Iran

ಶಾಂತಿ ಮಾತುಕತೆಗೆ ಅಡ್ಡಿ: Iran ಸಂಧಾನಕಾರರ ಹತ್ಯೆಗೆ Israel ಭಾರೀ ಸಂಚು; ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಎಚ್ಚರಿಕೆ ರವಾನಿಸಿದ ಅಮೆರಿಕಾ..!
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಅವರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯಿದ್ದು, ಇದರಂತೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮೂಲಕ ಇರಾನ್‌ಗೆ ಅಮೆರಿಕಾ ಎಚ್ಚರಿಕೆ ರವಾನಿಸಿದೆ.

'ಇರಾನ್ ಸಂಪೂರ್ಣ ಮಣಿದಿದೆ', 'ನಮಗೆ ಬೇಕಿದ್ದ ಬಹುತೇಕ ಎಲ್ಲ ಷರತ್ತುಗಳಿಗೆ ಒಪ್ಪಿದೆ': ಟ್ರಂಪ್ ಮಹತ್ವದ ಹೇಳಿಕೆ
ಅಮೆರಿಕದ ಸೇನಾ ಕಾರ್ಯಾಚರಣೆಗಳಿಂದ ಇರಾನ್‌ನ ಸೇನಾ ಸಾಮರ್ಥ್ಯಕ್ಕೆ ಭಾರೀ ಹೊಡೆತ ಬಿದ್ದಿದೆ. "ಅವರ ನೌಕಾಪಡೆ, ವಾಯುಪಡೆ, ರಾಡಾರ್ ವ್ಯವಸ್ಥೆ ಬಹುತೇಕ ನಾಶವಾಗಿದೆ. ಹಲವು ಪ್ರಮುಖ ನಾಯಕರು ಮತ್ತು ಸೇನಾ ಕಮಾಂಡರ್‌ಗಳು ಮೃತಪಟ್ಟಿದ್ದಾರೆ.

ಜುಲೈ 4ರಿಂದ ಅಲಿ ಖಮೇನಿ ಅಂತಿಮ ವಿಧಿವಿಧಾನ: ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ, ಭದ್ರತಾ ಕಾರಣಕ್ಕೆ ಪುತ್ರ ಮೊಜ್ತಬಾ ಗೈರು..!
36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕರಾಗಿ ಸೇವೆ ಸಲ್ಲಿಸಿದ್ದ ಅಲಿ ಖಮೇನಿ ಅವರು ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ದಿನವೇ ಮೃತಪಟ್ಟಿದ್ದರು. ಬಳಿಕ ಯುದ್ಧ ಪರಿಸ್ಥಿತಿ ಉಂಟಾದ ಕಾರಣ ಅಂತ್ಯಕ್ರಿಯೆಯನ್ನು ತಕ್ಷಣ ನಡೆಸದೆ ಮುಂದೂಡಲಾಗಿತ್ತು.

ಖಮೇನಿ ಅಂತ್ಯಕ್ರಿಯೆಗೆ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ಪವನ್ ಖೇರಾಗೆ ಇರಾನ್ ಆಹ್ವಾನ
ಮುಂದಿನ ವಾರ ನಡೆಯಲಿರುವ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕರಾದ ಸಲ್ಮಾನ್ ಖುರ್ಷಿದ್, ಪವನ್ ಖೇರಾ ಹಾಗೂ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಆಹ್ವಾನಿಸಿದೆ.

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತದ ಜೈನ ಮುನಿಗೆ ಇರಾನ್ ಆಹ್ವಾನ; ಯಾರು ಆ ಸನ್ಯಾಸಿ?
ಕಳೆದ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಖಮೇನಿ ಅಂತ್ಯಕ್ರಿಯೆಯನ್ನು ಸಂಘರ್ಷದಿಂದಾಗಿ ಮುಂದೂಡಲಾಗಿತ್ತು. ಇದೀಗ ಜುಲೈ 5ರಿಂದ ಜುಲೈ 9ರ ವರೆಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿದ್ದು, ಇರಾನ್ ಸೇರಿದಂತೆ ವಿವಿಧ ನಗರಗಳಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ.

ಜೂನ್ 30 ರಂದು ಸಭೆಗೆ ತೆಹ್ರಾನ್ ಮನವಿ ಮಾಡಿತ್ತು- ಟ್ರಂಪ್; ಮುಂದಿನ ದಿನಗಳಲ್ಲಿ ತಾಂತ್ರಿಕ ಮಾತುಕತೆಗಳ ನಿರೀಕ್ಷೆ ಇಲ್ಲ- ಇರಾನ್
ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯವರು ತಮ್ಮ ದುರ್ಬಲವಾದ ಕದನ ವಿರಾಮವನ್ನು ಪರೀಕ್ಷಿಸುತ್ತಾ ಕೊಲ್ಲಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.

ಟ್ರಂಪ್ ಆದೇಶ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ: 10 ಪ್ರಮುಖ ಸೇನಾ ನೆಲೆಗಳು ಧ್ವಂಸ, ಕದನ ವಿರಾಮ ಮತ್ತೆ ಪ್ರಶ್ನಾರ್ಥಕ..!
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದ ಮೇರೆಗೆ ಅಮೆರಿಕ ಸೇನೆ ಶನಿವಾರ ಹಾರ್ಮುಜ್ ಜಲಸಂಧಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರಾನ್‌ನ 10 ಸೇನಾ ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಅಧಿಕೃತವಾಗಿ ತಿಳಿಸಿದೆ.

'ಪರಿಸ್ಥಿತಿ ಎದುರಾದರೆ ಇರಾನ್ ಸರ್ವನಾಶ'; ಟ್ರಂಪ್ ಕಠಿಣ ಎಚ್ಚರಿಕೆ, ಶುರುವಾಗುತ್ತಾ ಮಹಾಯುದ್ಧ...?
ಇದಕ್ಕೂ ಮುನ್ನ ಅಮೆರಿಕದ ಸೇನೆ ಶನಿವಾರ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹ ಕೇಂದ್ರಗಳು, ಕರಾವಳಿ ರಾಡಾರ್ ತಾಣಗಳು ಸೇರಿದಂತೆ ಹಲವು ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಇರಾನ್‌ನಿಂದ ಅಮೆರಿಕ ಮಿತ್ರ ರಾಷ್ಟ್ರಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!
ಅಮೆರಿಕ ಶನಿವಾರ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹ ಕೇಂದ್ರಗಳು ಹಾಗೂ ಕರಾವಳಿ ರಾಡಾರ್ ತಾಣಗಳ ಮೇಲೆ ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ ಹೇಳಿದೆ.

