Karnaka Loksabha Poll 2024

ಲೋಕಸಮರ 2024: ಏಪ್ರಿಲ್ 24ರಿಂದ ಬೆಳಗಾವಿ, ಚಿಕ್ಕೋಡಿ ಸೇರಿ ಉತ್ತರ ಕರ್ನಾಟಕದಲ್ಲಿ ಸಿಎಂ ಪ್ರಚಾರ, ರಂಗೇರಲಿದೆ ಚುನಾವಣೆ ಕಣ
ಬೆಳಗಾವಿ ಲೋಕಸಭಾ ಚುನಾವಣೆಗೆ ಇನ್ನು 16 ದಿನಗಳು ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಪಕ್ಷಗಳು ಈಗಾಗಲೇ ಎರಡು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿವೆ. ಇದೀಗ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸೇರಿದಂತೆ ಸ್ಟಾರ್ ಪ್ರಚಾರಕರು ಸೋಮವಾರದಿಂದ ಪ್ರಚಾರ ಆರಂಭಿಸುವ ನಿರೀಕ್ಷೆಯಿದೆ.

ಮೋದಿ ವರ್ಚಸ್ಸು, ಬಿಜೆಪಿ-ಜೆಡಿಎಸ್ ಮೈತ್ರಿ ನನ್ನ ಭಾರೀ ಗೆಲುವಿಗೆ ಸಹಕಾರಿ: ಶೋಭಾ ಕರಂದ್ಲಾಜೆ (ಸಂದರ್ಶನ)
ನಿಮಗೇಕೆ ಜನ ಮತ ಹಾಕಬೇಕು?: BJPಗೆ ಡಿಕೆಶಿ ಪ್ರಶ್ನೆ
ಚುನಾವಣೆಯಲ್ಲಿ ಜನರು ನಿಮಗೆ ಏಕೆ ಮತ ಹಾಕಬೇಕೆಂದು ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರಿಗೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಬುಧವಾರ ಪ್ರಶ್ನಿಸಿದ್ದಾರೆ.

ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟವಾಗಿದೆ: ಸಿಎಂ ಸಿದ್ದರಾಮಯ್ಯ
ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

ನನ್ನ ಪೂರ್ವಜರಂತೆ ನಾನು ಕೂಡ ಜನರಿಗಾಗಿ ಶ್ರಮಸುತ್ತೇನೆ: ಯದುವೀರ್ ಕೃಷ್ಣದತ್ತ ಒಡೆಯರ್
ನನ್ನ ಪೂರ್ವಜರಂತೆ ನಾನು ಕೂಡ ಜನರಿಗಾಗಿ ಶ್ರಮಸುತ್ತೇನೆಂದು ಮೈಸೂರು ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಹೇಳಿದರು.

ಲೋಕ ಸಮರ 2024: ಮತದಾನ ಹೆಚ್ಚಳಕ್ಕೆ RWAಯಿಂದ ಅಭಿಯಾನ ಆರಂಭ
ಲೋಕಸಭಾ ಚುನಾವಣೆಗೆ ಇನ್ನೆರಡು ವಾರಗಳಷ್ಟೇ ಬಾಕಿಯಿದ್ದು, ಈ ನಡುವಲ್ಲೇ ಮತದಾನ ಹಚ್ಚಳಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯೂಎ) ಜಾಗೃತಿ ಅಭಿಯಾನಗಳನ್ನು ಚುರುಕುಗೊಳಿಸಿವೆ.

ಲೋಕಸಭಾ ಚುನಾವಣೆ 2024: ರಾಜ್ಯದ 19 ಕ್ಷೇತ್ರಗಳಲ್ಲಿ SUCI ಸ್ಪರ್ಧೆ
ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದ್ಯಂತ ಒಟ್ಟು 19 ಕ್ಷೇತ್ರಗಳಲ್ಲಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ-ಸಿ) ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ನಡೆಸಲಿದ್ದಾರೆಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ ಜಡಗನ್ನವರ ಹೇಳಿದ್ದಾರೆ.

ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆ 15 ಸ್ಥಾನ ಗ್ಯಾರಂಟಿ- ಸಚಿವ ಕೆ.ಎಚ್. ಮುನಿಯಪ್ಪ
ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್ ಲೋಕಸಭೆ ಟಿಕೆಟ್ ನೀಡಬೇಕೆಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ಪಕ್ಷದ ಮುಂದೆ ಬೇಡಿಕೆಯಿಟ್ಟಿದ್ದರು. ಆದರೆ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ತೊರೆಯುವುದಾಗಿ ರಮೇಶ್ ಕುಮಾರ್ ಅವರ ಬಣದಲ್ಲಿದ್ದ ಹಲವು ನಾಯಕರು ಬೆದರಿಕೆ ಹಾಕಿದ್ದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್- ಕುಮಾರಸ್ವಾಮಿ ಭೇಟಿ, ಮಹತ್ವದ ಮಾತುಕತೆ!
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಭಾನುವಾರ ಜೆಪಿ ನಗರದ ನಿವಾಸದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ.

