Jaipura

ಸರ್ಕಾರಿ ಕೆಲಸ, ಕುಟುಂಬದ ಆಸ್ತಿ ಮೇಲೆ ಕಣ್ಣು: ಹೆತ್ತ ತಾಯಿಯನ್ನೇ ಕೊಂದ ಕಾನೂನು ವಿದ್ಯಾರ್ಥಿನಿ ಈಗ ಪೊಲೀಸರ ವಶಕ್ಕೆ!
ಜುಲೈ 3 ರಂದು ಜೈಪುರದಲ್ಲಿ ನೀರಜ್ ಶರ್ಮಾ ಅವರಿಗೆ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅದನ್ನು ಮಾಡಿಸಿದ್ದು, ತಾನು ಹೆತ್ತು ಹೊತ್ತು ಸಾಕಿದ ಮಗಳೇ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ರಾಜಸ್ಥಾನ ಸಂಪುಟ ಪುನರ್ ರಚನೆ ಕುರಿತ ವಿವಾದದ ನಡುವೆ ಮುಖ್ಯಮಂತ್ರಿ ಗೆಹ್ಲೋಟ್ ಭೇಟಿಯಾದ ಡಿಕೆ ಶಿವಕುಮಾರ್!
ಸಂಪುಟ ಪುನರ್ ಮುಂದಿರುವಂತೆಯೇ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ವಾರಾಂತ್ಯದಲ್ಲಿ ಹರಿಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜಾ ಬೇಟೆ ನಂತರ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮಂಗಳವಾರ ಭೇಟಿಯಾದರು.

ರಾಜಸ್ಥಾನದ ಎಲ್ಲಾ ನಗರಗಳಲ್ಲಿ ಶುಕ್ರವಾರದಿಂದ 12 ಗಂಟೆ ಕರ್ಫ್ಯೂ ಜಾರಿ
ಆತಂಕಕಾರಿಯಾಗಿ ಹೆಚ್ಚಾಗಿರುತ್ತಿರುವ ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟುವ ಕ್ರಮವಾಗಿ ರಾಜಸ್ಥಾನದ ಎಲ್ಲಾ ನಗರಗಳಲ್ಲಿ ಶುಕ್ರವಾರ ಸಂಜೆ ಆರು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೂ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಈ ಮಾಸಾಂತ್ಯದವರೆಗೂ ಈ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಜೈಪುರ ಆಸ್ಪತ್ರೆಯಿಂದ 320 ಡೋಸ್ ಕೋವಾಕ್ಸಿನ್ ಲಸಿಕೆ ನಾಪತ್ತೆ: ಪೊಲೀಸ್ ಕೇಸ್ ದಾಖಲು
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 350 ಡೋಸ್ ಕೋವಾಕ್ಸಿನ್ ಲಸಿಕೆ ರಾಜಸ್ಥಾನದ ಜೈಪುರದಲ್ಲಿನ ಸರ್ಕಾರಿ ಆಸ್ಪತ್ರೆಯೊಂದರ ಕೋಲ್ಡ್ ಸ್ಟೋರೇಜ್ ನಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಸಚಿನ್ ಪೈಲಟ್ ಮಾಧ್ಯಮ ಮ್ಯಾನೇಜರ್, ಪತ್ರಕರ್ತನ ವಿರುದ್ಧದ ಕೇಸ್ ಮುಚ್ಚಿಹಾಕಿದ ಪೊಲೀಸರು
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಸಚಿನ್ ಪೈಲಟ್ ಮಾಧ್ಯಮ ಮ್ಯಾನೇಜರ್ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತನ ವಿರುದ್ಧದ ಕೇಸ್ ನ್ನು ಪೊಲೀಸರು ಮುಚ್ಚಿ ಹಾಕಿದ್ದಾರೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಧಾರ ಇಲ್ಲ ಎಂದು ಅಂತಿಮ ವರದಿಯನ್ನು ಸಲ್ಲಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೂತನ ಕೃಷಿ ಕಾನೂನು ಹಿಂತೆಗೆದುಕೊಳ್ಳದಿದ್ದರೆ ಎನ್ಡಿಎಗೆ ನೀಡಿರುವ ಬೆಂಬಲ ಮರು ಪರಿಶೀಲನೆ- ಹನುಮಾನ್ ಬೆನಿವಾಲ್
ನೂತನ ಕೃಷಿ ಸುಧಾರಣಾ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಕೇಂದ್ರಕ್ಕೆ ತಮ್ಮ ಪಕ್ಷ ನೀಡಿರುವ ಬೆಂಬಲವನ್ನು ಮರು ಪರಿಶೀಲಿಸಲಾಗುವುದು ಎಂದು ಎನ್ ಡಿಎ ಅಂಗಪಕ್ಷ ಆರ್ ಎಲ್ ಪಿಯ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಮಧ್ಯೆ ಪಾಕ್ ನಲ್ಲಿ ಸಿಲುಕಿದ ತಾಯಿ: ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಭಾರತೀಯ ಮಕ್ಕಳು!
ಕೋವಿಡ್ ಬಿಕ್ಕಟಿನ ಮಧ್ಯೆ ತಾಯಿ ಪಾಕಿಸ್ತಾನದಲ್ಲಿ ಸಿಲುಕಿರುವುದರಿಂದ ಭಾರತದಲ್ಲಿರುವ ಆರು ವರ್ಷದ ಕಾಂಚನಾ ಹಾಗೂ ಆಕೆಯ ಇಬ್ಬರು ಸಹೋದರರು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಶಾಕಿಂಗ್ ವಿಡಿಯೋ: ಹಸಿವು ತಾಳಲಾರದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನು ತಿಂದ ವ್ಯಕ್ತಿ!
ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶ ಸಂಕಷ್ಟಕ್ಕೆ ಸಿಲುಕಿತ್ತು. ಅನ್ನ ಆಹಾರವಿಲ್ಲದೆ ಜನರು ಕಂಗೆಡುವಂತಾಗಿತ್ತು.

ನಾಲ್ವರು ಕೊರೋನಾ ವೈರಸ್ ರೋಗಿಗಳ ಪೈಕಿ ಮೂವರನ್ನು ಗುಣಪಡಿಸಿದ ಜೈಪುರ ವೈದ್ಯರು!
ದೇಶದಲ್ಲಿ 110 ಜನರಲ್ಲಿ ಕೊರೋನಾ ಪಾಸಿಟಿವ್ ದೃಢಪಡುವುದರೊಂದಿಗೆ ಈ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಜೈಪುರದಿಂದ ಒಂದು ಒಳ್ಳೆಯ ಸುದ್ದಿ ಹೊರಬಂದಿದೆ.

