Independent candidate

ರಾಜಸ್ಥಾನ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿಯಿಂದ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ
ಕಾಂಗ್ರೆಸ್ ಬಂಡಾಯ ನಾಯಕ ನರೇಶ್ ಮೀನಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮಾಲ್ಪುರ ಉಪವಿಭಾಗಾಧಿಕಾರಿ ಅಮಿತ್ ಚೌಧರಿ ಅವರ ಕಾಲರ್ ಹಿಡಿದು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಉತ್ತರ ಪ್ರದೇಶ: ನಾಮಪತ್ರ ಸಲ್ಲಿಸಲು 'ಚಟ್ಟ'ದಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ!
ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ 'ಚಟ್ಟ'ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ‘ಆರ್ತಿ ಬಾಬಾ’ ಎಂದೇ ಹೆಸರಾಗಿರುವ ಯಾದವ್,ಎಂಬಿಎ ಮಾಡಿದ್ದರೂ ಈಗ ಬೌದ್ಧ ಸನ್ಯಾಸಿಯಾಗಿದ್ದು, ಭಿಕ್ಷೆಯಿಂದ ಜೀವನ ನಡೆಸುತ್ತಿರುವುದಾಗಿ ಹೇಳುತ್ತಾರೆ.

'ಮಹದಾಯಿ ಜಲ ವಿವಾದ': ಎತ್ತಿನ ಬಂಡಿ ಏರಿ ಬಂದ ಧಾರವಾಡ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶಿವಾನಂದ ಮುತ್ತಣ್ಣನವರ್!
ಮುಂಬರುವ ಲೋಕಸಭೆ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶಿವಾನಂದ ಮುತ್ತಣ್ಣನವರ್ ನಿನ್ನೆ ಮಂಗಳವಾರ ಹುಬ್ಬಳ್ಳಿಯಿಂದ ಧಾರವಾಡದವರೆಗೆ ವಿಶಿಷ್ಟ ರ್ಯಾಲಿ ನಡೆಸಿಕೊಂಡು ಹೋಗಿ ಚುನಾವಣಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.

ಅಮಿತ್ ಶಾ ಭೇಟಿಗೆ ಸಿಗದ ಅವಕಾಶ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ- ಈಶ್ವರಪ್ಪ
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮ್ಮ ಪುತ್ರನಿಗೆ ಅವಕಾಶ ಸಿಗದಿರುವುದಕ್ಕೆ ಅಸಮಾಧಾನಗೊಂಡು ಬಂಡಾಯ ಸಾರಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭೇಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರಾಕರಿಸಿದ್ದು, ಇದರೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವುದು ಖಚಿತ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.

ಏಪ್ರಿಲ್ 12ಕ್ಕೆ ನಾಮಪತ್ರ ಸಲ್ಲಿಕೆ: ಪಕ್ಷೇತರನಾಗಿ ಸ್ಪರ್ಧೆ ಎಂದು ಘೋಷಿಸಿರುವ ಕೆ ಎಸ್ ಈಶ್ವರಪ್ಪ
ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಣ ರಂಗೇರುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಬಿಜೆಪಿಯಿಂದ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶರತ್ ಬಚ್ಚೇಗೌಡ, ಎಂಟಿಬಿಗೆ ಢವಢವ!
ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಶರತ್ ಬಚ್ಚೇಗೌಡ ಸ್ವಾಭಿಮಾನಿ ಅಭಿಯಾನದ ಮೂಲಕ ಭರ್ಜರಿ ರೋಡ್ ಶೋ ಬಳಿಕ ಪಕ್ಷೇತ್ತರನಾಗಿ ನಾಮಪತ್ರ ಸಲ್ಲಿಸಿದ್ದಾರೆ.

10 ಚುನಾವಣೆಯಲ್ಲಿ ಒಂದನ್ನೂ ಗೆಲ್ಲದ ಸೋಲಿನ ಸರದಾರ: ಎಲೆಕ್ಷನ್ ಗಾಗಿ ಜಮೀನು ಮಾರಾಟ ಮಾಡಿದ ಧೀರ!
ಲೋಕಸಭೆ ಚುನಾವಣೆ ಈತನಿಗೆ ದೊಡ್ಡ ವಿಷಯವೇ ಅಲ್ಲ, ಈ ಅಭ್ಯರ್ಥಿ ಈಗಾಗಲೇ 10 ಚುನಾವಣೆ ಎದುರಿಸಿದ್ದಾರೆ, ಆದರೆ ಒಂದು ಚುನಾವಣೆಯಲ್ಲಿಯೂ ಇವರು ಗೆದ್ದಿಲ್ಲ ...

'ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ನಿಮ್ಮ ಪ್ರೀತಿಯ ಅಂಬರೀಷ್ ಅವರ ಧರ್ಮಪತ್ನಿ'
ಮಂಡ್ಯ ಲೋಕಸಭಾ ಚುನಾವಣಾ ಕಣ ರಣರಂಗವಾಗಿದ್ದು, ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿರುದ್ಧ ಸುಮಲತಾ ಅಂಬರೀಶ್ ಸ್ವತಂತ್ರ ...

ತೆಲಂಗಾಣ: ಮತದಾರರ ಕೈಗೆ ಚಪ್ಪಲಿ ಕೊಟ್ಟು ಹೊಡೆಯಿರಿ ಎಂದ ಅಭ್ಯರ್ಥಿ! ವಿಡಿಯೋ ವೈರಲ್
ಹಣ ನೀಡಿ ಮತ ಕೇಳುವುದು ಸಾಮಾನ್ಯ.. ಆದರೆ ತೆಲಂಗಾಣದಲ್ಲಿ ಓರ್ವ ಅಭ್ಯರ್ಥಿ ಮತದಾರರ ಕೈಗೆ ಚಪ್ಪಲಿ ಕೊಟ್ಟ ಕೆಲಸ ಮಾಡದಿದ್ದರೆ ಇದರಿಂದಲೇ ನನ್ನನ್ನು ಹೊಡೆಯಿರಿ ಎಂದು ಹೇಳುವ ಮೂಲಕ ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

