Jawaharlal Nehru

ವಿಭಜನೆಯ ಪಿತಾಮಹ ನೆಹರು ಎಂದ ಬಿಜೆಪಿ, ನೆಹರೂ ಜೈಲಿಗೆ ಹೋಗಿದ್ದು ಹೋರಾಟದಿಂದ.. ಅಮಿತ್ ಶಾ ಜೈಲಿಗೆ ಹೋಗಿದ್ದೇಕೆ?; ಕಾಂಗ್ರೆಸ್ ತೀವ್ರ ಟೀಕೆ
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭಾರತ ವಿಭಜನೆಯ ಪಿತಾಮಹ ಎಂದು ಕರೆದು ಕರ್ನಾಟಕದ ಕೆಲವು ಸ್ಥಳೀಯ ದಿನಪತ್ರಿಕೆಗಳಲ್ಲಿ ಮುಖಪುಟ ಜಾಹೀರಾತು ಪ್ರಕಟಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ.

ಆ.14 ದೇಶ 'ವಿಭಜನೆಯ ಕರಾಳ ದಿನ' ಎಂದು ಬಿಜೆಪಿ ವಿಡಿಯೊ ಬಿಡುಗಡೆ: ಕಾಂಗ್ರೆಸ್ ತಿರುಗೇಟು
ಇಂದು ಆಗಸ್ಟ್ 14 ಭಾರತ-ಪಾಕಿಸ್ತಾನ ವಿಭಜನೆಗೊಂಡ ದಿನವನ್ನು ವಿಭಜನೆ ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ನೆಹರು, ವಾಜಪೇಯಿಯವರ ಮೂರ್ಖತನದಿಂದ ಭಾರತೀಯರು ಟಿಬೆಟ್, ತೈವಾನ್ ಅನ್ನು ಚೀನಾಕ್ಕೆ ಬಿಟ್ಟುಕೊಟ್ಟರು: ಸುಬ್ರಮಣಿಯನ್ ಸ್ವಾಮಿ
ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ಭಾರತೀಯರು ಟಿಬೆಟ್ ಮತ್ತು ತೈವಾನ್ ಅನ್ನು ಚೀನಾದ ಭಾಗವೆಂದು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬುಧವಾರ ಟೀಕಿಸಿದ್ದಾರೆ.

ನೆಹರೂ ಶ್ರೇಷ್ಠ ನಾಯಕ ಎಂದ ಸಿಎಂ ಬೊಮ್ಮಾಯಿ. ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಮೂರು ದಿನ ಭಾರೀ ಮಳೆ: ಕನ್ನಡಪ್ರಭ
ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ತುಂತುರು ಮಳೆಯ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಗೋಡೆ ಕುಸಿತಗೊಂಡು ಚನ್ನಕೇಶವ ಮತ್ತು ಮೂರು ತಿಂಗಳ ಸೌಮ್ಯ ಸಾವನ್ನಪ್ಪಿದ್ದಾರೆ. ಇನ್ನು ಮಂಡ್ಯದಲ್ಲಿ 10 ವರ್ಷದ ಬಾಲಕ ಗೋಡೆ ಕುಸಿತಕ್ಕೆ ಬಲಿಯಾಗಿದ್ದಾನೆ.

ಗಾಂಧೀಜಿ ಎಂದಿಗೂ ಟೊಪ್ಪಿ ಧರಿಸುತ್ತಲೇ ಇರಲಿಲ್ಲ, ಅವರ ಹೆಸರಲ್ಲಿ ನೆಹರೂ ಧರಿಸುತ್ತಿದ್ದರು: ಬಿಜೆಪಿ ನಾಯಕನ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಯಾವತ್ತಿಗೂ ಟೊಪ್ಪಿ ಧರಿಸುತ್ತಿರಲಿಲ್ಲ, ಅವರ ಹೆಸರಿನಲ್ಲಿ ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂ ಧರಿಸಿ ಅದನ್ನು ಮಹಾತ್ಮಾ ಗಾಂಧಿ ಟೋಪಿ ಎಂದು ಕರೆದರು ಎಂದು ಗುಜರಾತ್ ನ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ನೀಡಿದ್ದ ಹೇಳಿಕೆಯನ್ನು ಅಲ್ಲಿನ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಸಮರ್ಥಿಸಿಕೊಂಡಿದ್ದಾರೆ.

ಇತಿಹಾಸದಿಂದ ನೆಹರೂ ಹೆಸರು ತೆಗೆಯುವುದು, ಫುಟ್ಬಾಲ್‌ನಿಂದ ರೊನಾಲ್ಡೊರನ್ನು ಕೈಬಿಟ್ಟಂತೆ: ಪಿ ಚಿದಂಬರಂ
ಇತಿಹಾಸದಿಂದ ನೆಹರೂ ಹೆಸರು ತೆಗೆಯುವುದು, ಫುಟ್ಬಾಲ್‌ನಿಂದ ರೊನಾಲ್ಡೊರನ್ನು ಕೈಬಿಟ್ಟಂತೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

'ಹೇಡಿ' ನೆಹರೂರವರಿಂದಾಗಿ ಭಾರತ ಹಿಂದೂ ರಾಷ್ಟ್ರ ಎಂದು ಘೋಷಣೆಯಾಗಲಿಲ್ಲ: ಬಿಜೆಪಿ ಶಾಸಕ
ಜವಹರಲಾಲ್ ಅವರ ಹೇಡಿ ನಾಯಕತ್ವದಿಂದಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ.

ನೆಹರೂ ಅವರ ತತ್ವ, ಸಿದ್ದಾಂತ, ದೂರದೃಷ್ಟಿಯೇ ಸ್ವಾತಂತ್ರ್ಯ ಭಾರತದ ಪ್ರಗತಿಯ ಬುನಾದಿ- ಡಿ. ಕೆ. ಶಿವಕುಮಾರ್
ಪಂಡಿತ್ ಜವಾಹರಲಾಲ್ ನೆಹರೂ ಅವರ ತತ್ವ ಸಿದ್ಧಾಂತಗಳು, ದೂರದೃಷ್ಟಿಯೇ ಸ್ವತಂತ್ರ ಭಾರತದ ಪ್ರಗತಿ ಇತಿಹಾಸದ ಭದ್ರ ಬುನಾದಿ. ಇದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮ ಜವಾಬ್ದಾರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಚಾಚಾ ನೆಹರು 131ನೇ ಜನ್ಮದಿನ: ದೇಶದ ಮೊದಲ ಪ್ರಧಾನಿ ಸ್ಮರಿಸಿದ ಪ್ರಧಾನಿ ಮೋದಿ
ದೇಶದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು 131ನೇ ಜನ್ಮದಿನ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.

