IAS officer

ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ 2 ವರ್ಷದಿಂದ ಲೀಸ್ ಫೈಲ್ ಕ್ಲಿಯರ್ ಮಾಡಿಲ್ಲ: ನಿರಾಣಿ ಅಸಮಾಧಾನ; ಪರಿಷತ್ ನಲ್ಲಿ ಕೋಲಾಹಲ!
ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ 2 ವರ್ಷದಿಂದ ಮೈಸೂರು ಹಾಗೂ ಮಂಡ್ಯ ಸಕ್ಕರೆ ಕಾರ್ಖಾನೆ ಲೀಸ್ ಫೈಲ್ ಕ್ಲಿಯರ್ ಮಾಡಿಲ್ಲ ಎಂದು ಬೃಹತ್ ಕಾಮಗಾರಿ ಸಚಿವ ಮುರುಗೇಶ್ ನಿರಾಣಿ ನೇರ ಆರೋಪ ಮಾಡಿದ್ದಾರೆ

ವಿಧಾನಸಭೆ ಚುನಾವಣೆ: ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಗೆ ಬಿಜೆಪಿ ಟಿಕೆಟ್ ಫಿಕ್ಸ್!; ಜಿ.ಪರಮೇಶ್ವರ್ ವಿರುದ್ಧ ಸ್ಪರ್ಧೆ?
ಜುಲೈ 31 ರಂದು ನಿವೃತ್ತರಾಗಲಿರುವ ಹಿರಿಯ ಐಎಎಸ್ ಅಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಅನಿಲ್ ಕುಮಾರ್ ಬಿಹೆಚ್ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಮಿನಿಸ್ಟರ್ ಗೋಪಾಲಯ್ಯ ಹೆಸರು ಬಳಸಿ ಐಎಎಸ್ ಅಧಿಕಾರಿಗೆ ಬೆದರಿಕೆ ಕರೆ: ಆರೋಪಿ ಬಂಧನ
ಸಚಿವರ ಪಿಎ ಎಂದು ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್‌ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿ ಗಂಗಾಧರ್ ಎಂಬುವವರನ್ನು ಬಂಧಿಸಲಾಗಿದೆ.

'ವೈರಲ್ ಆಗಿರುವ ವಾಟ್ಸಾಪ್ ಚಾಟ್ ಫೇಕ್, ಯುವತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ': ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ
ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ದೆಹಲಿ ಮೂಲದ ಯುವತಿ ತಮ್ಮ ಮೇಲೆ ಗಂಭೀರ ಆರೋಪ ಮಾಡಿರುವ ಬಗ್ಗೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಜೆ.ಸಿ. ಲಿನ್ ವಿಧಿವಶ
ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಜೆ ಸಿ ಲಿನ್(88) ಇಂದು ವಿಧಿವಶರಾಗಿದ್ದಾರೆ.

ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಗೌರವ್ ಗುಪ್ತ ಅಧಿಕಾರ ಸ್ವೀಕಾರ; ಸಕಾರಾತ್ಮಕ ಆಡಳಿತದ ಭರವಸೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಆಡಳಿತಗಾರರಾಗಿ ಐಎಎಸ್ ಅಧಿಕಾರಿ ಗೌರವ್ ಗುಪ್ತ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಐಎಂಎ ಹಗರಣ:ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದ ಅನುಮತಿ ಕೇಳಿದ ಸಿಬಿಐ
4 ಸಾವಿರ ಕೋಟಿ ರೂಪಾಯಿಗಳ ಐಎಂಎ ಹಗರಣದಲ್ಲಿ ಲಂಚ ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ,ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಬಿಎಂ ವಿಜಯಶಂಕರ್, ಮಾಜಿ ಉಪ ವಿಭಾಗೀಯ ಅಧಿಕಾರಿ ಎಲ್ ಸಿ ನಾಗರಾಜ್ ಮತ್ತು ಮಾಜಿ ಗ್ರಾಮ ಲೆಕ್ಕಿಗ ಎನ್ ಮಂಜುನಾಥ್ ಅವರ ವಿರುದ್ಧ ತನಿಖೆ ನಡೆಸಲು ಸಿಬಿಐ ರಾಜ್ಯ ಸರ್ಕಾರದ ಅನುಮತಿ ಕೋರಿದೆ.

ಆಹಾರಕ್ಕಾಗಿ ಮೊರೆಯಿಟ್ಟ ವಲಸೆ ಕಾರ್ಮಿಕನಿಗೆ ರೈಲಿನಿಂದ ಜಂಪ್ ಮಾಡಲು ಹೇಳಿದ ಐಎಎಸ್ ಅಧಿಕಾರಿ- ಆಡಿಯೋ ವೈರಲ್
ಸರಿಯಾಗಿ ಆಹಾರ ಪೂರೈಸುತ್ತಿಲ್ಲ. ಹಸಿವು ನೀಗಿಸಲು ಕ್ರಮ ಕೈಗೊಳ್ಳಿ ಎಂದು ಮೊರೆಯಿಟ್ಟ ವಲಸೆ ಕಾರ್ಮಿಕರೊಬ್ಬರಿಗೆ ಐಎಎಸ್ ಅಧಿಕಾರಿಯೊಬ್ಬರು ರೈಲಿನಿಂದ ಜಂಪ್ ಮಾಡಿ ಎಂದು ಖಾರವಾಗಿ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯಾವುದೇ ಹುದ್ದೆ ನೀಡದೆ ಐಎಎಸ್ ಐಧಿಕಾರಿ ಮಣಿವಣ್ಣನ್ ಎತ್ತಂಗಡಿ
ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆಯಿಂದ ಪಿ.ಮಣಿವಣ್ಣನ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ಅವರ ಜಾಗಕ್ಕೆ ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

