HUBBALLI

ಹುಬ್ಬಳ್ಳಿಯಲ್ಲಿ ಧಾರ್ಮಿಕ ಮತಾಂತರ: ಕಠಿಣ ಕ್ರಮಕ್ಕೆ ಆಗ್ರಹಿಸಿ ಠಾಣೆ ಮುಂದೆ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ
ಧಾರ್ಮಿಕ ಮತಾಂತರದ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಒಂದು ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಮತ್ತು ವ್ಯಕ್ತಿಯೊಬ್ಬರು ಕೆಲವು ಪಾದ್ರಿಗಳು ಸೇರಿದಂತೆ 15 ಜನರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಂಡೇಲಿ: ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆ; ಮೂವರ ಬಂಧನ, ಆಂಧ್ರಪ್ರದೇಶ ಮೂಲದ 6 ಹುಡುಗಿಯರ ರಕ್ಷಣೆ!
ದಾಂಡೇಲಿ ಬಳಿಯ ರೆಸಾರ್ಟ್ ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬೇಧಿಸಿದ್ದು, ದಂಧೆ ನಡೆಸುತ್ತಿದ್ದ ಮೂರು ಜನರನ್ನು ಬಂಧಿಸಿ ಆಂಧ್ರ ಪ್ರದೇಶ ಮೂಲದ ಆರು ಹುಡುಗಿಯರನ್ನು ರಕ್ಷಣೆ ಮಾಡಿದ್ದಾರೆ.

ಹುಬ್ಬಳ್ಳಿ-ದೆಹಲಿ ನಡುವೆ ನೇರ ವಿಮಾನ ಸೇವೆ ಆರಂಭ
ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿಯಿಂದ ದೆಹಲಿಗೆ ಇಂಡಿಗೋ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಿದ್ದು, ಇನ್ನು ಮುಂದೆ ಹುಬ್ಬಳ್ಳಿ ಹಾಗೂ ನೆರೆಯ ಜಿಲ್ಲೆಗಳ ಜನರು ನೇರವಾಗಿ ದೆಹಲಿಗೆ ಹಾರಬಹುದಾಗಿದೆ.

ಹೊತ್ತಿ ಉರಿದ ಖಾಸಗಿ ಬಸ್: ಚಾಲಕನ ಸಮಯ ಪ್ರಜ್ಞೆಯಿಂದ 30 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!
ಪೂನಾದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್'ಗೆ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹುಬ್ಭಳ್ಳಿ-ಧಾರವಾಡ ಬೈಪಾಸ್ ಸಮೀಪದ ಕಾರವಾರ ರಸ್ತೆಯ ಬಳಿ ನಡೆದಿದೆ.

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಶ್ರೀ ರಾಮ ಸೇನೆ ಕಾರ್ಯಕರ್ತರಿಂದ ಕನಕದಾಸ ಜಯಂತಿ ಆಚರಣೆ
ನಾಡಿನಾದ್ಯಂತ ಇಂದು ಸಡಗರ, ಸಂಭ್ರಮದಿಂದ ಕನಕದಾಸ ಜಯಂತಿಯನ್ನು ಆಚರಿಸಲಾಗುತ್ತಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಕನಕದಾಸ ಜಯಂತಿ ಆಚರಿಸಲಾಯಿತು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿ ಬಿಜೆಪಿ ದೇಶದ್ರೋಹಿಗಳನ್ನು ಬೆಳೆಸುತ್ತಿದೆ: ಮುತಾಲಿಕ್
ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ಬಾರಿಗೆ ಆಚರಣೆಗೆ ತಂದ ಟಿಪ್ಪು ಜಯಂತಿ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಕೊಟ್ಟಿದ್ದು ಇಂದು ನವೆಂಬರ್ 10ರಂದು ಮೊದಲ ಬಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ: 2023'ರ ಚುನಾವಣೆಗೆ "ಮಿಷನ್ 150" ಕಾರ್ಯಸೂಚಿ
ರಾಜ್ಯ ವಿಧಾನಸಭೆ ಚುನಾವಣೆ 2023 ರಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆದಿರುವ 2 ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಮಿಷನ್ 150 ನ್ನು ಬಿಜೆಪಿಯ ಮುಖ್ಯಕಾರ್ಯಸೂಚಿಯನ್ನಾಗಿರಿಸಿಕೊಳ್ಳಲಾಗಿದೆ.

ದೇಗುಲ ತೀರ್ಥ ಕುಡಿಯಬಾರದು, ಅವೈಜ್ಞಾನಿಕ, ಕಾಂತಾರ 'ರಿಷಬ್'ಗೆ ಜನ ಹೊಡೆಯುತ್ತಿದ್ದರು!: ಬಿ.ಟಿ.ಲಲಿತಾ ನಾಯಕ್
ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು..ಅವೆಲ್ಲ ಅವೈಜ್ಞಾನಿಕವಾದದ್ದು, ಅವರು ಶುದ್ಧವಾಗಿ ಕೈತೊಳೆಯುವುದಿಲ್ಲ ಎಂದು ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.

ಕಲರ್ಫುಲ್ ಕಂಬಳಿಹುಳಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಲನ್ ಪಟ್ಟ; ನೆರವಿಗೆ ತಜ್ಞರೇ ಬರಬೇಕಾಯ್ತು!
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ಗಳಿಂದಾಗಿ ವರ್ಣರಂಜಿತ ಕಂಬಳಿಹುಳ (ಕ್ಯಾಟರ್ಪಿಲ್ಲರ್) ಇದೀಗ ವಿಲನ್ ಆಗಿ ಪರಿಣಮಿಸಿದೆ.

