ICC ODI World Cup 2023

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023: ಕೊಹ್ಲಿ ಮ್ಯಾಜಿಕ್ ಗೆ ಹಲವು ದಾಖಲೆಗಳು ಪತನ, ಪುಣೆ ಮೈದಾನದಲ್ಲಿ 'ವಿರಾಟ' ದರ್ಶನ
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆರ್ಭಟ ಮುಂದುವರೆದಿದ್ದು, ಪುಣೆ ಮೈದಾನದಲ್ಲಿನ ಕೊಹ್ಲಿ ಮ್ಯಾಜಿಕಲ್ ಬ್ಯಾಟಿಂಗ್ ಗೆ ಹಲವು ದಾಖಲೆಗಳು ಪತನವಾಗಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಜುಗಲ್ ಬಂದಿ, ಒಂದೇ ದಿನ ಲಾರಾ, ಡಿವಿಲಿಯರ್ಸ್ ದಾಖಲೆ ಪತನ
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಒಂದೇ ದಿನ ವಿಶ್ವಕಪ್ ದಾಖಲೆಗಳನ್ನು ಮುರಿಯುವ ಮೂಲಕ ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಒಂದೇ ಪಂದ್ಯದಲ್ಲಿ ಇಬ್ಬರು ಕ್ರಿಕೆಟ್ ದೈತ್ಯರ ದಾಖಲೆ ಮುರಿದ 'ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ'
ಐಸಿಸಿ ಕ್ರಿಕೆಟ್ ವಿಶ್ವಕರ್ 2023ಟೂರ್ನಿಯ ಇಂದಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ ರನ್ ಮೆಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಇಬ್ಬರು ದೈತ್ಯ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ 2023: ಕ್ರಿಕೆಟ್ ದೈತ್ಯ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ಗೆಲುವು
ಹಾಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಒಂದರ ಹಿಂದೆ ಒಂದು ಅಚ್ಚರಿ ಫಲಿತಾಂಶಗಳು ಹೊರ ಬೀಳುತ್ತಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ಮಣಿಸಿದ ಬೆನ್ನಲ್ಲೇ ಇತ್ತ ಕ್ರಿಕೆಟ್ ದೈತ್ಯ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ತಂಡ ಮಹತ್ವದ ಗೆಲುವು ಸಾಧಿಸಿದೆ.

ವೈಯುಕ್ತಿಕ ತುರ್ತುಪರಿಸ್ಥಿತಿ: ಟೀಂ ಇಂಡಿಯಾ ಕ್ಯಾಂಪ್ ಬಿಟ್ಟು ಮುಂಬೈಗೆ ದೌಡಾಯಿಸಿದ ವಿರಾಟ್ ಕೊಹ್ಲಿ
ಐಸಿಸಿ ವಿಶ್ವಕಪ್ ಟೂರ್ನಿಯ ವಾರ್ಮಪ್ ಮ್ಯಾಚ್ ನಲ್ಲಿ ತೊಡಗಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ರನ್ ಮೆಷಿನ್ ವಿರಾಟ್ ಕೊಹ್ಲಿ ವೈಯುಕ್ತಿಕ ತುರ್ತುಪರಿಸ್ಥಿತಿಯಿಂದಾಗಿ ಕ್ಯಾಂಪ್ ತೊರೆದು ದಿಢೀರನೆ ಮುಂಬೈಗೆ ವಾಪಸಾಗಿದ್ದಾರೆ.

'70 ಮೀ. ಬೌಂಡರಿ, ಪಿಚ್ ಮೇಲೆ ಹುಲ್ಲು'; ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಗಾಗಿ ಐಸಿಸಿ ಪ್ರೋಟೋಕಾಲ್; ಈ ಬಾರಿ ಬೌಲರ್ ಗಳದ್ದೇ ಮೇಲುಗೈ?
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2023ಕ್ಕೆ ಭರದ ಸಿದ್ದತೆ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ, ಮಹತ್ವದ ಟೂರ್ನಿಗಾಗಿ ಪ್ರೋಟೋಕಾಲ್ ಬಿಡುಗಡೆ ಮಾಡಿದ್ದು, ಪಿಚ್ ಕ್ಯುರೇಟರ್ ಗಳಿಗೆ ಮಹತ್ವದ ಸೂಚನೆ ನೀಡಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಪ್ರೋಟೋಕಾಲ್ ರಿಲೀಸ್, ಈ ಬಾರಿ ಬೌಲರ್ ಗಳದ್ದೇ ಮೇಲುಗೈ?
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ 2 ಸಾವಿರದ 23ಕ್ಕೆ ಭರದ ಸಿದ್ದತೆ ನಡೆಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ, ಮಹತ್ವದ ಟೂರ್ನಿಗಾಗಿ ಪ್ರೋಟೋಕಾಲ್ ಬಿಡುಗಡೆ ಮಾಡಿದೆ.

ICC ODI World Cup 2023: ಭಾರತ-ಪಾಕಿಸ್ತಾನ ಪಂದ್ಯದ ವೇಳಾಪಟ್ಟಿ ಬದಲಾವಣೆ ಸಾಧ್ಯತೆ; ಬಿಸಿಸಿಐ ಮಹತ್ವದ ಸಭೆ
ತೀವ್ರ ನಿರೀಕ್ಷೆ ಹುಟ್ಟಿಸಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ವೇಳಾಪಟ್ಟಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಐಸಿಸಿ ಕ್ರಿಕೆಟ್: ನಿರೀಕ್ಷೆಗಳ ಒತ್ತಡವನ್ನು ನಿಭಾಯಿಸಿಕೊಂಡರೆ ವಿಶ್ವಕಪ್ ಜಯ ಸಾಧ್ಯ: ಟೀಂ ಇಂಡಿಯಾಗೆ ಕಪಿಲ್ ದೇವ್ ಕಿವಿಮಾತು
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ತವರು ನೆಲದ ನಿರೀಕ್ಷೆಗಳ ಒತ್ತಡ ಮೀರಿ ಆಡಿದರೆ ವಿಶ್ವಕಪ್ ಜಯ ಸಾಧ್ಯ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿದ್ದಾರೆ.

