IPL

ಪ್ರತಿಯೊಂದು ಪಂದ್ಯದಲ್ಲಿ ನಾನೇ ನಾಯಕನೆಂದು ತಿಳಿದು ಆಡಿದ್ದೇನೆ: ಕೆಎಲ್ ರಾಹುಲ್
ಕರ್ನಾಟಕದ ತಾರೆ ಕೆಎಲ್ ರಾಹುಲ್‌ಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅತ್ಯಂತ ಮಹತ್ವದ್ದಾಗಿದೆ. ಐಪಿಎಲ್ 2020 ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮುನ್ನಡೆಸುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಮೊತ್ತ ಮೊದಲ ಬಾರಿ ಫ್ರಾಂಚೈಸಿ ತಂಡದ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

ಐಪಿಎಲ್ ಹಿನ್ನೆಲೆ: ತರಬೇತಿ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಧೋನಿ, ಮತ್ತಿತರ ಸಿಎಸ್ ಕೆ ಆಟಗಾರರು
ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ ಹಿನ್ನೆಲೆಯಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಅಲ್ಪಾವಧಿಯ ತರಬೇತಿ ಶಿಬಿರಕ್ಕಾಗಿ ಶುಕ್ರವಾರ ಚೆನ್ನೈಗೆ ಆಗಮಿಸಿದ್ದಾರೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಅಮೆಜಾನ್, ಅನ್ಅಕಾಡೆಮಿ ಕಣ್ಣು
ಈ ಬಾರಿಯ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಕಂಪನಿ ವಿವೋ ಹಿಂದೆ ಸರಿದಿರುವಂತೆಯೇ ಹೊಸ ಬ್ರಾಂಡ್ ಗಳಿಗೆ ಮಾರುಕಟ್ಟೆ ತೆರದುಕೊಂಡಿದ್ದು, ಅಮೆಜಾನ್ ಮತ್ತು ಅನ್ಅಕಾಡೆಮಿ ಕಣ್ಣು ಇಟ್ಟಿವೆ.

ಒಂದೇ ಒಂದು ಕೋವಿಡ್-19 ಪ್ರಕರಣ ಬಂದರೂ ಐಪಿಎಲ್ ರದ್ದಾಗುವ ಸಾಧ್ಯತೆ ಇರುತ್ತದೆ: ನೆಸ್ ವಾಡಿಯಾ
ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ ಟೂರ್ನಮೆಂಟ್ ನಲ್ಲಿ ಒಂದೇ ಒಂದು ಕೋವಿಡ್-19 ಪ್ರಕರಣ ವರದಿಯಾಗದ ರೀತಿಯಲ್ಲಿ ಗಮನ ಹರಿಸಬೇಕಾಗಿದೆ. ಅತ್ಯುತ್ತಮ ರೀತಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕಾಗಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

3 ಬಾರಿ ಐಪಿಎಲ್ ಚಾಂಪಿಯನ್ಸ್: ಸಿಎಸ್ ಕೆ ಯಶಸ್ಸಿನ ಹಿಂದೆ ಧೋನಿ ಸ್ವಭಾವವಿದೆ - ರಾಹುಲ್ ದ್ರಾವಿಡ್
ಕ್ರೀಡಾಂಗಣದಾಚೆ ಮಹೇಂದ್ರ ಸಿಂಗ್ ಧೋನಿಯ ಪೂರ್ವಾಭ್ಯಾಸ, ನಡವಳಿಕೆ ಮತ್ತು ಆಟದ ಕುರಿತ ಯೋಜನೆ ರೂಪಿಸುವ ತಂತ್ರದಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿ ಯಶಸ್ಸಿನ ಹಾದಿಯಲ್ಲಿದೆ ಎಂದು ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅಭಿಪ್ರಾಯಪ್ಟಟಿದ್ದಾರೆ.

ಆಗಸ್ಟ್ 2 ರಂದು ಐಪಿಎಲ್ ಆಡಳಿತಾತ್ಮಕ ಸಮಿತಿ ಸಭೆ: ಪಂದ್ಯಾವಳಿಯ ವೇಳಾಪಟ್ಟಿಗೆ ಅಂತಿಮ ರೂಪ ಸಾಧ್ಯತೆ!
ಈ ಬಾರಿ ಯುಎಇನಲ್ಲಿ ನಡೆಯಲಿರುವ ಟಿ-20 ಮಾದರಿಯ ಐಪಿಎಲ್ 2020 ಪಂದ್ಯಾವಳಿಗಳ ವೇಳಾಪಟ್ಟಿಗೆ ಅಂತಿಮ ರೂಪ, ಮತ್ತಿತರ ವ್ಯವಸ್ಥೆಗಾಗಿ ಆಗಸ್ಟ್ 2 ರಂದು ಐಪಿಎಲ್ ಆಡಳಿತಾತ್ಮಕ ಸಭೆ ನಡೆಯಲಿದೆ.

ಐಪಿಎಲ್ ಆತಿಥ್ಯ ವಹಿಸಲು ಬಿಸಿಸಿಐನಿಂದ ಅಧಿಕೃತ ಪತ್ರ ಸ್ವೀಕರಿಸಿದ ಯುಎಇ
ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ಐಪಿಎಲ್ 2020 ಅನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ(ಬಿಸಿಸಿಐ) ಅಧಿಕೃತ ಒಪ್ಪಂದವನ್ನು ಸ್ವೀಕರಿಸಿದೆ.

ಐಪಿಎಲ್ ಪಂದ್ಯಾವಳಿ ಸೆಪ್ಟೆಂಬರ್ 19 ರಿಂದ ನವಂಬರ್ 8 ರವರೆಗೆ: ಬಿಸಿಸಿಐ ಮೂಲಗಳು
ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಕೊನೆಗೂ ದಿನಾಂಕ ನಿಗದಿಯಾದಂತೆ ಕಾಣುತ್ತಿದೆ. ಸೆಪ್ಟೆಂಬರ್ 19ರಂದು ಆರಂಭವಾಗಿ ನವೆಂಬರ್ 8ರಂದು ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐಯ ಖಚಿತ ಮೂಲಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿವೆ.

ಐಪಿಎಲ್ ನಡೆಯುವುದು ಶಶಾಂಕ್ ಮನೋಹರ್‌ಗೆ ಸ್ವಲ್ಪವೂ ಇಷ್ಟವಿರಲಿಲ್ಲ: ಬಸಿತ್ ಅಲಿ
ಕೊರೋನಾ ವೈರಸ್ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆ ಅಸಾಧ್ಯ ಎಂಬುದನ್ನು ಕೊನೆಗೂ ಮನಗಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇದೇ ವಾರದ ಆರಂಭದಲ್ಲಿ ತನ್ನ ಜಾಗತಿಕ ಮಟ್ಟದ ಟಿ20 ಟೂರ್ನಿಯನ್ನು 2022ಕ್ಕೆ ಮುಂದೂಡಿತ್ತು.

