Karnataka Elections 2023

ಕರ್ನಾಟಕ ಚುನಾವಣೆ 2023: ಮೂರು ದಿನ ಸಿಗಲ್ಲ ಎಣ್ಣೆ; ಬಾರ್ಗಳಿಗೆ ಮುಗಿಬಿದ್ದ ಮದ್ಯಪ್ರಿಯರು
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಸಂಜೆ 6 ಗಂಟೆಯ ನಂತರ ಬೃಹತ್ ಪ್ರಚಾರಕ್ಕೆ ಬ್ರೇಕ್ ಬಿದ್ದಿದೆ. ಇದೇ ವೇಳೆ ರಾಜ್ಯಾದ್ಯಂತ ಇಂದು ಸಂಜೆ 6 ಗಂಟೆಯಿಂದ ಮದ್ಯ ಮಾರಟಕ್ಕೆ ನಿರ್ಬಂಧ ಹೇರಲಾಗಿದೆ.

ಬೆಂಗಳೂರು: ಎಸ್ಎಂ ಕೃಷ್ಣ ಸಂಬಂಧಿ ಮನೆ ಮೇಲೆ ಐಟಿ ದಾಳಿ; ಶೋಧಕಾರ್ಯ ಮುಂದುವರಿಕೆ
ರಾಜ್ಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಕರ್ನಾಟಕ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸಂಬಂಧಿಕರ ಮನೆ ಸೇರಿದಂತೆ ಬೆಂಗಳೂರಿನ ಹಲವೆಡೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಐಟಿ ದಾಳಿ: ಮಂಡ್ಯ, ಕಲಬುರಗಿ, ಹಾವೇರಿ ಸೇರಿ ಹಲವೆಡೆ ದಾಳಿ, ದಾಖಲೆ ಪರಿಶೀಲನೆ
ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನ ಬಾಕಿ ಇರುವಂತೆ ರಾಜ್ಯದ ನಾನಾ ಕಡೆ ಮತ್ತೆ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ಹಾಗೂ ಚುನಾವಣಾಧಿಕಾರಿಗಳು ಮಿಂಚಿನ ದಾಳಿ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಎನ್ನಲಾದ ನಗದು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಸಿಎಂ ಅಭ್ಯರ್ಥಿ ಘೋಷಣೆಗೆ ಲಿಂಗಾಯಿತರ ಪಟ್ಟು; ಬಿಜೆಪಿಗೆ ಇಕ್ಕಟ್ಟು (ಸುದ್ದಿ ವಿಶ್ಲೇಷಣೆ)
ಲಿಂಗಾಯಿತ ಮತಗಳು ಈ ಬಾರಿ ಕೈ ಹಿಡಿಯುತ್ತಾ…? ಅಥವಾ ತಪ್ಪಿ ಹೋಗುತ್ತಾ? ಚುನಾವಣೆಗೆ ಅಭ್ಯರ್ಥಿಗಳ ಘೊಷಣೆ ಬೆನ್ನಲ್ಲೇ ಪಕ್ಷದೊಳಗೆ ಎದ್ದಿರುವ ಬಂಡಾಯ ಬಿಜೆಪಿ ಕೇಂದ್ರ ನಾಯಕರನ್ನು ಚಿಂತೆಗೀಡು ಮಾಡಿರುವ ಸಂಗತಿ ಇದು.

ತಂದೆ ಧ್ರುವನಾರಾಯಣ್-ತಾಯಿ ವೀಣಾ ನಿಧನ: ಕೈ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಗೆ JDS ಬೆಂಬಲ
ಇತ್ತೀಚೆಗಷ್ಟೇ ತಂದೆ ಧ್ರುವನಾರಾಯಣ್ ಕಳೆದುಕೊಂಡು ಅವರ ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತಿರುವ ದರ್ಶನ್ ಧ್ರುವನಾರಾಯಣ್ ಗೆ ಇದೀಗ ತಾಯಿ ವಿಯೋಗವಾದ ಬೆನ್ನಲ್ಲೇ ದರ್ಶನ್ ಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರು ಸ್ಪರ್ಧೆಯಿಂದ ಹಿಂದೆ ಸರಿದು ಬೆಂಬಲ ನೀಡುವ ಕುರಿತು ಘೋಷಣೆ ಮಾಡಿದ್ದಾರೆ.

ಕರ್ನಾಟಕ ಚುನಾವಣೆ: ಜೆಡಿಎಸ್ ಪರ ತೆಲಂಗಾಣ ಸಿಎಂ ಕೆಸಿಆರ್, ಬಂಗಾಳ ಸಿಎಂ ದೀದಿ ಪ್ರಚಾರ: ವರದಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಜಾತ್ಯಾತೀತ ಜನತಾ ದಳದ ಪರವಾಗಿ ತೆಲಂಗಾಣ ಸಿಎಂ ಹಾಗೂ ಬಿಆರ್ ಎಸ್ ಪಕ್ಷದ ಮುಖ್ಯಸ್ತ ಕೆ ಚಂದ್ರಶೇಖರ ರಾವ್ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಹಾಸನ: ಎಚ್ ಡಿ ರೇವಣ್ಣ ಆರೋಪ; ಸ್ವಯಂ ವರ್ಗಾವಣೆಗೆ ಡಿವೈಎಸ್ ಪಿ ಉದಯ್ ಭಾಸ್ಕರ್ ಆಗ್ರಹ
ಜಾತ್ಯಾತೀತ ಜನತಾದಳದ ನಾಯಕ ಹೆಚ್ ಡಿ ರೇವಣ್ಣ ಅವರ ಆರೋಪಗಳಿಂದ ಬೇಸತ್ತು ಡಿವೈಎಸ್ ಪಿ ಉದಯ್ ಭಾಸ್ಕರ್ ಅವರು ವರ್ಗಾವಣೆ ಮಾಡುವಂತೆ ತಾವೇ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ರಂಗೇರಿದ ಕರ್ನಾಟಕ ವಿಧಾನಸಭೆ ಚುನಾವಣೆ: ಕಲಬುರಗಿಯಲ್ಲಿ ಅಕ್ರಮ ಹಣ ಸಾಗಾಟ, 1.90 ಕೋಟಿ ರೂ ವಶ
ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದ್ದು, ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 1.90 ಕೋಟಿ ರೂ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತುಮಕೂರಿನಲ್ಲಿ 'ಓಟು-ನೋಟು' ರಾಜಕೀಯ; ಮತದಾರರ ಓಲೈಕೆಗೆ ಜೋಳಿಗೆ ಹಿಡಿದು ಹೊರಟ ಸೊಗಡು ಶಿವಣ್ಣ
ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಮತದಾರರನ್ನು ಒಲಿಸಿಕೊಳ್ಳಲು ರಾಜಕಾರಣಿಗಳು ದೊಡ್ಡ ಮೊತ್ತದ ಹಂಚುವ ಮೂಲಕ ಕರ್ನಾಟಕದಲ್ಲಿ ಮುಂಬರುವ ಚುನಾವಣೆಗೆ ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಈ ಹೊತ್ತಿನಲ್ಲಿ ತುಮಕೂರಿನ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಜೋಳಿಗೆ ಧರಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

