Kannadaprabha News

ಕಾನೂನು, ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನಲೆ ಸ್ಟ್ಯಾಂಡ್ ಅಪ್ ಕಮಿಡಿಯನ್ ಮುನಾವರ್ ಫಾರೂಕಿ ಬೆಂಗಳೂರು ಶೋ ರದ್ದು!
ಕೋವಿಡ್ ಪರೀಕ್ಷಾ ವರದಿ ಕೇಳಿದ ಪೊಲೀಸರ ಮೇಲೆ ಚಾಲಕ ಲಾರಿ ಹರಿಸಲು ಮುಂದಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಹಿಂದೂ ಭಾವನೆ ಧಕ್ಕೆ ತಂದಿದ್ದ ಮುನಾವರ್ ಫಾರೂಕಿ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ರದ್ದು.

ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ: ಕುಷ್ಠರೋಗ ತಜ್ಞ ಸಸ್ಪೆಂಡ್. ಬೆಂಗಳೂರಿನಲ್ಲಿ ಹಲವೆಡೆ ಕಂಪಿಸಿದ ಭೂಮಿ!
ಬೆಂಗಳೂರಿನ ಕೆಂಗೇರಿ, ಕಗ್ಗಲೀಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಭೂಮಿ ಕಂಪವಿಸಿದ ಅನುಭವವಾಗಿದ್ದು ದೊಡ್ಡ ಸದ್ದು ಕೇಳಿಬಂದಿದೆ.

ಪುನೀತ್ ಸಾವಿನಿಂದ ನೊಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ. ಧಾರವಾಡದಲ್ಲಿ 66 ವೈದ್ಯ ವಿದ್ಯಾರ್ಥಿಗಳಿಗೆ ಕೊರೋನಾ!
ಆತ್ಮಹತ್ಯೆಗೆ ಶರಣಾದ ಅಪ್ಪು ಅಭಿಮಾನಿ ಮಯೂರ. ಪುನೀತ್ ರಂತೆ ತನ್ನ ಕಣ್ಣುಗಳನ್ನು ದಾನ ಮಾಡಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ಅವರ ವಿಚಾರಣೆ ನಡೆಯಿತು.

ನೀರು ನುಗ್ಗಿದ ಮನೆಗೆ 10000. ಬೊಮ್ಮಾಯಿಗೆ ಮೋದಿ ಕರೆ. ಶ್ರೀರಾಮಸೇನೆ ಸದಸ್ಯರಿಂದ ಮೂತ್ರ ವಿಸರ್ಜಿಸಿ ಪ್ರತಿಭಟನೆ!
ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದರು. ಇನ್ನು ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದರು.

ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತ. ರಸ್ತೆ ದುರಸ್ತಿಗೆ 500 ಕೋಟಿ, ಮನೆ ಹಾನಿಗೆ 1 ಲಕ್ಷ ಪರಿಹಾರ!
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಅತಿವೃಷ್ಠಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾವಿನ ಮರಿ ಬಿದ್ದಿದ್ದ ಆಹಾರ ಸೇವಿಸಿ 52 ವಿದ್ಯಾರ್ಥಿ ಅಸ್ವಸ್ಥ; ಸೆಲ್ಫಿ ಕ್ರೇಜಿಗೆ ಬಿದ್ದು ಕಾವೇರಿನದಿಗೆ ಬಿದ್ದ ಯುವಕ: ಕನ್ನಡಪ್ರಭ.ಕಾಮ್
ವಿಷಾಹಾರ ಸೇವನೆಯಿಂದ ಯಾದಗಿರಿಯ ಅಬ್ಬೆ ತುಮಕೂರು ವಿಶ್ವಾರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯ 52 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೆಲ್ಫಿ ಕ್ರೇಜಿಗೆ ಬಿದ್ದ ಅಭಿಷೇಕ್ ಶ್ರೀರಂಘಪಟ್ಟಣ ಬಳಿ ಕಾವೇರಿ ನದಿಗೆ ಬಿದ್ದಿದ್ದಾನೆ.

ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಟ್ ಕಾಯಿನ್ ಬಿಸಿನೆಸ್. ಜೈಲಿನಿಂದ ಹೊರಬಂದ ಬಿಟ್ ಕಾಯಿನ್ ಕಿಂಗ್ ಪಿನ್! ಕನ್ನಡಪ್ರಭ.ಕಾಮ್
ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆದ ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಇದಕ್ಕೆ ಬೊಮ್ಮಾಯಿ ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೇಸಿಗರ ಹೆಸರಿದೆ ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಡಿ. 10ರಂದು ಚುನಾವಣೆ. ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆ!
23 ವಿಧಾನಸಭಾ ಕ್ಷೇತ್ರಗಳ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಿದೆ. ಯಾವುದೇ ದೋಷಗಳು ಅಥವಾ ಬದಲಾವಣೆಗಳನ್ನು ಮಾಡಬೇಕಾದರೆ ನಾಗರಿಕರು ಪರಿಶೀಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಹರೇಕಳ ಹಾಜಬ್ಬ, ಸಂಕೇಶ್ವರ್ ಸೇರಿ ಹಲವರಿಗೆ ಪದ್ಮಪ್ರಶಸ್ತಿ ಪ್ರದಾನ, ಮುಂಬೈ ಕರ್ನಾಟಕ ಇನ್ಮುಂದೆ ಕಿತ್ತೂರು ಕರ್ನಾಟಕ!
ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಲಾಗಿದ್ದು, ನಗರದಲ್ಲಿ ಕನಿಷ್ಠ ಆಟೋ ದರವನ್ನು 25 ರೂಪಾಯಿಂದ 30 ರೂಪಾಯಿಗೆ ಹೆಚ್ಚಿಸಲಾಗಿದೆ.

