HD Devegowda

ತಾತ ಎಚ್.ಡಿ ದೇವೇಗೌಡರಿಗಾಗಿ ಹಾಸನ ಕ್ಷೇತ್ರ ಬಿಟ್ಟುಕೊಡಲು ಸಿದ್ಧ: ಪ್ರಜ್ವಲ್ ರೇವಣ್ಣ
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದರೆ ಅವರ ಪರ ಪ್ರಚಾರ ಮಾಡಲು ಸಿದ್ಧ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ಹೇಳಿದ್ದಾರೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಸವಾಲಾಗಿರುವ ಹಾಸನ ಲೋಕಸಭಾ ಕ್ಷೇತ್ರ!
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ತವರು ಕ್ಷೇತ್ರವಾದ ಹಾಸನದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೊದಲ ಸಭೆಯನ್ನು ನಡೆಸಲಿದ್ದಾರೆ.

ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ, ನ್ಯಾಯಾಲಯದ ಮೊರೆ ಹೋಗುತ್ತೇನೆ: ಸಿಎಂ ಇಬ್ರಾಹಿಂ
ಜೆಡಿಎಸ್ ಪಕ್ಷದ ಅಮಾನತುಗೊಂಡಿರುವ ನಾಯಕ ಸಿ.ಎಂ.ಇಬ್ರಾಹಿಂ ಅವರು ತಾವು ಈಗಲೂ ಜೆಡಿಎಸ್ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದು, ತಮ್ಮ ಅಮಾನತು ನಿರ್ಧಾರದ ವಿರುದ್ಧ ಕೋರ್ಟ್ ಮೊರೆ ಹೋಗುವುದಾಗಿ ಸೋಮವಾರ ಹೇಳಿದ್ದಾರೆ.

'ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷ ಹಾಳಾಯಿತು; 37 ಇದ್ದ ಶಾಸಕರ ಸಂಖ್ಯೆ 19 ಸ್ಥಾನಗಳಿಗೆ ಕುಸಿಯಿತು!'
ನೀವು ಹೇಳುವ ಹಾಗೆ ಚನ್ನಪಟ್ಟಣದಲ್ಲಿ ನಿಮ್ಮ ನೇತೃತ್ವದಲ್ಲಿ ಮುಸ್ಲಿಮರು ಮತ ಹಾಕಿರುವುದರಿಂದ ಕುಮಾರಣ್ಣನವರು 20 ಸಾವಿರ ಮತದಿಂದ ಆರಿಸಿ ಬಂದಿದ್ದಾರೆ ಎಂದು ಹೇಳಿದ್ದಿರ. 2018ರ ಚುನಾವಣೆಯಲ್ಲಿ ಕುಮಾರಣ್ಣನವರು 1 ಲಕ್ಷ ಮತಗಳ ಅಂತರದಿಂದ ಗೆಲುವು ಕಂಡಿದ್ದರು, ಆಗ ನೀವು ನಮ್ಮ ಪಕ್ಷದಲ್ಲಿ ಇರಲೇ ಇಲ್ಲ ಎಂದು ಹೇಳಿದ್ದಾರೆ.

ಮೋದಿ- ಅಮಿತ್ ಶಾ ಜೊತೆ ವ್ಯಕ್ತಿಗತ ಭಿನ್ನಮತವಿಲ್ಲ, ಸೈದ್ಧಾಂತಿಕ ವಿರೋಧ ಮಾತ್ರ; ಕುಮಾರಸ್ವಾಮಿ ಮೇಲೆ ನನಗೆ ನಂಬಿಕೆ ಇಲ್ಲ: ಇಬ್ರಾಹಿಂ
ಲೋಕಸಭೆ ಚುನಾವಣೆಗೆ ಇನ್ನೂ ಸಮಯವಿದೆ, ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ಮರು ಪರಿಶೀಲಿಸುವಂತೆ ಎಚ್.ಡಿ. ದೇವೇಗೌಡರಿಗೆ ಮತ್ತೊಮ್ಮೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

ಲೋಕಸಭಾ ಚುನಾವಣೆ: ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಎ. ಮಂಜು ವಿರೋಧ!
2024ರ ಲೋಕಸಭಾ ಚುನಾವಣೆಯಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೆ ಎ. ಮಂಜು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಬದಲಿಗೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸ್ಪರ್ಧಿಸಬೇಕು ಎಂದು ಬಯಸಿದ್ದಾರೆ.

ರಾಜಕೀಯ ವೈರಿಗಳ ವಿರುದ್ಧ ಗೌಡರ ಚಾಣಾಕ್ಷ ನಡೆ: ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಈಗ ಇಬ್ರಾಹಿಂ; ತಿರುಗಿಬಿದ್ದವರಿಗೆ ಗೇಟ್ ಪಾಸ್!
ಜೆಡಿಎಸ್ ಪಕ್ಷ ಹಾಗೂ ತಮ್ಮ ಕುಟುಂಬದ ವಿರುದ್ಧ ತಿರಗಿ ಬಿದ್ದವರನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಯಾವತ್ತೂ ಸಹಿಸುವುದಿಲ್ಲ, ಹಿಂದಿನಂತೆ ಈಗಲು ಕೂಡ ಅದನ್ನೇ ಮಾಡಿದ್ದಾರೆ. ದಳಪತಿಗಳ ವಿರುದ್ಧ ಬಂಡಾಯ ಸಾರಿದ್ದ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.

ನನಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂತೋಷ ತಂದಿದೆ: ಎಚ್.ಡಿ ದೇವೇಗೌಡ
ನನಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂತೋಷವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ತುಂಬಾ ಸಂತೋಷದಿಂದ ಸ್ವೀಕಾರ ಮಾಡಿದ್ದೇನೆ.

ನಿತೀಶ್ ಕುಮಾರ್ ಆಹ್ವಾನಿಸಿದ್ರು; ನನಗೀಗ 91 ವರ್ಷ, ಈ ವಯಸ್ಸಿನಲ್ಲಿ ಪ್ರಯೋಗ ಮಾಡಲು ಬಯಸುವುದಿಲ್ಲ: HD ದೇವೇಗೌಡ
ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವನ್ನು ತಮ್ಮ ಜನತಾದಳ ಸಂಯುಕ್ತದ (ಜೆಡಿಯು) ಜತೆ ವಿಲೀನಗೊಳಿಸುವಂತೆ ಹಾಗೂ ವಿರೋಧ ಪಕ್ಷಗಳ ಐಎನ್‌ಡಿಐಎ ಬಣ ಸೇರುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ತಿಳಿಸಿದ್ದಾರೆ.

