Hotel

ವಿಜಯವಾಡದ ಕೋವಿಡ್ ಕೇರ್ ಹೊಟೇಲ್ ನಲ್ಲಿ ಅಗ್ನಿ ಅವಘಡ, ಮೃತರ ಸಂಖ್ಯೆ 10ಕ್ಕೇರಿಕೆ, ಸರ್ಕಾರ ತಲಾ 50 ಲಕ್ಷ ರೂ ಪರಿಹಾರ
ಇತ್ತೀಚೆಗೆ ದುರಂತದ ಮೇಲೆ ದುರಂತಗಳು ನಡೆಯುತ್ತವೇ ಇವೆ. ಆಂಧ್ರಪ್ರದೇಶದ ವಿಜಯವಾಡದ ಸ್ವರ್ಣ ಪ್ಯಾಲೆಸ್ ಹೊಟೇಲ್ ನಲ್ಲಿ ಭಾನುವಾರ ನಸುಕಿನ ಜಾವ ಅಗ್ನಿ ಅವಘಡ ಉಂಟಾಗಿದ್ದು ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ.

ದೆಹಲಿಯಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸಿದ್ದು, ಆಸ್ಪತ್ರೆಗಳೊಂದಿಗೆ ಹೋಟೆಲ್ ಸಂಪರ್ಕ ಕಡಿತಗೊಳಿಸಿ: ಕೇಜ್ರೀವಾಲ್ ಆದೇಶ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ -19 ಪರಿಸ್ಥಿತಿ ಸುಧಾರಣೆ ಕಂಡಿರುವುದರಿಂದ, ಕೋವಿಡ್ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೋಟೆಲ್‌ಗಳ ಸಂಪರ್ಕ ಕಡಿತಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಕಟಿಸಿದರು.

ಕಂಫರ್ಟ್ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ: ಇಬ್ಬರು ಮಹಿಳೆಯರ ರಕ್ಷಣೆ, ಮೂವರ ಬಂಧನ
ವೇಶ್ಯಾವಾಟಿಕೆ ನಡೆಯುತ್ತಿದ್ದ ಬನ್ನೇರುಘಟ್ಟ ಮುಖ್ಯರಸ್ತೆಯ ಕಂಫರ್ಟ್ ಹೋಟೆಲ್‌ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಇಬ್ಬರು ಮಹಿಳೆಯರನ್ನು ರಕ್ಷಿಸಿ ಹೋಟೆಲ್ ಮ್ಯಾನೇಜರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋವಿಡ್-19: ಸೋಂಕಿತರ ಆರೈಕೆಗೆ ಹೋಟೆಲ್ ಬಳಕೆ, ಆಸ್ಪತ್ರೆಗಳ ಬೇಡಿಕೆಗಳಿಗೆ ಮಾಲೀಕರು ಬೇಸರ
ಹೋಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸುವ ಕುರಿತು ಹೋಟೆಲ್ ಮಾಲೀಕರು ಹಾಗೂ ಖಾಸಗಿ ಆಸ್ಪತ್ರೆಗಳು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಥಮಿಕ ಸಭೆ ನಡೆಸಿದ್ದು, ಆಸ್ಪತ್ರೆಗಳ ಬೇಡಿಕೆಗಳಿಗೆ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ಎಫೆಕ್ಟ್: ಶೇ.25ರಷ್ಟು ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ತೆರೆಯುವ ಸೌಭಾಗ್ಯವೇ ಇಲ್ಲ!
ಕೊರೋನಾ ಲಾಕ್ ಡೌನ್ ನಂತರ ಆರ್ಥಿಕ ದುಸ್ಥಿತಿಯಿಂದ ಅನೇಕ ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಮೊನ್ನೆ ಸೋಮವಾರದಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯುವಿಕೆಗೆ ಸರ್ಕಾರ ಅವಕಾಶ ನೀಡಿದರೂ ಕೂಡ ಕೆಲವರಿಗೆ ಆರ್ಥಿಕ ದುಸ್ಥಿತಿಯಿಂದ ತೆರೆಯಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಹೊಟೇಲ್ ಗಳನ್ನು ನವೀಕರಿಸಬೇಕೆಂದು ತೆರೆಯುತ್ತಿಲ್ಲ.

ನಾಳೆಯಿಂದ ಹೋಟೆಲ್, ಮಾಲ್ ಓಪನ್: ಕೊರೋನಾ ಹಾಟ್'ಸ್ಪಾಟ್ ರಾಜ್ಯಗಳ ಸಿಬ್ಬಂದಿಗಿಲ್ಲ ಅವಕಾಶ
ಕೊರೋನಾ ವೈರಸ್ ಲಾಕ್'ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಸೋಮವಾರದಿಂದ ಪುನರಾರಂಭಗೊಳ್ಳುತ್ತಿದ್ದು, ಕೊರೋನಾ ಹಾಟ್'ಸ್ಪಾಟ್ ಎನಿಸಿಕೊಂಡಿರುವ ರಾಜ್ಯಗಳ ಮೂಲದ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದೇ ಇರುವುದು ಇದೀಗ ಹೊಸ ವಿವಾದವೊಂದನ್ನು ಸೃಷ್ಟಿ ಮಾಡಿದೆ.

ಕೇಂದ್ರ ಒಪ್ಪಿದರೆ ಜೂನ್ 1ರ ನಂತರ ಹೋಟೆಲ್ ತೆರೆಯಲು ಅವಕಾಶ: ಆರ್. ಅಶೋಕ್
ರಾಜ್ಯದ ಬೊಕ್ಕಸಕ್ಕೆ ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿದೆ. ಇದರ ನಡುವೆಯೂ ಕೊರೋನಾ ತಡೆಗೂ ಹೆಚ್ಚಿನ ಒತ್ತು ನೀಡುತ್ತೇವೆ. ಜೂನ್ 1ರ ನಂತರ ಕೇಂದ್ರದ ನಿರ್ದೇಶನ ನೋಡಿಕೊಂಡು ನಂತರ ಹೊಟೇಲ್ ಪ್ರಾರಂಭಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ವಿಷಯದಲ್ಲಿ ನಮ್ಮ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.

ಧಾರ್ಮಿಕ ಕೇಂದ್ರಗಳ ಮರು ಆರಂಭ: ಕೇಂದ್ರದ ಅನುಮತಿಗೆ ಕಾಯುತ್ತಿದೆ ರಾಜ್ಯ ಸರ್ಕಾರ
ಕೊರೋನಾ ವೈರಸ್ ಲಾಕ್ ಡೌನ್ ನಿಂದ ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದ್ದು ಅದನ್ನು ತೆರೆಯುವುದು ಮತ್ತು ಹಿಂದಿನ ಸ್ಥಿತಿಗೆ ತರುವುದು ಸವಾಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನರು ಸೇರಿ ಸಾಮಾಜಿಕ ಅಂತರ ಪರಿಕಲ್ಪನೆಗೆ ತೊಂದರೆಯಾಗುವುದನ್ನು ತಪ್ಪಿಸುವುದು ಧಾರ್ಮಿಕ ಕೇಂದ್ರವನ್ನು ಮುಚ್ಚಿದ್ದರ ಮುಖ್ಯ ಉದ್ದೇಶವಾಗಿತ್ತು.

ನಮಗೂ ಅನುಮತಿ ನೀಡಿ: ಸರ್ಕಾರಕ್ಕೆ ಮಾಲ್, ಪ್ರವಾಸೋದ್ಯಮ ಸಂಘ ಪದಾಧಿಕಾರಿಗಳಿಂದ ಮನವಿ
ಮಾಲ್, ಹೋಟೆಲ್ ಸೇರಿದಂತೆ ಪ್ರವಾಸಿ ವಲಯಗಳು ಪುನರಾರಂಭಿಸಲು ಅನುಮತಿ ನೀಡುವಂತೆ ಅಖಿಲ ಭಾರತ ಶಾಪಿಂಗ್ ಮಾಲ್'ಗಳ ಸಂಘ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದವು.

