತಿರುವ ನಿರಾಶ್ರಿತರು; ಸಾವಿನ ಸಂಖ್ಯೆ 58 ಕ್ಕೇರಿಕೆ
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಾವೇರಿ ಜಲಾನಯನ ಪ್ರದೇಶ ಮತ್ತು ಉತ್ತರ ಕರ್ನಾಟಕದ ಹಲವೆಡೆ ತಾತ್ಕಾಲಿಕವಾಗಿ ಸ್ಥಾಪಿಸಲಾದ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಸಂತ್ರಸ್ತರು ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ

ಮಳೆಗೆ ರಜೆ ನೀಡಿದ್ದಕ್ಕೆ ಬದಲಿಯಾಗಿ ಇನ್ನು ಕೆಲ ಸಮಯ ಭಾನುವಾರ ಶಾಲೆ: ಶಿಕ್ಷಣ ಇಲಾಖೆ
ರಾಜ್ಯದ ಕೆಲವು ಪ್ರವಾಪೀಡಿತ ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಮಳೆಯ ಕಾರಣದಿಂದಾಗಿ ಈಗಾಗಲೇ ಶಾಲಾ ಮಕ್ಕಳಿಗೆ ಸಾಕಷ್ಟು ರಜೆ ನೀಡಲಾಗಿದೆ.

ಪ್ರವಾಹ ಪರಿಹಾರ ಕಾರ್ಯ ಸಮರ್ಪಕ ಅನುಷ್ಠಾನ ಅಗತ್ಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ಒಂದು ವಾರದ ಒಳಗಾಗಿ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಿ, ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಾದಗಿರಿ: ಜೀವದ ಹಂಗು ತೊರೆದು ಪ್ರವಾಹದ ನಡುವೆ ಆ್ಯಂಬುಲೆನ್ಸ್‌ಗೆ ದಾರಿ ತೋರಿದ ಬಾಲಕ, ವಿಡಿಯೋ ವೈರಲ್!
ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಆ್ಯಂಬುಲೆನ್ಸ್‌ಗೆ ಬಾಲಕನೊಬ್ಬ ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ನೀರಿನ ನಡುವೆ ನಡೆದುಕೊಂಡು ಬಂದು ದಾರಿ ತೋರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜ್ಯದಲ್ಲಿ ವಾಯುಪಡೆಯ ಸಿಬ್ಬಂದಿಯಿಂದ 500 ಜನರ ರಕ್ಷಣೆ: ಏರ್ ಮಾರ್ಷಲ್ ಗೋಟಿಯಾ
ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಲುಕಿದ್ದ ಸುಮಾರು 500 ಜನರನ್ನು ರಕ್ಷಿಸಲಾಗಿದ್ದು, 48 ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ...

ಕರ್ನಾಟಕ ಪ್ರವಾಹ ರಾಷ್ಟ್ರೀಯ ವಿಪತ್ತೇ - ಅಲ್ಲವೇ? ಸಂಧಿಗ್ಧತೆಯಲ್ಲಿ ಸಿಎಂ ಯಡಿಯೂರಪ್ಪ
ರಾಜ್ಯಾದ್ಯಂತ ಅತೀವೃಷ್ಟಿಯಿಂದಾದ ನಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಿ ನೆರವು ನೀಡಬೇಕು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.

