Hosapete

ಹೊಸಪೇಟೆ: ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಚಾಲಕ, ಕಂಡಕ್ಟರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಬೆಳಗಾವಿಯ ಮೂಲದ ಸಂತ್ರಸ್ತೆ ಉಚ್ಚಂಗೆಮ್ಮ ದೇವಸ್ಥಾನದ ಜಾತ್ರೆಗೆ ಬಂದಿದ್ದಳು ಮತ್ತು ಮನೆಗೆ ಮರಳಲು ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ 10 ಪ್ರಯಾಣಿಕರಿದ್ದ ಖಾಸಗಿ ಬಸ್ ಬಂದಿತು, ಅವರೆಲ್ಲರೂ ಮುಂದಿನ ನಿಲ್ದಾಣದಲ್ಲಿ ಇಳಿದರು.

ಗಣರಾಜ್ಯೋತ್ಸವ ವೇಳೆ ಅವಘಡ: ದೇಶದ 2ನೇ ಅತಿ ಎತ್ತರದ ಧ್ವಜಸ್ತಂಭದಿಂದ ಜಾರಿ ಬಿದ್ದ ತ್ರಿವರ್ಣ ಧ್ವಜ
ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದ್ದರು. ನಂತರ ಅವರು ಅವರು ಪರೇಡ್‌ನಲ್ಲಿ ಪಥಸಂಚಲನದಲ್ಲಿ ಭಾಗಿಯಾಗಿ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ಧ್ವಜ ಏಕಾಏಕಿ ಕೆಳಗೆ ಬಿದ್ದಿದೆ.

ತುಂಗಭದ್ರಾ ಅಣೆಕಟ್ಟು ಗೇಟ್ ಅವಘಡ: ಜಲಾಶಯಕ್ಕೆ ತನಿಖಾ ತಂಡ ಭೇಟಿ, ಶೀಘ್ರದಲ್ಲೇ ವರದಿ ಸಲ್ಲಿಕೆ
ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ ಕೆ ಬಜಾಜ್ ಅವರು ತನಿಖಾ ತಂಡದ ಮುಖ್ಯಸ್ಥರಾಗಿದ್ದು, ಸೋಮವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುಂಗಭದ್ರಾ ಜಲಾಶಯ: ಮುರಿದ ಕ್ರಸ್ಟ್ ಗೇಟ್‌ನಲ್ಲಿ 'ಸ್ಟಾಪ್ ಲಾಗ್' ಅಳವಡಿಕೆ ನಿಜಕ್ಕೂ ಸವಾಲು!
JSW ಉಕ್ಕು ಮತ್ತು ಇತರ ಎರಡು ಎಂಜಿನಿಯರಿಂಗ್ ಕಂಪನಿಗಳು ವಿನ್ಯಾಸಗೊಳಿಸಿದ 4x20 ಚದರ ಅಡಿ ವಿಸ್ತೀರ್ಣದ ಮೂರು ಕಬ್ಬಿಣದ ಪ್ಲೇಟ್ ಗಳನ್ನು ತಂದು ಗೇಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ.

ಹೊಸಪೇಟೆ: ಟಿಇಟಿ ಪರೀಕ್ಷೆ ವೇಳೆ ಬುರ್ಖಾ ಧರಿಸಿ ಬಂದ ಪರೀಕ್ಷಾರ್ಥಿಗಳಿಗೆ ಪ್ರವೇಶ ನಿರಾಕರಣೆ, ಕೆಲಕಾಲ ಗೊಂದಲ ಸೃಷ್ಟಿ
ಹೊಸಪೇಟೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾನುವಾರ ಇಬ್ಬರು ಪರೀಕ್ಷಾರ್ಥಿಗಳು ಬುರ್ಖಾ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಹಿಜಾಬ್ ನಮ್ಮ ಘನತೆ ಎಂಬ ಗೋಡೆ ಬರಹ: ಇಬ್ಬರು ಯುವಕರ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಹಿಜಾಬ್ ನಮ್ಮ ಘನತೆ ಎಂದು ಶಾಲೆಯ ಗೋಡೆಗಳ ಮೇಲೆ ಬರೆದಿದ್ದ ಇಬ್ಬರು ಯುವಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಜಿ-20 ಶೃಂಗಸಭೆಗೆ ಸಿದ್ಧತೆ ಹೆಸರಲ್ಲಿ ಹಂಪಿಯಲ್ಲಿ ಭಾರೀ ವಾಹನಗಳಿಗೆ ಪ್ರವೇಶ; ನಿಯಮ ಉಲ್ಲಂಘಿಸಿದ ಜಿಲ್ಲಾಡಳಿತ!
ವಿಜಯನಗರ ಜಿಲ್ಲೆ ಹಂಪಿಯಲ್ಲಿ ಜುಲೈ 13ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿ20 ಶೆರ್ಪಾ ಮೀಟ್‌ಗೆ ಆತಿಥ್ಯ ವಹಿಸಲು ಸಜ್ಜಾಗುತ್ತಿರುವಾಗಲೇ ಯುನೆಸ್ಕೋ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಿಯಮಗಳನ್ನು ಗಾಳಿಗೆ ತೂರಿರುವ ಅಧಿಕಾರಿಗಳು ವಿವಿಧೆಡೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

77 ಲಕ್ಷ ರೂ. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಸರ್ಕಾರಕ್ಕೆ ಹಂಪಿ ವಿಶ್ವವಿದ್ಯಾಲಯದ ವಿಸಿ ಪತ್ರ!
ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬರೋಬ್ಬರಿ 77 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ವಿವಿ ಉಪಕುಲಪತಿಗಳು ಇದೀಗ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಬಿಲ್ ಮನ್ನಾ ಮಾಡುವಂತೆ ಪತ್ರ ಬರೆದಿದ್ದು, ಹಣದ ಕೊರತೆಯಿಂದ ವಿಶ್ವವಿದ್ಯಾನಿಲಯವು ನಡೆಯಲು ಹೆಣಗಾಡುತ್ತಿದೆ ಎಂದಿದೆ.

ಹೊಸಪೇಟೆ: ಆಸ್ತಿ ವಿವರಗಳ ಜೊತೆ ಇಬ್ಬರು ಪತ್ನಿಯರ ಬಗ್ಗೆ ಘೋಷಿಸಿಕೊಂಡ ಎಎಪಿ ಅಭ್ಯರ್ಥಿ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳ ಜತೆಗೆ ಇನ್ನಿತರ ಮಾಹಿತಿಗಳನ್ನು ನಾಮಪತ್ರದಲ್ಲಿ ಘೋಷಿಸಿಕೊಳ್ಳುತ್ತಿದ್ದಾರೆ.

