journalists

ಊಹಾ- ಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ? ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ತರಾಟೆ
ಊಹಾ-ಪೋಹ ಸುದ್ದಿ ಮಾಡುವುದೇ ವೃತ್ತಿಪರತೆಯಾ ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.

ಗಾಜಾ ಪಟ್ಟಿ: 45 ದಿನಗಳಲ್ಲಿ ಇಸ್ರೇಲ್ ಸೇನೆಯಿಂದ 50 ಮಂದಿ ಪತ್ರಕರ್ತರ ಹತ್ಯೆ!
ಹಮಾಸ್- ಇಸ್ರೆಲ್ ಸಂಘರ್ಷದ ಆರಂಭದಿಂದ ಈ ವರೆಗೂ ಕನಿಷ್ಟ 70 ಮಂದಿ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳು ಹತ್ಯೆಯಾಗಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ ಎಂದು ಪ್ಯಾಲೆಸ್ತೇನ್ ಪತ್ರಕರ್ತರ ಸಿಂಡಿಕೇಟ್ ನ ಡೇಟಾ ಹೇಳಿದೆ.

ಗಾಜಾ ಮೇಲೆ ಭಾರೀ ವಾಯುದಾಳಿ: ಇಂಟರ್ ನೆಟ್, ಮೊಬೈಲ್ ಸೇವೆ ಸ್ಥಗಿತ; ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದ ಇಸ್ರೇಲ್
ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್ ಸೇನೆ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಇದರ ನಡುವಲ್ಲೇ ದಾಳಿ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ಸೇನಾಪಡೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್‌ಗೆ ತಿಳಿಸಿದೆ.

ಚೀನಾದಿಂದ ಕಾನೂನುಬಾಹಿರ ದೇಣಿಗೆ ಸಂಗ್ರಹ ಆರೋಪ: ನ್ಯೂಸ್‌ಕ್ಲಿಕ್‌ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ
ಚೀನಾದಿಂದ ಹಣ ಹೂಡಿಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಡಿಜಿಟಲ್ ಮಾಧ್ಯಮ ಸಂಸ್ಥೆ ಪತ್ರಕರ್ತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ನ್ಯೂಸ್‌ಕ್ಲಿಕ್‌ನ 30ಕ್ಕೂ ಅಧಿಕ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ .

ಪತ್ರಕರ್ತೆಯ ಪ್ರಶ್ನೆಗೆ ಗರಂ ಆದ ಅಣ್ಣಾಮಲೈ; ವೇದಿಕೆಯಲ್ಲೇ ಕಿರಿಕ್
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಪತ್ರಕರ್ತರ ನಡುವಿನ ಗೊಂದಲ ಮತ್ತೆ ಮುಂದುವರೆದಿದ್ದು, ಪತ್ರಕರ್ತೆಯ ಪ್ರಶ್ನೆಗೆ ಗರಂ ಆದ ಅಣ್ಣಾಮಲೈ ವೇದಿಕೆಯಲ್ಲೇ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.

ಪತ್ರಕರ್ತರೊಂದಿಗೆ, ಸಾಮಾಜಿಕ ಅಭಿಪ್ರಾಯಗಳೊಂದಿಗೆ ವ್ಯವಹರಿಸಲು ಅಧಿಕಾರಿಗಳಿಗೆ NHAI ಮಾರ್ಗಸೂಚಿ ಬಿಡುಗಡೆ
ಮಾಧ್ಯಮಗಳು, ಅದರ ಪ್ರತಿನಿಧಿಗಳೊಂದಿಗೆ ವ್ಯವಹರಿಸುವುದಕ್ಕೆ ಎನ್ಎಹೆಚ್ಐ ತನ್ನ ಅಧಿಕಾರಿಗಳಿಗೆ ಕೆಲವು ಸೂಚನೆ, ಸಲಹಾ ಪಟ್ಟಿಗಳನ್ನು ಬಿಡುಗಡೆ ಮಾಡಿದೆ.

ಪತ್ರಕರ್ತರ ಸೋಗಿನಲ್ಲಿದ್ದ ವ್ಯಕ್ತಿಗಳಿಂದ ಅತೀಕ್ ಅಹ್ಮದ್ ಹತ್ಯೆ; ಪತ್ರಕರ್ತರಿಗಾಗಿ ಎಸ್ಒಪಿ ಸಿದ್ಧಪಡಿಸಲು ಕೇಂದ್ರ ನಿರ್ಧಾರ
ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಹತ್ಯೆಗೈದ ಮೂವರು ದಾಳಿಕೋರರು ಮಾಧ್ಯಮದವರಂತೆ ನಟಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಸುರಕ್ಷತೆ ಮತ್ತು ಭದ್ರತೆಗಾಗಿ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಸಿದ್ಧಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಕೊಡಬೇಕೆಂದು ನಾನು ಸೂಚನೆ ನೀಡಿರಲಿಲ್ಲ, ಕಾಂಗ್ರೆಸ್ ನವರಿಗೆ ಮಾತನಾಡಲು ನೈತಿಕ ಹಕ್ಕು ಏನಿದೆ?: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿಗಳ ಗೃಹ ಕಚೇರಿಯಿಂದ ಕೆಲವು ಪತ್ರಕರ್ತರಿಗೆ ದೀಪಾವಳಿ ಉಡುಗೊರೆ ಎಂದು ಸಿಹಿ ತಿನಿಸು ಮತ್ತು ಡ್ರೈ ಫ್ರೂಟ್ಸ್ ಗಳ ಜೊತೆಗೆ ನಗದು ಹಣ ವಿತರಣೆಯಾಗಿರುವ ಬಗ್ಗೆ ಆಡಳಿತ ಪಕ್ಷ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.

ಯಶಸ್ವಿನಿ ಯೋಜನೆ ಪರಿಷ್ಕರಿಸಿ, ಪತ್ರಕರ್ತರನ್ನು ಯೋಜನೆ ವ್ಯಾಪ್ತಿಗೆ ತನ್ನಿ: ಶಿವಾನಂದ ತಗಡೂರು
ರಾಜ್ಯದ ಯಶಸ್ವಿನಿ ಯೋಜನೆ ಸೂಕ್ತವಾಗಿ ಪರಿಷ್ಕೃತವಾಗಿಲ್ಲ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಟುವಾಗಿ ಟೀಕಿಸಿದ್ದಾರೆ.

