ICMR

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 43,893 ಕೇಸ್ ಪತ್ತೆ, 508 ಮಂದಿ ಸಾವು
ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತೆ 50 ಸಾವಿರಕ್ಕಿಂತ ಕಡಿಮೆ ದಾಖಲಾಗಿವೆ. ಬುಧವಾರ 43,893 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 79.90 ಲಕ್ಷಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ಕೊರೋನಾ: ಕಳೆದ 24 ಗಂಟೆಗಳಲ್ಲಿ 45,149 ಜನರಿಗೆ ಸೋಂಕು, 480 ಮಂದಿ ಸಾವು
ಭಾರತದಲ್ಲಿ ಕೊರೋನಾ ವೈರಸ್ ಹಾವಳಿ ಕ್ರಮೇಣ ತಗ್ಗುತ್ತಿದ್ದು, ದಿನನಿತ್ಯದ ಸೋಂಕು, ಸಕ್ರಿಯ ಪ್ರಕರಣಗಳು ಹಾಗೂ ಸಾವು ದಿನೇ ದಿನೇ ಕ್ಷೀಣಿಸುತ್ತಿರುವುದು ಭಾರತೀಯರಲ್ಲಿ ಸಮಾಧಾನವನ್ನು ಮೂಡಿಸಿದೆ. ಹೆಮ್ಮಾರಿ ವೈರಸ್ ಆರ್ಭಟ ಗರಿಷ್ಠ ಮಟ್ಟಕ್ಕೇರಿ ಇದೀಗ ಇಳಿಮುಖದ ಹಾದಿಯಲ್ಲಿ ಸಾಗುತ್ತಿರುವುದು ಗಮನಾರ್ಹ.

ಭಾರತದಲ್ಲಿ ಇಳಿಯುತ್ತಿರುವ ಕೊರೋನಾ ಮಹಾಮಾರಿ ಆರ್ಭಟ: 24 ಗಂಟೆಗಳಲ್ಲಿ 50,129ಕೇಸ್ ಪತ್ತೆ, 90 ದಿನಗಳಲ್ಲಿ ಕನಿಷ್ಟ ಸಂಖ್ಯೆಗಿಳಿದ ಸಾವಿನ ಸಂಖ್ಯೆ
ದೇಶದಲ್ಲಿ ಮಹಾಮಾರಿ ಕೊರೋನಾ ಮಹಾಮಾರಿ ಆರ್ಭಟ ಇಳಿಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 50,129 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 78,64,811ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಒಟ್ಟಾರೆ 10 ಕೋಟಿ ಕೋವಿಡ್-19 ಸ್ಯಾಂಪಲ್ ಪರೀಕ್ಷೆ
ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ.

ದೇಶಾದ್ಯಂತ 24 ಗಂಟೆಗಳಲ್ಲಿ 54,366 ಜನರಿಗೆ ಕೊರೋನಾ: ಸತತ 5ನೇ ದಿನವೂ 60 ಸಾವಿರಕ್ಕಿಂತ ಕಡಿಮೆ ಕೇಸ್!
ಭಾರತದಲ್ಲಿ ಕೊರೋನಾ ಪ್ರಕರಣಗಳ ಇಳಿಕೆಯ ಹಾದಿ ಮುಂದುವರಿದಿದ್ದು, ಸತತ 5 ದಿನಗಳಿಂದ 60 ಸಾವಿರಕ್ಕಿಂತಲೂ ಕಡಿಮೆ ಕೊರೋನಾ ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿಂದು 55,838 ಕೊರೋನಾ ಕೇಸ್ ಪತ್ತೆ; ಸತತ 5ನೇ ದಿನವೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕಿಂತ ಕಡಿಮೆ!
ಭಾರತದಲ್ಲಿ ಕೊರೋನಾ ಪ್ರಕರಣಗಳ ಇಳಿಕೆಯ ಹಾದಿ ಮುಂದುವರೆದಿದ್ದು, ಸತತ 4 ದಿನಗಳಿಂದ 60 ಸಾವಿರಕ್ಕಿಂತಲೂ ಕಡಿಮೆ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 55,838 ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 77,06,946ಕ್ಕೆ ಏರಿಕೆಯಾಗಿದೆ.

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆ, 717 ಮಂದಿ ಸಾವು
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 76,51,108ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಕೊರೋನಾ ಬರುವ ಸಾಧ್ಯತೆ ಇದೆ: ಐಸಿಎಂಆರ್
ಮಾರಕ ಕೊರೋನಾ ವೈರಸ್ ನಿಂದ ಚೇತರಿಸಿಕೊಂಡವರಿಗೆ ಮತ್ತೆ ಸೋಂಕು ಒಕ್ಕರಿಸುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಕೊರೋನಾದಿಂದ ಚೇತರಿಸಿಕೂಂಡರೂ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು!
ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಿದರೆ ಸೋಂಕು ಮರುಕಳಿಸಬಹುದು ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ.

