Jagadish Shettar

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಶೆಟ್ಟರ್ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ
ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಂತೆಯೇ, ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಯಾಗಿದೆ. ನಿನ್ನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜಗದೀಶ್ ಶೆಟ್ಟರ್ ಸೇರ್ಪಡೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಶಕ್ತಿ ಸಿಗಲಿದೆ, ಚುನಾವಣೆಯಲ್ಲಿ 150 ಸ್ಥಾನ ಸಿಗುವುದು ಖಾತ್ರಿ: ಮಲ್ಲಿಕಾರ್ಜುನ ಖರ್ಗೆ
ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ ಗೆ ವಿಶೇಷ ಹೆಚ್ಚಿನ ಶಕ್ತಿ ಬಲ ನೀಡಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ವಿಶೇಷ ಶಕ್ತಿ ಬರಲಿದೆ. ನಮ್ಮ ಪಕ್ಷದ ತತ್ವ, ಸಿದ್ಧಾಂತಗಳನ್ನು ಅರಿತುಕೊಂಡು ಒಪ್ಪಿಕೊಂಡು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ ಎಂದು ಕಾಂ

ಜಗದೀಶ್ ಶೆಟ್ಟರ್ ಗೆ ನಾವು ಯಾವ ಆಫರ್ ಕೊಟ್ಟಿಲ್ಲ, ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ: ಡಿ ಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ಅವರಿಗೆ ನಾವು ಯಾವುದೇ ಆಫರ್ ಕೊಟ್ಟಿಲ್ಲ, ಅವರು ಕೂಡ ಏನೂ ಬೇಡಿಕೆಯಿಟ್ಟಿಲ್ಲ, ಬಿಜೆಪಿಯಲ್ಲಿ ಅವಮಾನವಾಗಿ ನೊಂದು ಅವರು ಪಕ್ಷ ತ್ಯಜಿಸಿದ್ದಾರೆ, ಇಂದು ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಮಾತನಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಾಳೆ ಬೆಳಗ್ಗೆ ರಾಹುಲ್ ಗಾಂಧಿ, ಖರ್ಗೆ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ನಂತರ ಕೇಸರಿ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಕಾಂಗ್ರೆಸ್ ನಾಯಕ...

ಕರ್ನಾಟಕದಲ್ಲಿ ಬಿಜೆಪಿ 'ಇಸ್ಪೀಟ್ ಎಲೆ'ಯಂತೆ ಬೀಳುತ್ತಿದೆ: ಕಾಂಗ್ರೆಸ್
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷ ಸೇರಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಇಸ್ಪೀಟ್ ಎಲೆಯಂತೆ ಬೀಳುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಕಂಟ್ರೋಲ್ನಲ್ಲಿ ಇದೆ; ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಸೇರ್ಪಡೆ: ಜಗದೀಶ್ ಶೆಟ್ಟರ್
ಕರ್ನಾಟಕದ ಕೆಲವು ನಾಯಕರಿಂದ ನನಗೆ ತೊಂದರೆಯಾಗಿದೆ, ಅವಮಾನವಾಗಿದೆ. ರಾಜ್ಯ ಬಿಜೆಪಿಯಲ್ಲಿ ಪರಿಸ್ಥಿತಿ ಸರಿಯಿಲ್ಲ, ಆ ಪಕ್ಷದಲ್ಲಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸತ್ತು ಇವತ್ತು ಹೊರಬಂದು ಸಂತೋಷ, ಸಮಾಧಾನದಿಂದ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ- ಕಾಂಗ್ರೆಸ್
ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಕುರಿತು ಯಡಿಯೂರಪ್ಪ ಹೇಳಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಶೆಟ್ಟರ್, ಸವದಿಯನ್ನು ಈ ರಾಜ್ಯದ ಜನ ಕ್ಷಮಿಸುವುದಿಲ್ಲ, ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಅವರಿಗೆ ಸ್ವಾಗತ: ಬಿಎಸ್ ಯಡಿಯೂರಪ್ಪ
ಪಕ್ಷ ಹಲವು ಅವಕಾಶಗಳು, ಸ್ಥಾನಮಾನಗಳನ್ನು ನೀಡಿದ್ದರೂ ಇಂದು ಪಕ್ಷಕ್ಕೆ ಮರ್ಯಾದೆ, ಗೌರವ ನೀಡದೆ, ಸಿದ್ಧಾಂತವನ್ನು ಮರೆತು ಹೋಗಿರುವುದು ಅಕ್ಷಮ್ಯ ಅಪರಾಧ, ಈ ನಾಡಿನ ಜನತೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಯವರನ್ನು ಮರೆಯುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಾನಾಗಿ ಬಿಜೆಪಿಯನ್ನು ಬಿಟ್ಟಿಲ್ಲ, ನಮ್ಮನ್ನು ಮನೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ: ಜಗದೀಶ್ ಶೆಟ್ಟರ್
ನಾನಾಗಿ ಬಿಜೆಪಿಯನ್ನು ಬಿಟ್ಟಿಲ್ಲ, ನಮ್ಮನ್ನು ಮನೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಇದು ಭಾರತೀಯ ಜನತಾ ಪಾರ್ಟಿಯ ಶಾಸಕ ಸ್ಥಾನ ಮತ್ತು ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಜಗದೀಶ್ ಶೆಟ್ಟರ್ ಕೊಟ್ಟ ಪ್ರತಿಕ್ರಿಯೆ.

