ರಾಜ್ಯಹೊಸೂರು ರಸ್ತೆಯಲ್ಲಿ ಕಾರೊಂದರಲ್ಲಿ 9 ಕೋಟಿ ರೂ ವಶಪಡಿಸಿಕೊಂಡ ಐಟಿ ಅಧಿಕಾರಿಗಳು!
ಹೊಸೂರು ರಸ್ತೆಯ ಸಿಗ್ನಲ್ ಒಂದರ ಬಳಿ ಪೊಲೀಸರು KL 20 T 8629 ನೋಂದಣಿ ಸಂಖ್ಯೆಯ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಬೆಂಗಳೂರಿನಿಂದ ಹೊಸೂರಿನ ಕಡೆಗೆ ತೆರಳುತ್ತಿದ್ದ ಈ ಕಾರನ್ನು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.