Human rights

ರೈತರ ಪ್ರತಿಭಟನೆ ಸಂಬಂಧ 4 ರಾಜ್ಯಗಳ ಸರ್ಕಾರಗಳಿಗೆ ನೋಟೀಸ್ ಕಳಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ರೈತರ ಪ್ರತಿಭಟನೆಯಿಂದಾಗಿ ದೇಶಾದ್ಯಂತ 9,000 ಸಣ್ಣ, ಮಧ್ಯಮ ಮತ್ತು ದೊಡ್ಡ ಕಂಪನಿಗಳಿಗೆ ನಷ್ಟ ಸಂಭವಿಸಿದೆ. ಈ ಬಗ್ಗೆ ತನ್ನ ಬಳಿ ದೂರುಗಳು ಬರುತ್ತಲೇ ಇರುವುದಾಗಿ ಆಯೋಗ ತಿಳಿಸಿದೆ.

ನಿಯಮ ಉಲ್ಲಂಘನೆಯನ್ನು ಮಾನವ ಹಕ್ಕುಗಳ ಅಡಿಯಲ್ಲಿ ಕ್ಷಮಿಸಲು ಸಾಧ್ಯವಿಲ್ಲ: ವಿಶ್ವಸಂಸ್ಥೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ
ಭಾರತದಲ್ಲಿ ಎನ್ ಜಿಒ ಗಳಿಗೆ ವಿಧಿಸಲಾಗುತ್ತಿರುವ ನಿರ್ಬಂಧಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ಕಮಿಷನರ್ ಮೈಕಲ್ ಬ್ಯಾಚೆಲೆಟ್ ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಮಧ್ಯರಾತ್ರಿ ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಅಂತ್ಯ ಸಂಸ್ಕಾರ ಮಾನವ ಹಕ್ಕುಗಳಿಗೆ ವಿರುದ್ಧ: ಹೈಕೋರ್ಟ್
ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆಯ ಅಂತ್ಯ ಸಂಸ್ಕಾರವನ್ನು ರಾತ್ರೋರಾತ್ರಿ ನೆರವೇರಿಸಿದ್ದು ಮಾನವ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ಅಲ್ಲಹಾಬಾದ್ ಹೈಕೋರ್ಟ್ ಹೇಳಿದೆ.

ಪಾಕಿಸ್ತಾನ, ಐಒಸಿ, ಟರ್ಕಿಗೆ ವಿಶ್ವಸಂಸ್ಥೆಯಲ್ಲಿ ಒಟ್ಟಿಗೆ ಝಾಡಿಸಿದ ಭಾರತ!
ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರದ ಬಗ್ಗೆ ಮೂಗು ತೂರಿಸುತ್ತಿರುವ ಪಾಕಿಸ್ತಾನ, ಒಐಸಿ, ಟರ್ಕಿಗೆ ವಿಶ್ವಸಂಸ್ಥೆಯಲ್ಲಿ ಭಾರತ ಒಟ್ಟಿಗೆ ಝಾಡಿಸಿದೆ.

ಸೋಂಕಿನಿಂದ ಮೃತಪಟ್ಟವರ ಅಮಾನವೀಯ ಶವಸಂಸ್ಕಾರ: ಕೆಎಸ್‌ಎಚ್‌ಆರ್‌ಸಿ ಈಗಲಾದರೂ ಎಚ್ಚೆತ್ತುಕೊಳ್ಳಲಿ- ಹೆಚ್.ಕೆ. ಪಾಟೀಲ್
ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಶವಸಂಸ್ಕಾರ ಮಾಡಲಾಗುತ್ತಿದ್ದು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಈಗಾಲಾದರೂ ಮೂಕಪ್ರೇಕ್ಷಕನಂತೆ ಕೂರದೇ ಕೂಡಲೇ ಜಾಗೃತವಾಗಬೇಕಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರು ಹೇಳಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣ ಜಾತ್ಯಾತೀತವಾಗಿವೆ: ಬಿಪಿನ್ ರಾವತ್
ಭಾರತೀಯ ಸೇನಾಪಡೆಗಳು ಅತ್ಯಂತ ಉತ್ತಮ ಜಾತ್ಯಾತೀತತೆಯಿಂದ ಕೂಡಿದ್ದು ಮಾನವೀಯತೆ) ಹಾಗೂ ಸಭ್ಯತೆಗೆ ಹೆಸರಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ತರುವಾಯ ರಾವತ್ ಈ ಹೇಳಿಕೆ ಬಂದಿದೆ.

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ: ಯುಎಸ್ ಕಾಂಗ್ರೆಸ್ ನಲ್ಲಿ ನಿರ್ಣಯ ಮಂಡನೆ
ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಮೆರಿಕಾ ಸದನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಅಮೆರಿಕಾದ ನಿರ್ಣಯವನ್ನು ಜಾರಿಗೆ ತಂದಿದೆ.

ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಮಾನವ ಹಕ್ಕು ಸಂಘಟನೆಗಳು ನಿರ್ಲಕ್ಷಿಸಿತ್ತು: ಕಾಶ್ಮೀರಿ ಪತ್ರಕರ್ತೆ
ಕಳೆದ 30 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆ ಚಟುವಟಿಕೆಗಳು ನಡೆಯುತ್ತಿದ್ದರು ಮಾನವ ಹಕ್ಕುಗಳ ಆಯೋಗ ಕಣ್ಮುಚ್ಚಿ ಕುಳಿತಿತ್ತು ಎಂದು ಕಾಶ್ಮೀರಿ ಪತ್ರಕರ್ತೆ ಆರತಿ ಟಿಕೊ ಸಿಂಗ್ ಹೇಳಿದ್ದಾರೆ.

ಕಾಶ್ಮೀರದ ಪರಿಸ್ಥಿತಿ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಪಾಕ್ ಆಗ್ರಹ
ಜಮ್ಮು-ಕಾಶ್ಮೀರದ ವಿಷಯವನ್ನು ಪಾಕಿಸ್ತಾನ ಸೆ.10 ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ (ಯುಎನ್ ಹೆಚ್ ಆರ್ ಸಿ)ಯಲ್ಲಿ ಪ್ರಸ್ತಾಪಿಸಿದ್ದು, ನಿರ್ಬಂಧ ವಿಧಿಸಿರುವುದನ್ನೂ ಉಲ್ಲೇಖಿಸಿದೆ.

