ICC World Cup 2023

ಐಸಿಸಿ ಏಕದಿನ ಕ್ರಿಕೆಟ್: ಲಂಕಾ ವಿರುದ್ಧ ಕಿವೀಸ್ ಗೆ ಐದು ವಿಕೆಟ್ ಗಳ ಜಯ, ಸೆಮಿಫೈನಲ್ ನಲ್ಲಿ ಭಾರತಕ್ಕೆ ಎದುರಾಳಿ ಸಾಧ್ಯತೆ!
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯ 41 ನೇ ಪಂದ್ಯದಲ್ಲಿ ಲಂಕಾ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.

ವಿಶ್ವಕಪ್ 2023: ಬೆಂಗಳೂರಿನಲ್ಲಿ ಪಾಕ್ ಗೆ ಒಲಿದ ಅದೃಷ್ಟ, ಕಿವೀಸ್ ವಿರುದ್ಧ 21 ರನ್ ಗೆಲುವು, ಸೆಮೀಸ್ ಆಸೆ ಜೀವಂತ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 35ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಅದೃಷ್ಟ ಒಲಿದಿದ್ದು, ಡಕ್‌ವರ್ತ್ ಲೂಯಿಸ್ ನಿಯಮ ಬಳಸಿ ನ್ಯೂಜಿಲೆಂಡ್ ತಂಡವನ್ನು 21 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಸಚಿನ್ ತೆಂಡೊಲ್ಕರ್ ದಾಖಲೆ ಮುರಿದ 'ರಚಿನ್'; ಹಾಡಿ ಹೊಗಳಿದ ವಿರೇಂದ್ರ ಸೆಹ್ವಾಗ್!
ಸಚಿನ್ ತೆಂಡೊಲ್ಕರ್ ಅವರ ದಾಖಲೆಯನ್ನು ಮುರಿದ ನ್ಯೂಜಿಲೆಂಡ್ ತಂಡದ ಮೂಲತ: ಬೆಂಗಳೂರಿನ ರಚಿನ್ ರವೀಂದ್ರ ಅವರನ್ನು ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಹಾಡಿ ಹೊಗಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೋಪಗೊಂಡ ಶ್ರೇಯಸ್ ಅಯ್ಯರ್! ವರದಿಗಾರರ ಮೇಲೆ ಸಿಡಿಮಿಡಿ- ವಿಡಿಯೋ
ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ 302 ರನ್‌ಗಳ ಅಂತರಿಂದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಶ್ರೇಯಸ್ ಅಯ್ಯರ್, ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರನ ಮೇಲೆ ಸಿಡಿಮಿಡಿಗೊಂಡ ಘಟನೆ ನಡೆದಿದೆ.

ಐಸಿಸಿ ವಿಶ್ವಕಪ್ 2023: ಲಂಕಾ ವಿರುದ್ಧದ ಪಂದ್ಯ, ಟಾಸ್ ಗೆದ್ದ ಅಪ್ಘಾನಿಸ್ತಾನ ಬೌಲಿಂಗ್ ಆಯ್ಕೆ
ಐಸಿಸಿ ವಿಶ್ವಕಪ್ 2023ರ 30ನೇ ಪಂದ್ಯ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಅಪ್ಘಾನಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ. ಸೆಮಿಫೈನಲ್ ಪ್ರವೇಶಿಸಲು ಉಭಯ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ.

ಐಸಿಸಿ ವಿಶ್ವಕಪ್ 2023: ಭಾರತ ವಿರುದ್ಧದ ಪಂದ್ಯ, ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ಉತ್ತರ ಪ್ರದೇಶದ ಲಖನೌದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 29ನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಇಂಗ್ಲೆಂಡ್ ಮೊದಲಿಗೆ ಬೌಲಿಂಗ್ ಆಯ್ದುಕೊಂಡಿದೆ.

ಐಸಿಸಿ ವಿಶ್ವಕಪ್: ಪಾಕಿಸ್ತಾನಕ್ಕೆ ಮತ್ತೆ ಸೋಲು, 1 ವಿಕೆಟ್ ನಿಂದ ದಕ್ಷಿಣ ಆಫ್ರಿಕಾಕ್ಕೆ ರೋಚಕ ಗೆಲುವು
ಚೆಪಾಕ್ ನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಸಿಸಿ ವಿಶ್ವಕಪ್ 2023ರ 26ನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತೆ ಸೋತಿದ್ದು, ದಕ್ಷಿಣ ಆಫ್ರಿಕಾ 1 ವಿಕೆಟ್ ನಿಂದ ಗೆಲುವು ಸಾಧಿಸಿದೆ. ಈ ಮೂಲಕ ಪಾಕ್ ಸೆಮಿಫೈನಲ್ ಹಾದಿ ಕಷ್ಟ ಎಂಬಂತಾಗಿದೆ.

ನೆದರ್ ಲ್ಯಾಂಡ್ಸ್ ವಿರುದ್ಧ ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದು ಹೀಗೆ....
ನೆದರ್ ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ನಲ್ಲಿ ಅತಿ ವೇಗದ ಶತಕ ದಾಖಲಿಸಿದ ಆಸ್ಟ್ರೇಲಿಯಾ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ ಐಪಿಎಲ್ ಸೇರಿದಂತೆ ಭಾರತದಲ್ಲಿ ಆಡಿರುವ ಎಲ್ಲಾ ಪಂದ್ಯಗಳ ಅನುಭವಗಳಿಂದ 40 ಎಸೆತಗಳಲ್ಲಿ ಶತಕ ಬಾರಿಸಿರುವುದಾಗಿ ಹೇಳಿದರು.

'ಪ್ರತಿದಿನ 8 ಕೆಜಿ ಮಟನ್ ತಿಂತಾರೆ': ಅಪ್ಘಾನ್ ವಿರುದ್ಧ ಸೋತ ನಂತರ ಪಾಕ್ ಆಟಗಾರರ ವಿರುದ್ಧ ಅಕ್ರಮ್ ಕೆಂಡ!
ಸೋಮವಾರ ಚೆನ್ನೈನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಪ್ಘಾನಿಸ್ತಾನ ವಿರುದ್ಧ ಸೋತ ನಂತರ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ನ್ನು ಟೀಕಿಸಿರುವ ಮಾಜಿ ನಾಯಕ ವಾಸಿಂ ಅಕ್ರಮ್ , ಪಾಕ್ ಆಟಗಾರರ ಫಿಟ್ ನೆಸ್ ಬಗ್ಗೆ ಕೆಂಡಕಾರಿದ್ದಾರೆ.

