investigation

ಪೇಜರ್ ಬ್ಲಾಸ್ಟ್ ಗೆ ಮಲಯಾಳಿ ನಂಟು: ಕೇರಳದ ವಯನಾಡ್ ಮೂಲದ ವ್ಯಕ್ತಿ ಕುರಿತು ತನಿಖೆ
ಘಟನೆಯಲ್ಲಿ 39 ವರ್ಷದ ಉದ್ಯಮಿ ಮತ್ತು ನಾರ್ವೇ ಪ್ರಜೆ ರಿನ್ಸನ್ ಜೋಸ್ ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೂಲತಃ ಕೇರಳದ ಮನಂತವಾಡಿಯವರಾದ ಜೋಸ್, ಪ್ರಸ್ತುತ ಓಸ್ಲೋದಲ್ಲಿ ವಾಸಿಸುತ್ತಿದ್ದಾರೆ.

ಸಿಸಿಬಿ ದಾಳಿ ವೇಳೆ ಹೊರಗೆ ಕಾಯಿಸಿದ್ದ ಜೈಲು ಅಧಿಕಾರಿಗಳು: ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಆದೇಶ
ಈ ದಾಳಿ ನಡೆದ ಮರುದಿನ ಅಂದರೆ ಮೊನ್ನೆ ಭಾನುವಾರ ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೈಲಿನಲ್ಲಿ ಬಲಗೈಯಲ್ಲಿ ಚಹಾ ಮಗ್ ಮತ್ತು ಎಡಗೈನಲ್ಲಿ ಸಿಗರೇಟ್ ಹಿಡಿದಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ವೈರಲ್ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳ ದಾಳಿ ಮಾಹಿತಿ ಸೋರಿಕೆಯಾಗಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ.

Renukaswamy Murder Case: ತನಿಖೆ ಅಂತಿಮ ಘಟ್ಟಕ್ಕೆ, ಶೀಘ್ರವೇ ಚಾರ್ಜ್ ಶೀಟ್ ಸಲ್ಲಿಕೆ- ಪೊಲೀಸ್ ಆಯುಕ್ತ
ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ದರ್ಶನ್ ಗ್ಯಾಂಗ್‌ನ ವಿರುದ್ಧ ಮೂರು ಮಾದರಿಯ ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದೆ. ಶೀಘ್ರದಲ್ಲಿಯೇ ಕೇಸ್‌ನ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಕೇಸ್ ತನಿಖೆ ಅಂತಿಮ ಘಟ್ಟ ತಲುಪಿದೆ. ಅನೇಕ ಆಯಾಮಗಳಲ್ಲಿ ತನಿಖೆ ನಡೆಸಿದ್ದೇವೆ ಎಂದರು.

ಸೂರಜ್ ರೇವಣ್ಣ ಪ್ರಕರಣದಲ್ಲೂ ನ್ಯಾಯಯುತ ತನಿಖೆ ಆಗಲಿ: ಆರ್ ಅಶೋಕ್
ಪ್ರಜ್ವಲ್ ರೇವಣ್ಣ ಪ್ರಕರಣ ತನಿಖೆ ನಡೆಯುತ್ತಿದ್ದು, ಸೂರಜ್ ರೇವಣ್ಣರ ವಿಚಾರದಲ್ಲೂ ನ್ಯಾಯಯುತ ತನಿಖೆ ಆಗಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಭಾನುವಾರ ಹೇಳಿದರು.

ಕಾಂಗ್ರೆಸ್ ವಿರುದ್ಧದ ಆಕ್ಷೇಪಾರ್ಹ ಅನಿಮೇಟೆಡ್ ವಿಡಿಯೋ: ನಡ್ಡಾ, ಮಾಳವಿಯಾ ವಿರುದ್ಧದ ತನಿಖೆಗೆ 'ಹೈ' ಅನುಮತಿ
ಕಲಬುರ್ಗಿಯ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಮುಖಂಡ ಜಗತ್ ಪ್ರಕಾಶ್ ನಡ್ಡಾ ಮತ್ತು ಮಾಳವಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ನಡೆಸಿತು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಆಂತರಿಕ ವಿಶೇಷ ತನಿಖಾ ತಂಡ ರಚನೆ!
ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ತನಿಖೆಗೆ ಬೆಂಗಳೂರು ಪೊಲೀಸರು ಆಂತರಿಕ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚನೆ ಮಾಡಿದ್ದಾರೆ.

ನಟ ದರ್ಶನ್ ಪ್ರಕರಣ: ಪೊಲೀಸರ ಮುಂದೆ ಹಾಸ್ಯ ನಟ ಚಿಕ್ಕಣ್ಣ ಹೇಳಿದ್ದು ಹೀಗೆ...
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ಸೋಮವಾರ ವಿಚಾರಣೆ ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ರಕ್ಷಣೆ, ತನಿಖೆ ನಂತರ ಪೆನ್ ಡ್ರೈವ್ ಹಂಚಿದವರು ಯಾರು ಎಂದು ಗೊತ್ತಾಗಲಿದೆ: ಡಾ ಜಿ ಪರಮೇಶ್ವರ್
ಪೆನ್ ಡ್ರೈವ್ ಪ್ರಕರಣದಲ್ಲಿ ನಿಜವಾದ ಆರೋಪಿ ಯಾರು, ಪ್ರಜ್ವಲ್ ಪಾತ್ರವೇನು ಎಂದು ತಿಳಿಯಲು ಎಸ್ ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಿರುವುದು. ತನಿಖೆಯಾದ ಮೇಲೆ ಪೆನ್ ಡ್ರೈವ್ ತಯಾರು ಮಾಡಿದ್ದು, ಹಂಚಿಕೆ ಮಾಡಿದ್ದು ಯಾರು ಎಂದೆಲ್ಲ ಸರಿಯಾಗಿ ಗೊತ್ತಾಗಲಿದೆ ಎಂದರು.

ಬೆಂಗಳೂರಿನ ಕೆಫೆ ಸ್ಫೋಟ ಪ್ರಕರಣದ ಬೆನ್ನಲ್ಲೇ ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ!
ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೆ ಅತ್ತ ತಮಿಳುನಾಡಿನ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಲ್ಲಿ ಭೀತಿಗೆ ಕಾರಣವಾಯಿತು.

