Hindu

ಸಿಎಎ ಅಗತ್ಯವೇಕೆ ಎಂಬುದನ್ನು ನೆರೆ ರಾಷ್ಟ್ರ ಅಫ್ಘಾನಿಸ್ತಾನದ ಅಸ್ಥಿರತೆ ಹೇಳುತ್ತಿದೆ: ಹರ್ದೀಪ್ ಸಿಂಗ್ ಪುರಿ
ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಿಂದ 168 ಭಾರತೀಯರನ್ನು ಹೊತ್ತು ಬಂದ ಐಎಎಫ್ ನ ವಿಶೇಷ ವಿಮಾನ ಭಾರತ ತಲುಪುತ್ತಿದ್ದಂತೆಯೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಬಗ್ಗೆ ಮಾತನಾಡಿದ್ದಾರೆ.

72 ಮಂದಿ ಆಫ್ಘನ್ ಮೂಲದ ಸಿಖ್ಖರು ಮತ್ತು ಹಿಂದೂಗಳನ್ನು ವಿಮಾನ ಏರಲು ಬಿಡದ ತಾಲಿಬಾನ್
ಅಫ್ಘಾನಿಸ್ತಾನ ಮೂಲದ 72 ಮಂದಿ ಸಿಖ್ಖರು ಮತ್ತು ಹಿಂದೂಗಳ ಗುಂಪು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಲುವಾಗಿ ವಿಮಾನ ಏರಬೇಕಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ತಾಲಿಬಾನಿಗಳು ಅವರನ್ನು ತಡೆದಿದ್ದಾರೆ ಎಂದು ವಿಶ್ವ ಪಂಜಾಬಿ ಸಂಘದ ಅಧ್ಯಕ್ಷ ವಿಕ್ರಂ ಜಿತ್ ಸಾಹ್ನಿ ತಿಳಿಸಿದ್ದಾರೆ.

ಕೋಮು ಸೌಹಾರ್ದತೆ: ಅನಾಥೆಯನ್ನು ಮಗಳಂತೆ ಪೋಷಿಸಿ ಹಿಂದೂ ಪದ್ಧತಿಯಂತೆ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ!
ಕುಟುಂಬಸ್ಥರೆಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿಯೊಬ್ಬಳನ್ನು ಮಗಳಂತೆಯೇ ಸಾಕಿದ ಮುಸ್ಲಿಂ ವ್ಯಕ್ತಿಯೊಬ್ಬರು ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ.

ಇಸ್ಲಾಮಿಕ್ ಅಧ್ಯಯನ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದೇಶದ ಮೊದಲ ಹಿಂದೂ ಯುವಕ ಶುಭಮ್ ಯಾದವ್!
ಅಲ್ವಾರ್ ಮೂಲದ 21 ವರ್ಷದ ಶುಭಮ್ ಯಾದವ್ ಇಸ್ಲಾಮಿಕ್ ಅಧ್ಯಯನದಲ್ಲಿ ಕೇಂದ್ರ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದೇಶದ ಮೊದಲ ಮುಸ್ಲಿಮೇತರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹಿಂದೂ-ಮುಸ್ಲಿಂ ದಂಪತಿ ಜಾಹಿರಾತು: ತನಿಷ್ಕ್ ಜ್ಯುವೆಲರಿಗೆ ಟ್ವೀಟರಿಗರಿಂದ ಮಂಗಳಾರತಿ, ವಿಡಿಯೋ!
ಹಿಂದೂ-ಮುಸ್ಲಿಂ ದಂಪತಿಯ ಜಾಹಿರಾತು ಮೂಲಕ ತನಿಷ್ಕ್ ಜ್ಯುವೆಲರಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ತನಿಷ್ಕ್ ತನ್ನ ಜಾಹಿರಾತುವನ್ನು ಡಿಲೀಟ್ ಮಾಡಿದೆ.

ತುಮಕೂರು: ಕೊಳವೆ ಬಾವಿ ಕೊರೆಸಿದ್ದಕ್ಕೆ ದಲಿತನ ಮೇಲೆ ಮೇಲ್ಜಾತಿಯವರಿಂದ ಹಲ್ಲೆ, ಕೇಸು ದಾಖಲು
ಕೊಳವೆ ಬಾವಿ ಕೊರೆಸಿದ್ದ ಎಂದು ಸಿಟ್ಟಿನಿಂದ ದಲಿತನ ಮೇಲೆ ಮೇಲ್ವರ್ಗದ ಜಾತಿಯವರು ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.

ಮುಸ್ಲಿಂರು ಹಿಂದೂ ನಾಗರಿಕತೆಯಲ್ಲಿ ಸಮಾನ ಪಾಲುದಾರರೆಂದು ಆರ್‌ಎಸ್‌ಎಸ್ ಪರಿಗಣಿಸುತ್ತದೆ: ಅಖೀಲ್ ಅಹ್ಮದ್
ಆರ್‌ಎಸ್‌ಎಸ್ ಮತ್ತು ಅದರ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಕೇವಲ ಒಂದು ಜಾತಿ ಅಥವಾ ನಂಬಿಕೆಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿರುವ ಪ್ರಖ್ಯಾತ ಮುಸ್ಲಿಂ ವಿದ್ವಾಂಸ ಮತ್ತು ಎನ್ ಸಿಪಿಯುಎಲ್ ನಿರ್ದೇಶಕ ಶೇಖ್ ಅಖೀಲ್ ಅಹ್ಮದ್, ಮುಸ್ಲಿಮರು ಸೇರಿದಂತೆ ದೇಶದ ಎಲ್ಲಾ ವರ್ಗಗಳು ಮತ್ತು ಧರ್ಮಗಳು ಸಮಾನವೆಂದು ಆರ್‌ಎಸ್‌ಎಸ್ ಪರಿಗಣಿಸುತ್ತದೆ.

100 ಕೋಟಿ ಜನರ ಮಣಿಸಲು 15 ಕೋಟಿ ಮುಸ್ಲಿಮರು ಸಾಕು ಹೇಳಿಕೆ: ವಾರಿಸ್ ಪಠಾಣ್ ವಿರುದ್ದ ಪ್ರಕರಣ ದಾಖಲು
ಮುಸ್ಲಿಮರ ಜನಸಂಖ್ಯೆ ದೇಶದಲ್ಲಿ 15 ಕೋಟಿ ಕಮ್ಮಿಯೇ ಇರಬಹುದು. ಆದರೆ, ಅಗತ್ಯಬಿದ್ದರೆ 100 ಕೋಟಿ ಬಹುಸಂಖಾತರಿಗೆ ತಕ್ಕ ತಿರುಗೇಟು ನೀಡಬಲ್ಲರು ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ವಿರುದ್ದ ಪ್ರಕರಣ ದಾಖಲಾಗಿದೆ.

ಸೋದರತ್ವ ಸಾರಿದ ಹಿಂದು ಕುಟುಂಬ: ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಮಹಿಳೆಗೆ ಜೀವದಾನ ಮಾಡಿದ ವ್ಯಕ್ತಿ
ಜಾತಿ, ಧರ್ಮ ಹಿಡಿದು ಹಲವು ಕೆಸರೆರಚಾಟ ನಡೆಸುತ್ತಿರುವ ನಡುವಲ್ಲೇ ಹಿಂದೂ ಕುಟುಂಬವೊಂದು ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಮಹಿಳೆಗೆ ಅಂಗಾಂಗ ದಾನ ಮಾಡುವ ಮೂಲಕ ಸೋದರತ್ವವನ್ನು ಮೆರೆದು, ಇತರರಿಗೆ ಮಾದರಿಯಾಗಿದೆ.

