ಸಿನಿಮಾ ಸುದ್ದಿ

ಸಂಜಯ್ ದತ್ ಹುಟ್ಟುಹಬ್ಬಕ್ಕೆ 'ಕೆಜಿಎಫ್-2' ಚಿತ್ರತಂಡದಿಂದ ವಿಶೇಷ ಉಡುಗೊರೆ?

ಕೆಜಿಎಫ್-ಚಾಪ್ಟರ್ 2 ತಂಡ ಸಂಜಯ್ ದತ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆಯೇ? ಈ ತಿಂಗಳ 29ಕ್ಕೆ 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಂಜಯ್ ದತ್ ನ ಬರ್ತ್ ಡೇಗೆ ಚಿತ್ರತಂಡ ಏನು ಮಾಡಲಿದೆ, ತಮ್ಮ 'ಖಳನಾಯಕ' ಹುಟ್ಟುಹಬ್ಬ ಹೇಗಿರಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಸಂಜಯ್ ದತ್ ಹುಟ್ಟುಹಬ್ಬಕ್ಕೆ 'ಕೆಜಿಎಫ್-2' ಚಿತ್ರತಂಡದಿಂದ ವಿಶೇಷ ಉಡುಗೊರೆ?
ಸಂಜಯ್ ದತ್, ಯಶ್(ಸಂಗ್ರಹ ಚಿತ್ರ)
Published On :

ಕೆಜಿಎಫ್-ಚಾಪ್ಟರ್ 2 ತಂಡ ಸಂಜಯ್ ದತ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆಯೇ? ಈ ತಿಂಗಳ 29ಕ್ಕೆ 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಂಜಯ್ ದತ್ ನ ಬರ್ತ್ ಡೇಗೆ ಚಿತ್ರತಂಡ ಏನು ಮಾಡಲಿದೆ, ತಮ್ಮ 'ಖಳನಾಯಕ' ಹುಟ್ಟುಹಬ್ಬ ಹೇಗಿರಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ನಾಯಕ ನಟ ಯಶ್ ಅವರ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಮುಂದುವರಿದ ಭಾಗ ಕೆಜಿಎಫ್-2 ಮೂಲಕ ಬಾಲಿವುಡ್ ನ ಹಿರಿಯ ನಟ ಸಂಜಯ್ ದತ್ ದಕ್ಷಿಣ ಭಾರತದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.ನಾಯಕನಿಗೆ ಮುಖ್ಯ ಖಳ ನಾಯಕನ ಪಾತ್ರ.

ಈ ಸಂದರ್ಭದಲ್ಲಿ ಸಂಜಯ್ ದತ್ ಬರ್ತ್ ಡೇಗೆ ವಿಶಿಷ್ಟವಾಗಿ ಹಾರೈಸಲು ಚಿತ್ರತಂಡ ಯೋಚನೆ ಮಾಡುತ್ತಿದೆ. ಆದರೆ ಅದು ಟೀಸರ್, ಟ್ರೈಲರ್ ಅಥವಾ ಪಾತ್ರದ ಪೋಸ್ಟರ್ ಮೂಲಕವೇ ಎಂದು ಬಹಿರಂಗಪಡಿಸಿಲ್ಲ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಕೆಜಿಎಫ್-2 ಚಿತ್ರದಲ್ಲಿ ಸಂಜಯ್ ದತ್ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಡಿ ತಯಾರಾಗುತ್ತಿರುವ ಚಿತ್ರದ ಇನ್ನು 25 ದಿನದ ಶೂಟಿಂಗ್ ಬಾಕಿಯಿದೆ. ಲಾಕ್ ಡೌನ್ ನಿಂದಾಗಿ ಕೆಜಿಎಫ್ 2 ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಈ ಹಿಂದೆ ನಿಗದಿಪಡಿಸಿದ ಪ್ರಕಾರ, ಅಕ್ಟೋಬರ್ 23ರಂದು ತೆರೆಗೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ. ಕೆಜಿಎಫ್ 2ನಲ್ಲಿ ಶ್ರೀನಿಧಿ ಶೆಟ್ಟಿ, ಬಾಲಿವುಡ್ ನಟಿ ರವೀನಾ ಟಂಡನ್ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಕಲಾ ವಿಭಾಗದ ಉಸ್ತುವಾರಿ ಹೊತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.