Joe Biden

'ಕೋವಾಕ್ಸ್' ಅಭಿಯಾನದಡಿ ಅಮೆರಿಕಾ ಜಾಗತಿಕವಾಗಿ ಹಂಚಲಿರುವ 8 ಕೋಟಿ ಲಸಿಕೆ ಪೈಕಿ ಭಾರತಕ್ಕೂ ಪಾಲು!
ವಿಶ್ವಸಂಸ್ಥೆಯ ಕೋವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಅಭಿಯಾನದ ಅಡಿಯಲ್ಲಿ ಬಳಕೆಯಾಗದೆ ದಾಸ್ತಾನು ಮಾಡಲಾಗಿರುವ 80 ಮಿಲಿಯನ್ ಅಮೆರಿಕಾ ಬೆಂಬಲಿತ ಲಸಿಕೆಗಳ ಹಂಚಿಕೆ ಪೈಕಿ ಭಾರತ ಸಹ ತನ್ನ ಪಾಲನ್ನು ಪಡೆಯಲಿದೆ ಎಂದು ಬೈಡನ್ ಸರ್ಕಾರದ ರಾಜ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಬೈಡನ್ ಸರ್ಕಾರದ 25 ಮಿಲಿಯನ್ ಕೋವಿಡ್-19 ಲಸಿಕೆ ಹಂಚಿಕೆ ಯೋಜನೆಯಲ್ಲಿ ಭಾರತ ಪ್ರಮುಖ ರಾಷ್ಟ್ರ: ರಾಯಭಾರಿ
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದೂರವಾಣಿ ಸಂಭಾಷಣೆ ಕುರಿತು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

'ಕೊರೋನಾ ವೈರಸ್ ಮೂಲ ಪತ್ತೆ ಮಾಡಿ': ಚೀನಾ ವಿರುದ್ಧದ ಅಮೆರಿಕ ನಿಲುವಿಗೆ ಭಾರತದ ಬಳಿಕ ಬ್ರಿಟನ್ ಬೆಂಬಲ
ಕೊರೋನಾ ವೈರಸ್ ವಿಚಾರವಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಪದೇ ಪದೇ ಹಿನ್ನಡೆಯಾಗುತ್ತಿದ್ದು, ಕೋವಿಡ್-19 ವೈರಸ್ ಮೂಲ ಪತ್ತೆ ಮಾಡುವ ವಿಚಾರದಲ್ಲಿ ಅಮೆರಿಕ ತಳೆದಿರುವ ನಿಲುವಿಗೆ ಭಾರತ ಬೆಂಬಲ ನೀಡಿದ ಬೆನ್ನಲ್ಲೇ ಬ್ರಿಟನ್ ಕೂಡ ಈ ಕುರಿತು ತನ್ನ ಧನಿ ಎತ್ತಿದೆ.

ಚೀನಾಗೆ ಜಾಗತಿಕ ಹಿನ್ನಡೆ: ಕೊರೋನಾ ವೈರಸ್ ಮೂಲ ಹುಡುಕುವ ಅಮೆರಿಕದ ನಿರ್ಧಾರಕ್ಕೆ ಭಾರತ ಬೆಂಬಲ
ಚೀನಾಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿನ್ನಡೆಯಾಗಿದ್ದು, ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲವನ್ನು ಹುಡುಕುವ ಅಮೆರಿಕದ ಪ್ರಯತ್ನಕ್ಕೆ ಭಾರತ ಬೆಂಬಲ ಸೂಚಿಸಿದೆ.

ಕೋವಿಡ್ ವೈರಸ್ ನ ಮೂಲದ ಬಗ್ಗೆ 90 ದಿನಗಳಲ್ಲಿ ಮಾಹಿತಿ ನೀಡಿ: ಗುಪ್ತಚರ ಸಂಸ್ಥೆಗಳಿಗೆ ಅಧ್ಯಕ್ಷ ಜೋ ಬೈಡನ್ ಸೂಚನೆ
ಕೊರೋನಾ ವೈರಸ್ ತವರು ಚೀನಾಗೆ ಮತ್ತೆ ಹೊಸ ತಲೆನೋವು ಆರಂಭವಾಗಿದ್ದು, 90 ದಿನಗಳಲ್ಲಿ ಕೋವಿಡ್ ವೈರಸ್ ನ ಮೂಲದ ಬಗ್ಗೆ ಮಾಹಿತಿ ನೀಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.

ತೆರಿಗೆ ಪಾವತಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದಾಯ ಇಳಿಕೆ!
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಆಮ್ಲಜನಕ ಪೂರೈಕೆ ಸರಪಳಿ ವಿಸ್ತರಿಣೆಗೆ ಜೋ ಬೈಡನ್ ಆಡಳಿತ ಕಾರ್ಯಪ್ರವೃತ್ತ: ಯುಎಸ್‌ಐಐಡಿ
ಭಾರತಕ್ಕೆ ತೀವ್ರ ಅಗತ್ಯವಿರುವ ಜೀವ ಉಳಿಸುವ ಆಮ್ಲಜನಕವನ್ನು ಪೂರೈಸುವ ಸಲುವಾಗಿ ಆಮ್ಲಜನಕ ಪೂರೈಕೆ ಸರಪಳಿಯನ್ನು ವಿಸ್ತರಿಸಲು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಆಡಳಿತ ಕಾರ್ಯನಿರ್ವಹಿಸುತ್ತಿದೆ ಎಂದು ಯುಎಸ್ಎಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಸರ್ಕಾರದ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯರು ನೇಮಕ
ಅಮೆರಿಕ ಸರ್ಕಾರದಲ್ಲಿ ಎರಡು ಮಹತ್ವದ ಹುದ್ದೆಗಳಿಗೆ ಇನ್ನೂ ಇಬ್ಬರು ಭಾರತೀಯ-ಅಮೆರಿಕನ್ನರನ್ನು ಆಯ್ಕೆ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡೆನ್ ಬುಧವಾರ ಪ್ರಕಟಿಸಿದ್ದಾರೆ.

ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಜೋ- ಬೈಡನ್ ಸಜ್ಜು!
ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿಯ 20 ನೇ ವಾರ್ಷಿಕೋತ್ಸವಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಜ್ಜಾಗಿದ್ದಾರೆ.

