ಸಿನಿಮಾ ಸುದ್ದಿಸಂಜಯ್ ದತ್ ಹುಟ್ಟುಹಬ್ಬಕ್ಕೆ 'ಕೆಜಿಎಫ್-2' ಚಿತ್ರತಂಡದಿಂದ ವಿಶೇಷ ಉಡುಗೊರೆ?
ಕೆಜಿಎಫ್-ಚಾಪ್ಟರ್ 2 ತಂಡ ಸಂಜಯ್ ದತ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆಯೇ? ಈ ತಿಂಗಳ 29ಕ್ಕೆ 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಂಜಯ್ ದತ್ ನ ಬರ್ತ್ ಡೇಗೆ ಚಿತ್ರತಂಡ ಏನು ಮಾಡಲಿದೆ, ತಮ್ಮ 'ಖಳನಾಯಕ' ಹುಟ್ಟುಹಬ್ಬ ಹೇಗಿರಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.