ISKCON

ಭಾರತದ ಅತಿದೊಡ್ಡ ವಂಚಕ ಸಂಸ್ಥೆ: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್
ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಇಸ್ಕಾನ್ ಮಾಡುತ್ತಿದೆ ಎಂದಿದ್ದ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿರುವುದಾಗಿ ಇಸ್ಕಾನ್ ಶುಕ್ರವಾರ ತಿಳಿಸಿದೆ.

ಗೋವುಗಳನ್ನು ಕಸಾಯಿಖಾನೆಗೆ ಮಾರುವ ಮೂಲಕ ಇಸ್ಕಾನ್ ಅತಿದೊಡ್ಡ ವಂಚನೆ; ಮನೇಕಾ ಗಾಂಧಿ ಆರೋಪ ತಳ್ಳಿಹಾಕಿದ ಇಸ್ಕಾನ್
ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ ಎಂಬ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಗಳನ್ನು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ತಳ್ಳಿಹಾಕಿದ್ದಾರೆ.

'ಇಸ್ಕಾನ್' ಭಾರತದ ಅತೀ ದೊಡ್ಡ ವಂಚಕ ಸಂಸ್ಥೆ; ಹರೇ ರಾಮ್-ಹರೇ ಕೃಷ್ಣ ಎಂದು ಹೇಳಿ ಕಟುಕರಿಗೆ ಗೋವುಗಳ ಮಾರಾಟ: ಮನೇಕಾ ಗಾಂಧಿ
ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ದ ಆರೋಪಿಸಿ ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿ ಚರ್ಚೆಗೆ ಕಾರಣವಾಗಿದೆ.

ಸ್ವಾಮಿ ವಿವೇಕಾನಂದ, ರಾಮಕೃಷ್ಣರ ಅವಹೇಳನ: ಸನ್ಯಾಸಿ ಅಮೋಘ ಲೀಲಾ ದಾಸ್ ಬ್ಯಾನ್ ಮಾಡಿದ ಇಸ್ಕಾನ್
ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ತನ್ನ ಹೆಸರಾಂತ ಸನ್ಯಾಸಿಗಳಲ್ಲಿ ಒಬ್ಬರಾದ ಅಮೋಘ ಲೀಲಾ ದಾಸ್ ಅವರ ಮೇಲೆ ಇಸ್ಕಾನ್ ಒಂದು ತಿಂಗಳ ಮಟ್ಟಿಗೆ ನಿಷೇಧ ಹೇರಿದೆ.

ಕೋವಿಡ್ ಸಂದರ್ಭದಲ್ಲೂ 'ಅಕ್ಷಯ ಪಾತ್ರೆ' ಸೇವೆ: ಇಸ್ಕಾನ್ ಕೊಂಡಾಡಿದ ರಾಷ್ಟ್ರಪತಿ ಕೋವಿಂದ್
ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಅಕ್ಷಯ ಪಾತ್ರೆ ಸೇವೆ ನೀಡಿದ ಇಸ್ಕಾನ್ ತಂಡವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಶ್ಲಾಘಿಸಿದರು.

ಬೆಂಗಳೂರು: ರಾಷ್ಟ್ರಪತಿಗಳಿಂದ ಜೂನ್ 14ರಂದು ಇಸ್ಕಾನ್ ನ ರಾಜಾಧಿರಾಜ ಶ್ರೀ ಗೋವಿಂದ ದೇವಾಲಯ ಲೋಕಾರ್ಪಣೆ
ಬೆಂಗಳೂರಿನ ಕನಕಪುರ ರಸ್ತೆಯ ಸಮೀಪದಲ್ಲಿರುವ ವಸಂತಪುರದ ವೈಕುಂಠ ಬೆಟ್ಟದಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನೂತನವಾಗಿ ನಿರ್ಮಿಸಿರುವ ರಾಜಾಧಿರಾಜ ಶ್ರೀ ಗೋವಿಂದ ದೇವಾಲಯ...

ಬೆಂಗಳೂರು: 6 ತಿಂಗಳ ಬಳಿಕ ಇಸ್ಕಾನ್ ದೇಗುಲ ಭಕ್ತರ ದರ್ಶನಕ್ಕೆ ಮುಕ್ತ!
ಕೊವಿಡ್-19 ಲಾಕ್ಡೌನ್ ಹಿನ್ನಲೆಯಲ್ಲಿ ಬಂದ್ ಆಗಿದ್ದ ಬೆಂಗಳೂರಿನ ಖ್ಯಾತ ಇಸ್ಕಾನ್ ದೇಗುಲ ಸತತ ಆರು ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರ ದರ್ಶನಕ್ಕೆ ದೇಗುಲ ತೆರೆದಿದೆ.

ಇಸ್ಕಾನ್ ರಥಯಾತ್ರೆಗೆ ವಿಶೇಷ ಅತಿಥಿಯಾಗಿ ಸಂಸದೆ ನುಸ್ರತ್ ಜಹಾನ್ ಗೆ ಆಹ್ವಾನ
ಟಿಎಂಸಿ ಸಂಸದೆ ನುಸ್ರತ್ ಜಹಾನ್ ಸಾಮಾಜಿಕ ಸೌಹಾರ್ದತೆಯ ಮನೋಭಾವದಿಂದ ಉತ್ತೇಜಿತಗೊಂಡಿರುವ ಇಸ್ಕಾನ್ ಗುರುವಾರ ನಡೆಯಲಿರುವ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅವರಿಗೆ ಆಹ್ವಾನ ನೀಡಿದೆ.

ಮೈಸೂರು: 2021ರ ವೇಳೆಗೆ ಇಸ್ಕಾನ್ ನಿಂದ ನವಬೃಂದಾವನ ಕಾಂಪ್ಲೆಕ್ಸ್ ನಿರ್ಮಾಣ
2021ರ ವೇಳೆಗೆ ಮೈಸೂರಿನ ಜಯನಗರದ 9 ಎಕರೆ ಜಾಗದಲ್ಲಿ ಇಸ್ಕಾನ್ ಕೃಷ್ಣ ದೇವಾಲಯ ನಿರ್ಮಿಸಲಿದೆ..

