injured

ಸಾಮಾಜಿಕ ಜಾಲತಾಣದಲ್ಲಿ 'ಆಕ್ಷೇಪಾರ್ಹ ಫೋಸ್ಟ್' ಘರ್ಷಣೆಯಲ್ಲಿ ಒಬ್ಬರು ಸಾವು, 8 ಮಂದಿಗೆ ಗಾಯ
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಫೋಸ್ಟ್' ವಿಚಾರವಾಗಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಎರಡು ಸಮುದಾಯಗಳ ಸದಸ್ಯರು ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇದೇ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 501 ಜನರ ಸಾವು, 2,598 ಮಂದಿ ಗಾಯ- ಅಧಿಕೃತ ಅಂಕಿ ಅಂಶ
ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಇದೇ ವರ್ಷ 3,099 ರಸ್ತೆ ಅಪಘಾತಗಳು ಸಂಭವಿಸಿದ್ದು, 501 ಜನರು ಮೃತಪಟ್ಟಿದ್ದು, 2,598 ಮಂದಿ ಗಾಯಗೊಂಡಿದ್ದಾರೆ. ನಗರ ಸಂಚಾರ ಪೊಲೀಸರು ಅಧಿಕೃತವಾಗಿ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಕಂಟೈನರ್ ಪಲ್ಟಿ, ಇಬ್ಬರು ಸಾವು
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸೋಮವಾರ ಬೆಳಗ್ಗೆ ಕಂಟೈನರ್ ಪಲ್ಟಿಯಾಗಿ, ಡಿವೈಡರ್‌ಗೆ ಜಿಗಿದು ಐದು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡ: ಬಸ್ಸು ಕಮರಿಗೆ ಬಿದ್ದು 8 ಪ್ರಯಾಣಿಕರು ಸಾವು, 27 ಮಂದಿಗೆ ಗಾಯ
ಬಸ್ಸೊಂದು ಕಮರಿಗೆ ಬಿದ್ದ ಪರಿಣಾಮ 8 ಪ್ರಯಾಣಿಕರು ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿರುವ ದಾರುಣ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿಯ ಬಳಿ ಭಾನುವಾರ ನಡೆದಿದೆ.

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ: ಮತ್ತೊಂದು ಸರಣಿ ಅಪಘಾತ, ಹಲವರಿಗೆ ಗಾಯ
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಭಾನುವಾರ ಸಂಜೆ ಮತ್ತೊಂದು ಸರಣಿ ಅಪಘಾತ ಸಂಭವಿಸಿದೆ. ಮದ್ದೂರು ಬೈಪಾಸ್ ರಸ್ತೆಯ ಕೆ. ಕೋಡಿಹಳ್ಳಿ ಬಳಿ ಕೆಎಸ್ ಆರ್ ಟಿಸಿ ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮುಂಬೈ: ಕಟ್ಟಡದ ಬಾಲ್ಕನಿ ಭಾಗ ಕುಸಿದು, ಐವರು ಗಾಯ
ವಾಣಿಜ್ಯ ನಗರಿ ಮುಂಬೈನ ನಾನಾವತಿ ಆಸ್ಪತ್ರೆ ಸಮೀಪದ ಸೇಂಟ್ ಬ್ರಾಜ್ ರಸ್ತೆಯಲ್ಲಿರುವ ಕಟ್ಟಡದ ಬಾಲ್ಕನಿ ಭಾಗ ಕುಸಿದು ಐವರು ಗಾಯಗೊಂಡಿರುವ ಭಾನುವಾರ ಮಧ್ಯಾಹ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಬಳಿ ಕಾರು-ಲಾರಿ ಡಿಕ್ಕಿ: ಓರ್ವ ಸಾವು, ಐವರಿಗೆ ಗಾಯ
ಕಾರು ಮತ್ತು ಕಂಟೈನರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ರವಿ ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು: ಸಿಡಿಲು ಬಡಿದು ಒಬ್ಬರು ಸಾವು, ನಾಲ್ವರಿಗೆ ಗಾಯ
ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತನನ್ನು ತರಿಕೆರೆ ತಾಲೂಕ್ ಭಾವಿಕೆರ ಗ್ರಾಮದ ಮುಕೇಶ್ (40) ಎಂದು ಗುರುತಿಸಲಾಗಿದೆ.

ಮುಂಬೈ: ನಿರ್ಮಾಣ ಹಂತದ ಸ್ಥಳದಲ್ಲಿ ಕ್ರೇನ್ ಅಪಘಾತ, ಪ್ರಾಣಾಪಾಯದಿಂದ ವ್ಯಕ್ತಿ ಪಾರು
ವಾಣಿಜ್ಯ ನಗರಿ ಮುಂಬೈನ ಚೆಂಬೂರ್‌ನಲ್ಲಿ ಬುಧವಾರ ನಿರ್ಮಾಣ ಹಂತದ ಸ್ಥಳದಲ್ಲಿ ಕ್ರೇನ್‌ನ ಒಂದು ಭಾಗ ಮುರಿದು ಕೆಲವು ಗುಡಿಸಲುಗಳ ಮೇಲೆ ಬಿದ್ದ ನಂತರ 23 ವರ್ಷದ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

