karnataka bandh

ಕರ್ನಾಟಕ ಬಂದ್ ಅಗತ್ಯವಿಲ್ಲ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ರಾಜ್ಯ

ಕರ್ನಾಟಕ ಬಂದ್ ಅಗತ್ಯವಿಲ್ಲ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ವಿವಿಧ ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.ಬಂದ್ ಹಿಂಪಡೆಯುವಂತೆ ಕನ್ನಡ ಸಂಘಟನೆಗಳನ್ನು ಮನವಿ ಮಾಡಿಕೊಂಡಿದ್ದಾರೆ. 

ಡಿ.5 ರಂದು ಕರ್ನಾಟಕ ಬಂದ್: ಬಿಗಿಭದ್ರತೆಗೆ ಪೊಲೀಸ್​​ ​​ಆಯುಕ್ತ ಕಮಲ್​ ಪಂತ್​ ವಿಶೇಷ ಸೂಚನೆ
ರಾಜ್ಯ

ಡಿ.5 ರಂದು ಕರ್ನಾಟಕ ಬಂದ್: ಬಿಗಿಭದ್ರತೆಗೆ ಪೊಲೀಸ್​​ ​​ಆಯುಕ್ತ ಕಮಲ್​ ಪಂತ್​ ವಿಶೇಷ ಸೂಚನೆ

ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಡಿ‌. 5 ರಂದು ಕರ್ನಾಟಕ ಬಂದ್​​ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​​ಗೆ ಪೊಲೀಸ್​​ ​​ಆಯುಕ್ತ ಕಮಲ್​ ಪಂತ್​ ವಿಶೇಷ ಸೂಚನೆ  ನೀಡಿದ್ದಾರೆ.

ಕನ್ನಡವನ್ನು ಹಾಳು ಮಾಡೊ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ: ವಾಟಾಳ್ ನಾಗರಾಜ್
ರಾಜ್ಯ

ಕನ್ನಡವನ್ನು ಹಾಳು ಮಾಡೊ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ: ವಾಟಾಳ್ ನಾಗರಾಜ್

ಡಿಸೆಂಬರ್ 5ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ ನಡೆಯುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಮರಾಠ ಸಮುದಾಯ ನಿಗಮ ಸ್ಥಾಪನೆ: ಡಿ.5 ಬಂದ್ ಕರೆಗೆ ಕನ್ನಡ ಸಂಘಟನೆಗಳ ಬೆಂಬಲ ಅಚಲ!
ರಾಜ್ಯ

ಮರಾಠ ಸಮುದಾಯ ನಿಗಮ ಸ್ಥಾಪನೆ: ಡಿ.5 ಬಂದ್ ಕರೆಗೆ ಕನ್ನಡ ಸಂಘಟನೆಗಳ ಬೆಂಬಲ ಅಚಲ!

ರಾಜ್ಯ ಸರ್ಕಾರದ ಮರಾಠ ಸಮುದಾಯ ನಿಗಮ ಸ್ಥಾಪನೆ ಕ್ರಮ ವಿರೋಧಿಸಿ ಡಿ.5ರಂದು ಕರೆ ನೀಡಿದ್ದ ರಾಜ್ಯ ಬಂದ್'ಗೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಬಹುತೇಕ ಎಲ್ಲಾ ಕನ್ನಡಪರ ಸಂಘಟನೆಗಳೂ ಒಗ್ಗಟ್ಟಾಗಿ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ರಾಜ್ಯ ಬಂದ್ ಖಚಿತ ಎಂದು ಒಕ್ಕೊರಲಿನಿಂದ ಘೋಷಿಸಿವೆ.

ಸರ್ಕಾರಕ್ಕೆ ತಿರುಗೇಟು; ಯಾವುದೇ ಕಾರಣಕ್ಕೂ ಬಂದ್ ಹತ್ತಿಕ್ಕಲು ಸಾಧ್ಯವಿಲ್ಲ: ಸಾ.ರಾ.ಗೋವಿಂದು
ರಾಜ್ಯ

ಸರ್ಕಾರಕ್ಕೆ ತಿರುಗೇಟು; ಯಾವುದೇ ಕಾರಣಕ್ಕೂ ಬಂದ್ ಹತ್ತಿಕ್ಕಲು ಸಾಧ್ಯವಿಲ್ಲ: ಸಾ.ರಾ.ಗೋವಿಂದು

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಅನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಕನ್ನಡ ಒಕ್ಕೂಟದ ಮುಖಂಡ ಮತ್ತು ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಹೇಳಿದ್ದಾರೆ,

ಬಲವಂತದ ಬಂದ್ ಗೆ ಅವಕಾಶ ಕೊಡುವುದಿಲ್ಲ; ಕೆಟ್ಟದಾಗಿ ನಡೆದುಕೊಂಡರೆ ಕ್ರಮ ನಿಶ್ಚಿತ: ಮುಖ್ಯಮಂತ್ರಿ ಎಚ್ಚರಿಕೆ
ರಾಜ್ಯ

ಬಲವಂತದ ಬಂದ್ ಗೆ ಅವಕಾಶ ಕೊಡುವುದಿಲ್ಲ; ಕೆಟ್ಟದಾಗಿ ನಡೆದುಕೊಂಡರೆ ಕ್ರಮ ನಿಶ್ಚಿತ: ಮುಖ್ಯಮಂತ್ರಿ ಎಚ್ಚರಿಕೆ

ಬಲವಂತದಿಂದ ಎಲ್ಲೂ ಬಂದ್ ಮಾಡಲು ತಾವು ಅವಕಾಶ ಕೊಡುವುದಿಲ್ಲ ಎಂದು ಡಿಸೆಂಬರ್ 5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ನಮ್ಮನ್ನ ಜೈಲಿಗೆ ಹಾಕಲಿ, ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ: ವಾಟಾಳ್ ನಾಗರಾಜ್
ರಾಜ್ಯ

ಯಡಿಯೂರಪ್ಪ ನಮ್ಮನ್ನ ಜೈಲಿಗೆ ಹಾಕಲಿ, ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಖಚಿತ: ವಾಟಾಳ್ ನಾಗರಾಜ್

ಸಿಎಂ ಬಿಎಸ್ ಯಡಿಯೂರಪ್ಪ ಬೇಕಾದರೆ ನಮ್ಮನ್ನ ಜೈಲಿಗೆ ಹಾಕಲಿ ಆದರೆ ನಾವು ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಮರಾಠಿ ಪ್ರಾಧಿಕಾರ ವಿವಾದ: ಬಲವಂತದಿಂದ ಬಂದ್ ನಡೆಸಿದರೆ ಕಠಿಣ ಕ್ರಮ- ಸಿಎಂ ಯಡಿಯೂರಪ್ಪ ಎಚ್ಚರಿಕೆ
ರಾಜ್ಯ

ಮರಾಠಿ ಪ್ರಾಧಿಕಾರ ವಿವಾದ: ಬಲವಂತದಿಂದ ಬಂದ್ ನಡೆಸಿದರೆ ಕಠಿಣ ಕ್ರಮ- ಸಿಎಂ ಯಡಿಯೂರಪ್ಪ ಎಚ್ಚರಿಕೆ

ಮರಾಠ ಪ್ರಾಧಿಕಾರ ರಚನೆಗೆ ಸರ್ಕಾರದ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಬಲವಂತದಿಂದ ಬಂದ್ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮರಾಠ ಪ್ರಾಧಿಕಾರ ವಿರೋಧಿಸಿ ಡಿ.5ಕ್ಕೆ ರಾಜ್ಯ ಬಂದ್'ಗೆ ಕನ್ನಡಪರ ಸಂಘಟನೆಗಳ ಕರೆ 
ರಾಜ್ಯ

ಮರಾಠ ಪ್ರಾಧಿಕಾರ ವಿರೋಧಿಸಿ ಡಿ.5ಕ್ಕೆ ರಾಜ್ಯ ಬಂದ್'ಗೆ ಕನ್ನಡಪರ ಸಂಘಟನೆಗಳ ಕರೆ 

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿರುವ ಕನ್ನಡ ಸಂಘಟನೆಗಳು ಈ ತೀರ್ಮಾನವನ್ನು ಹಿಂಪಡೆಯಲು ನ.27ರವರೆಗೂ ಸರ್ಕಾರಕ್ಕೆ ಗಡುವು ನೀಡಿದ್ದು, ಅಷ್ಟರೊಳಗೆ ನಿರ್ಧಾರ ಹಿಂಪಡೆಯದೇ ಹೋದರೆ ಡಿ.5ರಂದು ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಸಿವೆ.