IPL 2020

ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಸಲಹೆ ಮೀರಿ ಮೈದಾನಕ್ಕಿಳಿದ ಮುಂಬೈ ನಾಯಕ ರೋಹಿತ್ ಶರ್ಮಾ!
ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಅಚ್ಚರಿ ಉಂಟು ಮಾಡಿದ್ದರು.

ಐಪಿಎಲ್ 2020: 10 ವಿಕೆಟ್ ಗಳಿಂದ ಗೆಲುವು ಸಾಧಿಸಿ ಪ್ಲೇ ಆಫ್ ಗೆ ಎಂಟ್ರಿಯಾದ ಸನ್ ರೈಸರ್ಸ್
ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 56 ನೇ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಮುಂಬೈ ಇಂಡಿಯನ್ಸ್ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿದ ಹೈದರಾಬಾದ್ ಸನ್ ರೈಸರ್ಸ್ ಪ್ಲೇ ಆಫ್ ಗೆ ಸಾಗಿದೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶೇನ್ ವಾಟ್ಸನ್ ವಿದಾಯ, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ, ವಿಡಿಯೋ!
ಆಸ್ಟ್ರೇಲಿಯಾ ತಂಡದ ಮಾಜಿ ಆಲ್ ರೌಂಡರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಐಪಿಎಲ್ ಪದಾರ್ಪಣೆ ಆವೃತ್ತಿಯಲ್ಲಿಯೇ 2 ದಾಖಲೆ ಮಾಡಿದ ದೇವದತ್ ಪಡಿಕ್ಕಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಎರಡೆರಡು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಈ ದಾಖಲೆ ನಿರ್ಮಿಸಿದ ಏಕೈಕ ತಂಡ ದೆಹಲಿ!
ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ ಗೇರಿದ ದೆಹಲಿ ತಂಡ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದು, ಈ ದಾಖಲೆ ಬರೆದ ಏಕೈಕ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ಐಪಿಎಲ್ 2020: ಡೆಲ್ಲಿ ವಿರುದ್ಧ ಸೋತ ಆರ್ ಸಿಬಿ ಪ್ಲೇ ಆಫ್ ಗೆ ಕ್ವಾಲಿಫೈ
ಇಲ್ಲಿನ ಶೇಕ್ ಝಾಯಿದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯ ಸೋತರೂ ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿಯಾಗಿದೆ.

ಐಪಿಎಲ್ ಗೆ ಶೇನ್ ವ್ಯಾಟ್ಸನ್ ವಿದಾಯ: ವರದಿ
ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ (ಸಿಎಸ್‌ಕೆ) ತಂಡದ ಆರಂಭಿಕ ಆಟಗಾರ ಶೇನ್ ವ್ಯಾಟ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಕಳಪೆ ಪ್ರದರ್ಶನ ನೀಡಿ ಹೊರಬಿದ್ದ ಬಿನ್ನಲ್ಲೇ ನಿವೃತ್ತಿ ಹೊಂದಲಿದ್ದಾರೆ. ಈ ಮೂಲಕ ಚೆನ್ನೈ ತಂಡದ ಮೊದಲ ವಿಕೆಟ್ ಪತನಗೊಂಡಿದೆ.

ಐಪಿಎಲ್ 2020: ಪ್ಲೇ ಆಫ್ ನಿರ್ಧಾರದ ಪಂದ್ಯದಲ್ಲಿ ಟಾಸ್ ಸೋತು ಆರ್ ಸಿಬಿ ಬ್ಯಾಟಿಂಗ್, Live Score ಇಲ್ಲಿದೆ!
ಐಪಿಎಲ್ 13ನೇ ಆವೃತ್ತಿಯ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಆರಂಭಿಸಿದೆ.

"ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಈ ಆಟಗಾರ": ಡು ಪ್ಲೆಸಿಸ್ ಯಾರ ಕುರಿತು ಹೇಳಿದ್ದು ಗೊತ್ತೇ?
ವಿಭಿನ್ನ ಶಾಟ್‌ಗಳನ್ನು ನೋಡುವಾಗ ಋತುರಾಜ್ ಗಾಯಕ್ವಾಡ್ ಅವರು ಯುವ ವಿರಾಟ್ ಕೊಹ್ಲಿಯಂತೆ ಕಾಣಿಸುತ್ತಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.

