Joshimath

ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ: ವಿಪತ್ತು ನಿರ್ವಹಣಾ ಪಡೆ
ಮುಳುಗುತ್ತಿರುವ ಉತ್ತರಾಖಂಡದ ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ ಎಂದು ವಿಪತ್ತು ನಿರ್ವಹಣಾ ಪಡೆ ಮಂಗಳವಾರ ಘೋಷಣೆ ಮಾಡಿದೆ.

ಸಚಿವರ ಸೂಚನೆ ಮೇರೆಗೆ ಜೋಶಿಮಠದ ಉಪಗ್ರಹ ಚಿತ್ರ, ವರದಿ ತೆಗೆದು ಹಾಕಿದ ಇಸ್ರೋ
ರಾಜ್ಯ ಸರ್ಕಾರದ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿರುವ ಬಗ್ಗೆ ಪ್ರಕಟಿಸಿದ್ದ ಉಪಗ್ರಹ ಚಿತ್ರಗಳನ್ನು ಮತ್ತು ವರದಿಯನ್ನು ತೆಗೆದುಹಾಕಿದೆ.

ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಜೋಶಿಮಠದ ಪರಿಸ್ಥಿತಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಎದುರಾಗಲಿದೆ: ತಜ್ಞರ ಎಚ್ಚರಿಕೆ
ಅಭಿವೃದ್ಧಿ ಚಟುವಟಿಕೆಗಳನ್ನು ನಿಲ್ಲಿಸದಿದ್ದಲ್ಲಿ ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸಿದ ದುರಂತವೇ ದುರ್ಬಲವಾದ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಸಂಭವಿಸಲಿದೆ. ನಿರ್ಲಕ್ಷ್ಯ ತೋರದಿರಿ ಎಂದು ತಜ್ಞರು ಹಾಗೂ ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇಡೀ ಜೋಶಿಮಠ ಮುಳುಗುವ ಸಾಧ್ಯತೆ ಎಚ್ಚರಿಕೆ ನೀಡಿದ ಇಸ್ರೋ: ಉಪಗ್ರಹ ಚಿತ್ರ ಬಿಡುಗಡೆ, ಆತಂಕ ಹುಟ್ಟಿಸುತ್ತಿದೆ ಪ್ರಾಥಮಿಕ ವರದಿ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ.

ಮಳೆ ಅಥವಾ ಭೂಕಂಪ ಜೋಶಿಮಠದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು: ಐಐಟಿ ತಜ್ಞರ ಎಚ್ಚರಿಕೆ
ಭೂಕುಸಿತದಿಂದ ಪ್ರಭಾವಿತವಾಗಿರುವ ಜೋಶಿಮಠದ ಸಮೀಪವಿರುವ ಮೇಲ್‌ಸ್ಟ್ರೀಮ್ ಮತ್ತು ಡೌನ್‌ಸ್ಟ್ರೀಮ್ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಕಾನ್ಪುರ ಐಐಟಿ ಜಿಯೋಲಾಜಿಕಲ್ ರಿಸರ್ಚ್‌ನ ತಂಡದ ಮುಖ್ಯಸ್ಥ ಪ್ರೊ.ರಾಜೀವ್ ಸಿನ್ಹಾ ಅವರು, ಒಂದು ವೇಳೆ ಮಳೆ ಅಥವಾ ಭೂಕಂಪ ಉಂಟಾದರೆ ಜೋಶಿಮಠದ ಪರಿಸ್ಥಿತಿಯು ಇನ್ನಷ್ಟು ಹದಗೆಡಬಹುದು ಎಂದು ಹೇಳಿದರು.

ಜೋಶಿಮಠದಲ್ಲಿ ಸಂತ್ರಸ್ತರಾದವರಿಗೆ 1.5 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಉತ್ತರಾಖಂಡ ಸರ್ಕಾರ
ಜೋಶಿಮಠದಲ್ಲಿ ಭೂಮಿ ಕುಸಿದು ಮನೆಗಳು ಮತ್ತು ಇತರೆ ಕಟ್ಟಡಗಳು ಬಿರುಕು ಬಿಟ್ಟ ನಂತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡ ಸಂತ್ರಸ್ತ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ಬುಧವಾರ 1.5 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ಘೋಷಿಸಿದೆ.

ಉತ್ತರಾಖಂಡದ ಜೋಶಿಮಠದ ಬಳಿಕ ಉತ್ತರ ಪ್ರದೇಶದ ಅಲಿಗಢದ ಮನೆಗಳಲ್ಲಿ ಬಿರುಕು, ನಿವಾಸಿಗಳಲ್ಲಿ ಆತಂಕ
ಉತ್ತರಾಖಂಡದ ಜೋಶಿಮಠದ ಬಳಿಕ ಇದೀಗ ಉತ್ತರ ಪ್ರದೇಶದ ಅಲಿಗಢದಲ್ಲಿ ಹಲವಾರು ಮನೆಗಳು ಬಿರುಕು ಬಿಟ್ಟಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಉತ್ತರಾಖಂಡ ಭೂಕುಸಿತ: ಜೋಶಿಮಠದ ಬಳಿಕ ಇದೀಗ ಮತ್ತೊಂದು ಪಟ್ಟಣದಲ್ಲಿ ಭೂಮಿ ಬಿರುಕು
ಭೂಕುಸಿತ ಗಂಭೀರ ಆತಂಕ ಎದುರಿಸುತ್ತಿರುವ ಉತ್ತರಾಖಂಡದಲ್ಲಿ ಮತ್ತೊಂದು ಪಟ್ಟಣದಲ್ಲೂ ಇದೀಗ ಹೊಸದಾಗಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದೆ.

ಮುಳುಗುತ್ತಿದೆ ಜೋಶಿಮಠ: ತುರ್ತು ಅರ್ಜಿ ಪರಿಶೀಲನೆಗೆ ಸುಪ್ರೀಂಕೋರ್ಟ್ ನಕಾರ
ಇತಿಹಾಸ ಪ್ರಸಿದ್ಧ ಉತ್ತರಾಖಂಡ್ನ ಜೋಶಿಮಠ ಅಳವಿನಂಚಿಗೆ ತಲುಪುತ್ತಿದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತುರ್ತು ಪರಿಶೀಲನೆ ನಡೆಸಲು ಸುಪ್ರೀಕೋರ್ಟ್ ಮಂಗಳವಾರ ನಿರಾಕರಿಸಿದೆ.

