JNU Violence

ರಾಜಕೀಯ ಸ್ವಹಿತಾಸಕ್ತಿ ಸಾಧನೆಗಾಗಿ ವಿದ್ಯಾರ್ಥಿಗಳ ಬಳಕೆ ಅಕ್ಷಮ್ಯ: ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಟೀಕೆ
ರಾಜಕೀಯ ಸ್ವಹಿತಾಸಕ್ತಿ ಸಾಧನೆಗಾಗಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.

ಜೆಎನ್ ಯು ವಿದ್ಯಾರ್ಥಿ ಸಂಘಟನೆ, ಎಬಿವಿಪಿ ನಡುವೆ ಘರ್ಷಣೆ: ಯೋಗೇಂದ್ರ ಯಾದವ್ ಮೇಲೆ ಹಲ್ಲೆ
ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಸ್ವರಾಜ್ ಅಭಿಯಾನ ಮುಖ್ಯಸ್ಥ ಯೋಗೇಂದ್ರ ಯಾದವ್ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ

ಜೆಎನ್ ಯುನಲ್ಲಿ ದಾಂಧಲೆ: ವಿದ್ಯಾರ್ಥಿಗಳನ್ನು ಎಡಪಂಥಿಯರೇ ಎಂದು ಕೇಳಿದ ಮುಸುಕುಧಾರಿಗಳು
ರಾಷ್ಟ್ರರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ರಾತ್ರಿ ನಡೆದ ದಾಂಧಲೆ ವೇಳೆಯಲ್ಲಿ ಮುಸುಕುಧಾರಿ ಪುಂಡರು, ಸಬರಮತಿ ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳನ್ನು ನೀವು ಎಡಪಂಥಿಯರೇ ಎಂದು ಕೇಳಿದ್ದಾರೆ.

ದೆಹಲಿ: ಮಾರಕಾಸ್ತ್ರಗಳೊಂದಿಗೆ ವಿದ್ಯಾರ್ಥಿಗಳನ್ನುಅಟ್ಟಾಡಿಸಿ ಹಲ್ಲೆಗೈದ ಮುಸುಕುಧಾರಿ ಪುಂಡರು: ವಿಡಿಯೋ
ಮಾಸ್ಕ್ ಧರಿಸಿದ ಗುಂಪು ಕೈಯಲ್ಲಿ ದೊಣೆ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಟ್ಟಾಡಿಸಿ ಹಲ್ಲೆ ಮಾಡಿದೆ. ಅಲ್ಲದೇ ವಿವಿಯಲ್ಲಿನ ಸಬರಮತಿ ಹಾಸ್ಟೆಲ್ ಗಾಜುಗಳು, ಪೀಠೋಪಕರಣಗಳನ್ನು ಪುಡಿ ಪುಡಿಮಾಡಿದೆ.

ಜೆಎನ್ ಯುನಲ್ಲಿ ಮಾರಾಮಾರಿ: ಭೀತಿಯನ್ನು ಹರಡುತ್ತಿರುವ ಮೋದಿ-ಶಾ ಗೂಂಡಾಗಳು-ಪ್ರಿಯಾಂಕಾ
ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪೊಂದು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದು, ಕ್ಯಾಂಪಸ್ ಆಸ್ತಿ ಪಾಸ್ತಿ ಹಾಳು ಮಾಡಿದ್ದಾರೆ.

