Hizbul Mujahideen

1989 ರಿಂದ ಇದೇ ಮೊದಲ ಬಾರಿಗೆ ಟ್ರಾಲ್ ಹಿಜ್ಬುಲ್ ಉಗ್ರ ಸಂಘಟನೆ ಮುಕ್ತ!
1989 ರಿಂದ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್ ಪ್ರದೇಶ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಕ್ತವಾದ ಪ್ರದೇಶವಾಗಿದೆ.

ಹಿಜ್ಬುಲ್ ಮುಜಾಹಿದ್ದೀನ್ ನ ಇಬ್ಬರು ಸ್ಥಳೀಯ ಮಟ್ಟದ ಕಾರ್ಯಕರ್ತರ ಬಂಧನ: ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶ
ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯಾದ ಕುಪ್ವಾರದ ಹಂದ್ವಾರಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್(ಎಚ್‌ಎಂ) ಸಂಘಟನೆಯ ಇಬ್ಬರ ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು(ಒಜಿಡಬ್ಲ್ಯು) ಭದ್ರತಾ ಪಡೆಗಳು ಬಂಧಿಸಿದ್ದು, ಎರಡು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ಬಂಧಿಸಿವೆ.

ರಿಯಾಜ್ ನೈಕೂ ಹತ್ಯೆ ಬೆನ್ನಲ್ಲೇ ಹಿಜ್ಬುಲ್ ಉಗ್ರ ಸಂಘಟನೆ ಕಾಶ್ಮೀರ ಘಟಕಕ್ಕೆ ಗಾಝಿ ಹೈದರ್ ನೇತೃತ್ವ
ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ಹತ್ಯೆ ಬೆನ್ನಲ್ಲೇ ಸಂಘಟನೆಯ ಕಾಶ್ಮೀರ ಘಟಕಕ್ಕೆ ನೂತನ ಕಮಾಂಡರ್ ನನ್ನು ಆಯ್ಕೆ ಮಾಡಲಾಗಿದ್ದು, ಉಗ್ರ ಗಾಝಿ ಹೈದರ್ ಗೆ ನೇತೃತ್ವ ನೀಡಲಾಗಿದೆ.

ಹಂದ್ವಾರ ದಾಳಿಗೆ ಹೊಣೆ ಹೊತ್ತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ, ಭಾರತದ್ದೇ ಕೈ ಮೇಲಾಯಿತು ಎಂದ ಉಗ್ರರು!
ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಭಯೋತ್ಪಾದಕರ ಎನ್ ಕೌಂಟರ್ ನಡೆದು 5 ದಿನಗಳು ಕಳೆದ ಬಳಿಕ ಅಲ್ಲಿನ ಘಟನಾವಳಿಗಳಿಗೆ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಹೊಣೆ ಹೊತ್ತಿದೆ.

ಅಮೃತಸರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತನ ಬಂಧನ: ಪಂಜಾಬ್ ಡಿಜಿಪಿ
ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತನನ್ನು ಬಂಧಿಸಿರುವ ಪಂಜಾಬ್ ಪೊಲೀಸರು ಆತನಿಂದ 29 ಲಕ್ಷ ರು ಹಣ ವಶಕ್ಕೆ ಪಡೆದಿದ್ದಾರೆ.

ಜಮ್ಮು-ಕಾಶ್ಮೀರ: ಬಾರಮುಲ್ಲಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಸೆರೆ, ಶಸ್ತ್ರಾಸ್ತ್ರಗಳ ವಶ
ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು- ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ತಾಪ್ಪರ್ ಪಠಾಣ್ ಗ್ರಾಮದಲ್ಲಿ ಅನೇಕ ಉಗ್ರ ಸಂಬಂಧಿತ ಘಟನೆಗಳಲ್ಲಿ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಜುನೈದ್ ಫಾರೂಕ್ ಪಂಡಿತ್ ನನ್ನು ಭದ್ರತಾ ಪಡೆಗಳು ಇಂದು ಬಂಧಿಸಿದ್ದಾರೆ.

ಕಾಶ್ಮೀರದಲ್ಲಿ ಎನ್‌ಕೌಂಟರ್: ಹಿಜ್ಬುಲ್ ಉಗ್ರನ ಸದೆಬಡಿದು ಗಡಿಯಲ್ಲಿ ಯೋಧರ ಸಂಕ್ರಾತಿ!
ದೇಶದಾದ್ಯಂತ ಇಂದು ಮಕರ ಸಂಕ್ರಮಣ ಸಡಗರ, ಇದರ ನಡುವೆ ನಮ್ಮ ಯೋಧರು ಸಹ ಗಡಿಯಲ್ಲಿ ನುಸುಳುವ ಉಗ್ರರನ್ನು ಎನ್‌ಕೌಂಟರ್ ಮಾಡುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಇದೇ ವೇಳೆ ಆತನ ಸಹಚರನೊಬ್ಬ ತಪ್ಪಿಸಿಕೊಂಡಿದ

ಕಾಶ್ಮೀರದ ಪೊಲೀಸರು, ಸರಪಂಚ್ ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಐಎಸ್ಐ ಸೂಚನೆ!
ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನ ಮುಂದುವರೆಸಿರುವ ಪಾಕಿಸ್ತಾನ ತನ್ನ ಗುಪ್ತ ಚರ ಇಲಾಖೆ ಐಎಸ್ಐ ಮೂಲಕ ಭಾರತದ ಪೊಲೀಸರು ಹಾಗೂ ಸರಪಂಚ್ ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಸಂದೇಶ ರವಾನೆ ಮಾಡಿದೆ.

ಮೂವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 30 ಲಕ್ಷ ಬಹುಮಾನ!
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 3 ಉಗ್ರರ ಬಗ್ಗೆ ಮಾಹಿತಿ ನೀಡುವವರಿಗೆ 30 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಪೊಲೀಸರು ಘೋಷಿಸಿದ್ದಾರೆ.

