Justin Trudeau

ಕೆನಡಾ ಪ್ರಜೆ ಹತ್ಯೆ ಮಾಹಿತಿಯನ್ನು ಐದು ಮೈತ್ರಿ ದೇಶಗಳೊಂದಿಗೆ ಹಂಚಿಕೊಂಡಿದ್ದೆವು; ಭಾರತ ಬಹುದೊಡ್ಡ ತಪ್ಪು ಮಾಡಿದೆ: ಜಸ್ಟಿನ್ ಟ್ರುಡೊ
ಕೆನಡಾ ಸರ್ಕಾರದ ಆರೋಪಗಳನ್ನು ಬಲವಾಗಿ ನಿರಾಕರಿಸಿದ ನಂತರ ಭಾರತ ಸರ್ಕಾರ, ಕೆನಡಾದಿಂದ ತನ್ನ ಅಧಿಕಾರಿ, ಭಾರತದ ಕೆನಡಾ ಹೈ ಕಮಿಷನರ್ ಮತ್ತು ಇತರ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತ್ತು ಮತ್ತು ಆರು ಮಂದಿ ಕೆನಡಾ ರಾಯಭಾರಿಗಳನ್ನು ಭಾರತ ಬಿಟ್ಟು ಹೋಗುವಂತೆ ಸೂಚಿಸಿತ್ತು.

ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪ್ರಧಾನಿ: ಸಭೆಯ ಬಗ್ಗೆ ನಾನೇನು ಹೇಳಲ್ಲ ಎಂದ ಜಸ್ಟಿನ್ ಟ್ರುಡೊ!
ಕೆನಡಾದ ಖಲಿಸ್ತಾನಿ ಪ್ರತ್ಯೇಕತಾವಾದಿಯ ಸಾವಿನಲ್ಲಿ ಭಾರತ ಭಾಗಿಯಾಗಿದೆ ಎಂದು ಕೆನಡಾದ ಪ್ರಧಾನಿ ಆರೋಪಿಸಿದ ಸುಮಾರು ಒಂದು ವರ್ಷದ ನಂತರ ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವಿನ ಈ ಸಭೆ ನಡೆದಿದೆ.

'ಪ್ರತಿ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ': ಖಲಿಸ್ತಾನಿ ಉಗ್ರನ ವೀಡಿಯೊ ಕುರಿತು ಕೆನಡಾ ಪ್ರತಿಕ್ರಿಯೆ
ಏರ್ ಇಂಡಿಯಾ ವಿಮಾನವನ್ನು ಹಾರಾಟ ನಡೆಸದಂತೆ ಸ್ಫೋಟಿಸುತ್ತೇವೆ ಎಂಬ ಖಲಿಸ್ತಾನಿ ಉಗ್ರನ ಬೆದರಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆನಡಾ ಸರ್ಕಾರ, ಪ್ರತಿ ಬೆದರಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

ಭಾರತ ಜೊತೆಗಿನ ಸಂಘರ್ಷ ನಡುವೆ ಬಂದೂಕು ಹೊಂದಿದ್ದ 8 ಸಿಖ್ ಯುವಕರ ವಿರುದ್ಧ ಕೆನಡಾ ಕ್ರಮ
ಬ್ರಾಂಪ್ಟನ್‌ನಲ್ಲಿ ಒಂದು ವಾರದ ಅವಧಿಯಲ್ಲಿ ಎಂಟು ಕೆನಡಾದ ಸಿಖ್ ಯುವಕರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಬಂದೂಕು ಸಂಬಂಧಿತ ಅಪರಾಧಗಳ ಆರೋಪ ಹೊರಿಸಲಾಗಿದೆ.

ತಣ್ಣಗಾದ ಕೆನಡಾ: ನಾವು ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ- ಜಸ್ಟಿನ್ ಟ್ರುಡೊ
ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಕೆನಡಾ ಬಯಸುವುದಿಲ್ಲ. ನವದೆಹಲಿಯೊಂದಿಗೆ ಜವಾಬ್ದಾರಿಯುತವಾಗಿ ಮತ್ತು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ನಾಜಿ ಮಾಜಿ ಯೋಧನ ಗೌರವಿಸಿದ್ದಕ್ಕೆ ಟೀಕೆಗೆ ಗುರಿ: ಕ್ಷಮೆಯಾಚಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ನಾಜಿ ಮಾಜಿ ಯೋಧನ ಗೌರವಿಸಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ಹಾಗೂ ಟೀಕೆಗೆ ಗುರಿಯಾಗಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಸಂಸತ್ತಿನ ಪರವಾಗಿ ಕ್ಷಮೆಯಾಚಿಸಿದ್ದಾರೆ.

ಭಯೋತ್ಪಾದಕರು ಕೆನಡಾದಲ್ಲಿ ಸುರಕ್ಷಿತ ಸ್ವರ್ಗ ಕಂಡುಕೊಂಡಿದ್ದಾರೆ: ಜಸ್ಟಿನ್ ಟ್ರುಡೊಗೆ ತಿವಿದ ಶ್ರೀಲಂಕಾ ಸಚಿವ
ಭಯೋತ್ಪಾದಕರು ಕೆನಡಾದಲ್ಲಿ ಸುರಕ್ಷಿತ ಸ್ವರ್ಗ ಕಂಡುಕೊಂಡಿದ್ದಾರೆ ಎಂದು ಹೇಳುವ ಮೂಲಕ ಶ್ರೀಲಂಕಾ ಸಚಿವರೊಬ್ಬರು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ತಿವಿದಿದ್ದಾರೆ.

ಭಾರತದೊಂದಿಗಿನ ಸಂಬಂಧ ಅತ್ಯಂತ ಪ್ರಮುಖ, ಆದರೆ ಆರೋಪ ಸಾಬೀತಾದರೆ... ಕೆನಡಾ ಸಚಿವ ಹೇಳಿದ್ದೇನು?
ಭಾರತ ಮತ್ತು ಕೆನಡಾ ಜೊತೆಗಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ನಡುವಲ್ಲೇ ಭಾರತದೊಂದಿಗಿನ ಸಂಬಂಧ ಅತ್ಯಂತ ಪ್ರಮುಖ ಎಂದು ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್ ಅವರು ಹೇಳಿದ್ದಾರೆ.

ಆನೆ ಜೊತೆ ಇರುವೆ ಕಾದಾಟ: ಕೆನೆಡಾ ಬಗ್ಗೆ ಅಮೆರಿಕಾದ ಮಾಜಿ ರಕ್ಷಣಾ ಅಧಿಕಾರಿ ಗೇಲಿ!
ಭಾರತದ ವಿರುದ್ಧ ಕೆನೆಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪದ ಬೆನ್ನಲ್ಲೇ ಅಮೆರಿಕದ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ದೊಡ್ಡ ಹೇಳಿಕೆ ನೀಡಿದ್ದಾರೆ. ಇರುವೆ ಆನೆಯ ಜೊತೆ ಕಾಳಗಕ್ಕೆ ಮುಂದಾಗಿದೆ ಎಂದು ಹೇಳಿದ್ದಾರೆ. ಇದಲ್ಲದೇ ನಿಜ್ಜರನ್ನು ಲಾಡೆನ್‌ಗೆ ಹೋಲಿಸುವ ಮೂಲಕ ಅಮೆರಿಕ ಕಾರ್ಯದರ್ಶಿ ಬ್ಲಿಂಕನ್‌ಗೆ ಪ್ರತಿಕ್ರಿಯಿಸಿದ್ದಾರೆ.

