hospitals

ಕಪ್ಪು ಶಿಲೀಂದ್ರ: ಹಾಸಿಗೆ ಮೀಸಲಿರಿಸಿ, ವಿವರ ಪ್ರದರ್ಶಿಸುವಂತೆ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸೂಚನೆ
ಕಪ್ಪು ಶಿಲೀಂಧ್ರದ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವಂತೆ ಹಾಗೂ ಲಭ್ಯವಿರುವ ಹಾಸಿಗೆಗಳ ವಿವರವನ್ನು ಪ್ರದರ್ಶಿಸುವಂತೆ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ರಾಜ್ಯದಲ್ಲೂ ಡಿಆರ್'ಡಿಒ ವತಿಯಿಂದ ಕೋವಿಡ್ ಕೇಂದ್ರ ಆರಂಭಿಸಲು ಸಹಾಯ ಮಾಡಿ: ರಾಜನಾಥ್ ಸಿಂಗ್'ಗೆ ಸವದಿ ಪತ್ರ
ಕರ್ನಾಟಕದಲ್ಲಿಯೂ ಕೂಡ ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ರಕ್ಷಣಾ ಇಲಾಖೆಯಿಂದ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಲು ಸಹಾಯ ಮಾಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಮನವಿ ಮಾಡಿಕೊಂಡಿದ್ದಾರೆ.

ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳು ಬಳಕೆಯಾಗುತ್ತಿಲ್ಲ: ಮೈಸೂರು ಶಾಸಕರ ಆರೋಪ
ಒಂದೆಡೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳಿಲ್ಲ ಎಂಬ ದೂರು ಕೇಳಿ ಬರುತ್ತಿದೆ, ಆದರೆ ಕೆಲ ಆಸ್ಪತ್ರೆಗಳಲ್ಲಿ ಸಿಬ್ಬಂದಿಯಿರದ ಕಾರಣ ವೆಂಟಿಲೇಟರ್ ಬಳಕೆಯಾಗುತ್ತಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ.

ಆಕ್ಸಿಜನ್ ಉತ್ಪಾದನೆ ಮಾಡಲು ಆಸ್ಪತ್ರೆಗಳಿಗೆ ಡಿಆರ್ ಡಿಒ ನೆರವು
ಕೋವಿಡ್-19 ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವುದರ ಜೊತೆಗೆ, ಆಕ್ಸಿಜನ್ ಲಭ್ಯತೆಯ ಕೊರತೆ ಮತ್ತಷ್ಟು ಆತಂಕ ಮೂಡಿಸಿದೆ.

ಆಸ್ಪತ್ರೆ, ಪಿಹೆಚ್ ಸಿ ಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನು ಕೊರತೆ
ಕೋವಿಡ್-19 ಪ್ರಕರಣಗಳ ಏರಿಕೆ ಒಂದೆಡೆಯಾದರೆ, ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಮುಂದಾಗುತ್ತಿರುವುದು ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆ ದಾಸ್ತಾನನಿಗೆ ಕೊರತೆ ಉಂಟು ಮಾಡಿದೆ.

ದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಸರಿಯಾಗಿ ಆಕ್ಸಿಜನ್ ಪೂರೈಕೆ ಇಲ್ಲದೆ ಆಸ್ಪತ್ರೆಗಳ ಪರಿತಾಪ!
ರಾಜಧಾನಿ ದೆಹಲಿಯ ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ನಿನ್ನೆ ತುರ್ತು ಪೂರೈಕೆಯ ಹೊರತಾಗಿಯೂ ಆಕ್ಸಿಜನ್ ನಲ್ಲಿ ಕೊರತೆಯುಂಟಾಗಿದ್ದು ಶನಿವಾರ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ 20 ರೋಗಿಗಳು ಮೃತಪಟ್ಟಿದ್ದಾರೆ.

ಸರ್ಕಾರದ ಕಠಿಣ ಆದೇಶದ ಹೊರತಾಗಿಯೂ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ತೀವ್ರ: ಅಪೊಲೊ ಎಂಡಿ ಸಂಗೀತಾ ರೆಡ್ಡಿ
ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಮಾಡಬೇಕೆಂದು ಸರ್ಕಾರದ ಕಠಿಣ ಆದೇಶಗಳ ಹೊರತಾಗಿಯೂ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಕಾಡುತ್ತಿದೆ ಎಂದು ಅಪೊಲೊ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ದೇಶದ ಕರಾಳ ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಸಚಿವರ ಜೊತೆ ನಾನೇ ಹೋಗುತ್ತೇನೆ: ಡಿ.ಕೆ. ಶಿವಕುಮಾರ್
ಕೋವಿಡ್-19 ಪರಿಸ್ಥಿತಿ ಅರಿಯುವುದಕ್ಕಾಗಿ ರಾಜ್ಯಪಾಲರ ಸಭೆ ಮುಗಿದ, ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ದೆಹಲಿಯಲ್ಲಿ ಕೈಮೀರಿ ಹೋಗುತ್ತಿದೆ ಕೊರೋನಾ ಸೋಂಕು: ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ; ಸಿಎಂ ಕೇಜ್ರಿವಾಲ್ ಆತಂಕ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ನಿಯಂತ್ರಣ ಮೀರಿ ಹರಡುತ್ತಿದೆ. ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಮತ್ತು ಆಕ್ಸಿಜನ್ ಪೂರೈಕೆ ಕೊರತೆ ತೀವ್ರವಾಗಿದೆ ಎಂದಿದ್ದಾರೆ.

