Haveri

ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ; ಜೂನ್ 25 ರಿಂದ ಮಕ್ಕಳ ಆರೋಗ್ಯ ತಪಾಸಣೆ: ಬೊಮ್ಮಾಯಿ
ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಕೆಲ ತಜ್ಞರ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಸದೃಢತೆಗಾಗಿ ಇದೇ ತಿಂಗಳ 25 ರಿಂದ ಸತತ ಮೂರು ತಿಂಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳವಾರು ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕುರಿತು ವದಂತಿ; ಆ್ಯಂಬುಲೆನ್ಸ್ ಬರುತ್ತಿದ್ದಂತೆ ಮನೆಯಿಂದ ಕಾಲ್ಕಿತ್ತ ಸೋಂಕಿತ ವ್ಯಕ್ತಿ!
ಹಾವೇರಿಯ ತಾಂಡಾ ಗ್ರಾಮದಲ್ಲಿ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆ ಬಳಿ ಆ್ಯಂಬುಲೆನ್ಸ್ ಬಂದಿದ್ದು, ಆ್ಯಂಬುಲೆನ್ಸ್ ನೋಡುತ್ತಿದ್ದಂತೆಯೇ ಭೀತಿಗೊಳಗಾದ ವ್ಯಕ್ತಿ ಮನೆಯಿಂದ ಕಾಲ್ಕಿತ್ತಿರುವ ಘಟನೆ ನಡೆದಿದೆ.

ಗ್ರಾಮ ಪಂಚಾಯಿತಿ ಮತ ಎಣಿಕೆಯ ಇಬ್ಬರು ಏಜೆಂಟ್ ಗಳು ಅಪಘಾತದಲ್ಲಿ ಸಾವು
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಸಂಭವಿಸಿದೆ.

ಕೊಬ್ರಿ ಹೋರಿ ಕ್ರೀಡಾಕೂಟದಲ್ಲಿ ದುರಂತ: ಕೆರೆಗೆ ಹಾರಿದ ಎತ್ತು ನೀರಲ್ಲಿ ಮುಳುಗಿ ಸಾವು
ಹಾವೇರಿ ಜಿಲ್ಲೆಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ಗ್ರಾಮೀಣ ಕ್ರೀಡೆಯಾದ ಕೋಬ್ರಿ ಹೋರಿ ಭಾಗವಾದ ಎತ್ತೊಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದೆ. ಹಾವೇರಿಯ ಸುತಗಟ್ಟಿ ಗ್ರಾಮದ ಕೆರೆಯಲ್ಲಿ ಎತ್ತು ಮುಳುಗಿ ಸಾವನ್ನಪ್ಪಿದೆ.

ಕೌಟುಂಬಿಕ ಕಲಹ: ಹಾವೇರಿಯಲ್ಲಿ ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ
ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದ ತಾಯಿ ತನ್ನ ಮಗಳ ಜತೆಸೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ.

ಹಾವೇರಿಯಲ್ಲಿ ಅಕ್ಷರ ಜಾತ್ರೆ: ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳ ಪರಿಶೀಲಿಸಿದ ಮನು ಬಳಿಗಾರ
ಮುಂದಿನ ವರ್ಷ ಫೆಬ್ರುವರಿ 26 ರಿಂದ 28 ರ ವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಾಗ ಅಂತಿಮಗೊಳಿಸಲಾಗಿದೆ.

ಭೀಕರ ದೃಶ್ಯ: ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ; ಬೈಕ್ ಸವಾರ ದುರ್ಮರಣ, ಸಿಸಿಟಿವಿಯಲ್ಲಿ ಸೆರೆ!
ಬೈಕ್ ಸವಾರನೊಬ್ಬ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿವಾಹಿತ ಮಹಿಳೆಗೆ ಬೆದರಿಕೆ, ಒಂದು ವರ್ಷದಿಂದ ಅತ್ಯಾಚಾರ: ಹಾವೇರಿ ನಗರಸಭೆ ಮಾಜಿ ಸದಸ್ಯ ಬಂಧನ
ಆ್ಯಸಿಡ್ ಹಾಕುವುದಾಗಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಕಳೆದ ಒಂದು ವರ್ಷದಿಂದ ಅತ್ಯಾಚಾರ ನಡೆಸುತ್ತಾ ಬಂದಿದ್ದ ಹಾವೇರಿ ನಗರಸಭೆ ಮಾಜಿ ಸದಸ್ಯನನ್ನು ಪೋಲೀಸರು ಬಂಧಿಸಿದ್ದಾರೆ.

ಹಾವೇರಿ: ಹೆತ್ತ ತಾಯಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಮಗ
ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿ ನಂತರ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆಯೊಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ರಸ್ತೆಯಲ್ಲಿ ನಡೆದಿದೆ.

