ICC Cricket World Cup 2023

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಆಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಶುಭ್ ಮನ್ ಗಿಲ್ ಅಲಭ್ಯ
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದ್ದು, ಡೆಂಗ್ಯೂ ಜ್ವರಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ ಮನ್ ಗಿಲ್ 2ನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಅತಿ ವೇಗದ 50 ವಿಕೆಟ್: ಐಸಿಸಿ ವಿಶ್ವಕಪ್ ನಲ್ಲಿ ದಾಖಲೆ ಬರೆದ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್
ಭಾರತದ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಬೌಲರ್ ಎಂಬ ದಾಖಲೆಗೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಪಾತ್ರರಾಗಿದ್ದಾರೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಎಂಎಸ್ ಧೋನಿ ದಾಖಲೆ ಮುರಿದ ಕೆಎಲ್ ರಾಹುಲ್
ಭಾನುವಾರ ನಡೆದ ಆಸೀಸ್ ವಿರುದ್ಧದ ವಿಶ್ವಕಪ್ನ(icc world cup 2023) ಲೀಗ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕನ್ನಡಿಗ ಕೆಎಲ್ ರಾಹುಲ್ ಇದೇ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಎಂಎಸ್ ಧೋನಿ ಅವರ ದಾಖಲೆಯನ್ನೂ ಮುರಿದಿದ್ದಾರೆ.

ಆಗ ಕಪಿಲ್ ದೇವ್, ಈಗ ಕೆಎಲ್ ರಾಹುಲ್: ವಿಶ್ವಕಪ್ ನಲ್ಲಿ ಮರುಕಳಿಸಿದ ಕ್ರಿಕೆಟಿಗರ ಸ್ನಾನದ ಕಥೆ
ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವರ್ಸಸ್ ಭಾರತ ಪಂದ್ಯ ಸಾಕಷ್ಟು ವಿಚಾರಗಳಿಂದಾಗಿ ಸುದ್ದಿಯಾಗುತ್ತಿದ್ದು, ಇದೀಗ ಕ್ರಿಕೆಟಿಗರ ಸ್ನಾನದ ವಿಚಾರಕ್ಕಾಗಿಯೂ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಐಸಿಸಿ ವಿಶ್ವಕಪ್ 2023: 31 ವರ್ಷಗಳ ಆಸ್ಟ್ರೇಲಿಯಾದ ಜಯದ ದಾಖಲೆಗೆ ಬ್ರೇಕ್ ಹಾಕಿದ ಭಾರತ
ಐಸಿಸಿ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ 31 ವರ್ಷಗಳಿಂದ ಆರಂಭಿಕ ಪಂದ್ಯಗಳ ಜಯದ ದಾಖಲೆ ಹೊಂದಿದ್ದ ಪ್ರಬಲ ಆಸ್ಟ್ರೇಲಿಯಾಗೆ ಭಾರತ ತಂಡ ಆಘಾತ ನೀಡಿದ್ದು, ದಾಖಲೆಗೆ ಬ್ರೇಕ್ ಹಾಕಿದೆ.

ಐಸಿಸಿ ವಿಶ್ವಕಪ್ 2023: ಮೊದಲ 3 ವಿಕೆಟ್ ಗೆ ಕನಿಷ್ಠ ಮೊತ್ತ ದಾಖಲಿಸಿಯೂ ಜಯ, ಟೀಂ ಇಂಡಿಯಾ ದಾಖಲೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ಹಲವು ದಾಖಲೆಗಳಿಗೆ ಪಾತ್ರವಾಗಿದ್ದು, ಈ ಪಟ್ಟಿಗೆ ಇದೀಗ ಭಾರತ ತಂಡ ಆರಂಭಿಕ ಕಳಪೆ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಜಯಿಸಿದ ಸಾಧನೆ ಕೂಡ ಸೇರಿದೆ.

ಐಸಿಸಿ ವಿಶ್ವಕಪ್ 2023: ಗೆಲುವಿನ ನಡುವೆಯೂ ಹೀನಾಯ ದಾಖಲೆ ಬರೆದ ಭಾರತ
ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ತನ್ನ ಮೊದಲಿನ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆದ್ದಿದ್ದರೂ ಅದೇ ಪಂದ್ಯದಲ್ಲಿ ಹೀನಾಯ ದಾಖಲೆಯೊಂದನ್ನು ಕೂಡ ಬರೆದಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023: ಕೊಹ್ಲಿ-ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್, ಜೊತೆಯಾಟದಲ್ಲಿಯೂ ದಾಖಲೆ
ನಿನ್ನೆ ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಚ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಜೊತೆಯಾಟದಲ್ಲಿಯೂ ದಾಖಲೆ ಬರೆದಿದೆ.

ಐಸಿಸಿ ಏಕದಿನ ವಿಶ್ವಕಪ್ 2023: ಸಚಿನ್ ದಾಖಲೆ ಮುರಿದ ಡೇವಿಡ್ ವಾರ್ನರ್, ವಿಶ್ವಕಪ್ ನಲ್ಲಿ ವೇಗದ ಸಾವಿರ ರನ್ ಪೂರೈಕೆ
ಐಸಿಸಿ ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯ ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ದೈತ್ಯ ಬ್ಯಾಟರ್ ಡೇವಿಡ್ ವಾರ್ನರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

