imprisonment

ಉತ್ತರ ಪ್ರದೇಶ: ಮಲ ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ!
ರಕ್ಷಣಾ ಗೃಹದಲ್ಲಿ ತಂಗಿದ್ದ ಬಾಲಕಿ ಜೂನ್ 2021ರಲ್ಲಿ ಶ್ರಾವಸ್ತಿ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದ ನಂತರ ಅತ್ಯಾಚಾರದ ಘಟನೆ ಬೆಳಕಿಗೆ ಬಂದಿತ್ತು.

ಹಣ ಹೂಡಿಕೆ ಮಾಡಲು ದಂಪತಿಗೆ ವಂಚನೆ: ಹಣಕಾಸು ಸಂಸ್ಥೆ ಮ್ಯಾನೇಜರ್ ಗೆ 21 ಲಕ್ಷ ರೂ ದಂಡ, 5 ವರ್ಷ ಶಿಕ್ಷೆ
ಪೋಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ದಂಪತಿಯನ್ನು ವಂಚಿಸಿದ ಆರೋಪದ ಮೇಲೆ ಫಾಸ್ಟರ್‌ಫಿನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಪಾಲುದಾರ ಮೊಹಮ್ಮದ್ ಇಧರೀಸ್‌ಗೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 21 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಇಸಿಸ್ ‘ಟ್ವಿಟರ್’ ಖಾತೆ ನಿರ್ವಹಣೆ: ಯುವಕರ ನೇಮಕ ಮಾಡುತ್ತಿದ್ದ ಉಗ್ರನಿಗೆ 10 ವರ್ಷ ಜೈಲು ಶಿಕ್ಷೆ!
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಟ್ವಿಟರ್ ಖಾತೆ ನಿರ್ವಾಹಕ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಕತಾರ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಯೋಧರಿಗೆ ಬಿಗ್ ರಿಲೀಫ್: ಜೈಲುಶಿಕ್ಷೆಗೆ ಮಾರ್ಪಾಡು!
ಅಕ್ಟೋಬರ್ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆಯ ಸಿಬಂದಿಗಳಿಗೆ ಬಿಗ್ ರಿಲೀಫ್ ಎಂಬಂತೆ ಶಿಕ್ಷೆ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಹಾವೇರಿ: ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ಪೊಲೀಸ್ ಪೇದೆಗೆ 7 ವರ್ಷ ಜೈಲು ಶಿಕ್ಷೆ, 30 ಸಾವಿರ ರೂ. ದಂಡ
ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಕ್ಕಾಗಿ ಹಾವೇರಿ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪೊಲೀಸ್ ಪೇದೆ ಸೋಮಶೇಖರ ಭೀಮಪ್ಪ ಕುಂಕುಮಗಾರ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 2013ರಲ್ಲಿ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ದಂಧೆಯನ್ನು ಬಯಲಿಗೆಳೆದಿದ್ದ ತಮಿಳುನಾಡಿನ ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರು: 52 ಬಾರಿ ಪತ್ನಿಗೆ ಇರಿದ ಪತಿಗೆ ಜೀವಾವಧಿ ಶಿಕ್ಷೆ
52 ಬಾರಿ ಚಾಕುವಿನಿಂದ ಇರಿದು ಪತ್ನಿಯ ಕೊಲೆ ಮಾಡಿದ್ದ ಆರೋಪಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2000 ರೂಪಾಯಿ ದಂಡ ವಿಧಿಸಿದೆ.

ಮುಂಬೈ: ನಾಯಿ ಕಚ್ಚಿದ 12 ವರ್ಷಗಳ ನಂತರ ಮಾಲೀಕನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಮುಂಬೈನ ನ್ಯಾಯಾಲಯವೊಂದು ಉದ್ಯಮಿಯೊಬ್ಬರಿಗೆ ಸೇರಿದ ಸಾಕುಪ್ರಾಣಿಯೊಂದು ವ್ಯಕ್ತಿಯನ್ನು ಕಚ್ಚಿದ 12 ವರ್ಷಗಳ ನಂತರ ಅವರಿಗೆ ನಾಯಿ ಮಾಲೀಕರಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಮಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕರಾಟೆ ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ
ಪಡುಬಿದ್ರಿಯ ಕರಾಟೆ ತರಗತಿಯಲ್ಲಿ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಫಾಸ್ಟ್ ಟ್ರ್ಯಾಕ್ ಪೊಕ್ಸೊ ನ್ಯಾಯಾಲಯ ಕರಾಟೆ ಶಿಕ್ಷಕನಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು 22,000 ರೂ. ದಂಡ ವಿಧಿಸಿದೆ.

