israel

Israel-Gaza Conflict: 4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್, ಕದನ ವಿರಾಮ 2 ದಿನ ವಿಸ್ತರಣೆ
ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

Israel-Gaza Conflict: 3ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಕದನ ವಿರಾಮ ಒಪ್ಪಂದದಂತೆ 3ನೇ ಹಂತದಲ್ಲಿ 14 ಇಸ್ರೇಲಿ ಮತ್ತು ಅಮೆರಿಕಾದ ಓರ್ವ ಪ್ರಜೆ ಸೇರಿ ಒಟ್ಟು 17 ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

Israel-Gaza Conflict: 2ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ 13 ಇಸ್ರೇಲಿ ಮತ್ತು 4 ಥಾಯ್ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಒಟ್ಟು 17 ಮಂದಿ ಒತ್ತೆಯಾಳುಗಳು ಭಾನುವಾರ ತಮ್ಮ ಕುಟುಂಬ ಸೇರಿಕೊಂಡಿವೆ.

ಗಾಜಾದ ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕರನ್ನು ಇಸ್ರೇಲ್ ಬಂಧಿಸಿದೆ: ಆಸ್ಪತ್ರೆ ವೈದ್ಯ
ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದ ನಿರ್ದೇಶಕರು ಮತ್ತು ಇತರ ಹಲವಾರು ವೈದ್ಯಕೀಯ ಸಿಬ್ಬಂದಿಯನ್ನು ಇಸ್ರೇಲಿ ಪಡೆಗಳು ಗುರುವಾರ ಬಂಧಿಸಿವೆ ಎಂದು ಅಲ್-ಶಿಫಾ ಆಸ್ಪತ್ರೆಯ ವೈದ್ಯರೊಬ್ಬರು ಎಎಫ್ಪಿಗೆ ತಿಳಿಸಿದ್ದಾರೆ.

ಗಾಜಾ ಅಲ್ ಶಿಫಾ ಆಸ್ಪತ್ರೆ ಉಗ್ರರ ಅಡಗುದಾಣ ಎಂಬ ಆರೋಪಕ್ಕೆ ಪುರಾವೆ ನೀಡಿದ ಇಸ್ರೇಲ್!
ಗಾಜಾದ ಅಲ್ ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಹಮಾಸ್ ಉಗ್ರರ ಅಡಗುದಾಣ ಎಂದು ಆರೋಪಿಸಿತ್ತು. ಈಗ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಯಹೂದಿಗಳ ರಾಷ್ಟ್ರ ಬಹಿರಂಗಗೊಳಿಸಿದೆ.

ಇಸ್ರೇಲ್-ಹಮಾಸ್ ನಡುವೆ ಮಧ್ಯಸ್ಥಿಕೆ ದೃಢಪಡಿಸಿದ ಕತಾರ್; ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಅಮೆರಿಕಾ ಸ್ವಾಗತ
ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆ ಕುರಿತ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವುದನ್ನು ಕತಾರ್ ದೃಢಪಡಿಸಿದ್ದು, ಒತ್ತೆಯಾಳುಗಳ ಬಿಡುಗಡೆ ಕುರಿತ ಹಮಾಸ್-ಇಸ್ರೇಲ್ ಒಪ್ಪಂದವನ್ನು ಅಮೆರಿಕಾ ಸ್ವಾಗತಿಸಿದೆ.

ಇಸ್ರೇಲ್-ಹಮಾಸ್ ಯುದ್ಧ: ಮೆತ್ತಗಾದ ಉಗ್ರರಿಂದ 50 ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ, 4 ದಿನ ಕದನ ವಿರಾಮ!
ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಒಪ್ಪಿಗೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮವನ್ನು ಇಸ್ರೇಲ್ ಅನುಮೋದಿಸಿದೆ.

26/11ರ ಮುಂಬೈ ದಾಳಿಗೆ 15 ವರ್ಷ: ಲಷ್ಕರ್-ಎ-ತಯ್ಬಾವನ್ನು 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದ ಇಸ್ರೇಲ್
ಇಸ್ರೇಲಿಯನ್ನರು ಸೇರಿದಂತೆ 160ಕ್ಕೂ ಹೆಚ್ಚು ರಾಷ್ಟ್ರಗಳ ಜನರ ಸಾವಿಗೆ ಕಾರಣವಾದ ಮುಂಬೈ ಮೇಲಿನ 26/11ರ ಭಯೋತ್ಪಾದಕ ದಾಳಿಗೆ 15 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಮಂಗಳವಾರ ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಬಾವನ್ನು 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದೆ.

ಭಾರತಕ್ಕೆ ಬರುತ್ತಿದ್ದ ಹಡಗು ಅಪಹರಣ: ವಿಡಿಯೋ ಬಿಡುಗಡೆ ಮಾಡಿದ ಯೆಮೆನ್ನ ಹೌತಿ ಬಂಡುಕೋರರು
ಭಾರತಕ್ಕೆ ಬರುತ್ತಿದ್ದ ಇಸ್ರೇಲ್ ಮೂಲದ "ಗ್ಯಾಲಕ್ಸಿ ಲೀಡರ್" ಹಡಗಿನ ಅಪಹರಣದ ಕ್ಷಣಗಳ ವಿಡಿಯೋವನ್ನು ಯೆಮೆನ್ ಮೂಲದ ಹೌತಿ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

