Haveri

ಹಾವೇರಿ: ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕುತ್ತಿಗೆಗೆ ಇರಿದ ಅಪ್ರಾಪ್ತೆ!
ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕುತ್ತಿಗೆಗೆ ಅಪ್ರಾಪ್ತ ವಯಸ್ಸಿನ ಯುವತಿ ಚಾಕು ಇರಿದಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.

ಎಂಎಲ್‍ಸಿ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ: ಸಾರ್ವಜನಿಕರಿಗೆ ಹಂಚಲು ತಂದಿದ್ದ ಸೀರೆ, ಸ್ಕೂಲ್ ಬ್ಯಾಗ್ ಜಪ್ತಿ
ಬೀರೇಶ್ವರ ನಗರದಲ್ಲಿರುವ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಹಾವೇರಿ: ರಟ್ಟಿಹಳ್ಳಿಯಲ್ಲಿ ಕೋಮು ಘರ್ಷಣೆ, ಕಲ್ಲು ತೂರಾಟ, 20 ಮಂದಿ ಪೊಲೀಸರ ವಶಕ್ಕೆ
ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಹಿಂದೂಪರ ಸಂಘಟನೆಗಳು ಇಂದು ಆಯೋಜಿಸಿದ್ದ ಬೃಹತ್ ಬೈಕ್ ರ್‍ಯಾಲಿ ವೇಳೆ ಗಲಾಟೆ ನಡೆದಿದೆ. ಮಾರ್ಚ್ 9 ರಂದು ನಡೆದಿದ್ದ ಎರಡು ಕೋಮುಗಳ ನಡುವಿನ ಗಲಾಟೆ ಇಂದು ಮುಂದುವರೆದಿದ್ದು, ಬೈಕ್ ರ್‍ಯಾಲಿ ವೇಳೆ ಕೆಲ ಯುವಕರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಗಲಭೆಗೆ ಕಾರಣವಾಗಿದೆ.

ಹಾವೇರಿ: ‘ನರ್ಸ್’ ವೇಷ ಧರಿಸಿ ಮಗುವನ್ನು ಅಪಹರಿಸಿದ ಮಹಿಳೆ ಬಂಧನ
ನರ್ಸ್ ವೇಷ ಧರಿಸಿದ್ದ ಮಹಿಳೆಯೊಬ್ಬರು ಜಿಲ್ಲೆಯ ಆಸ್ಪತ್ರೆಯೊಂದರಿಂದ ಎರಡು ದಿನದ ಮಗುವನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

ಅಧಿಕಾರಿಗಳ ಹಣದಾಹಕ್ಕೆ ಬೇಸ್ತು; ಲಂಚ ನೀಡಲು ಹಣವಿಲ್ಲದೆ ದುಡಿಮೆಯ ಎತ್ತನ್ನೇ ಕೊಡಲು ಪುರಸಭೆಗೆ ತಂದ ಹಾವೇರಿ ರೈತ!
ಅಧಿಕಾರಿಗಳ ಹಣದಾಹ ಮಿತಿ ಮೀರಿದ್ದು, ಅಸಹಾಯಕ ರೈತನೊಬ್ಬ ಲಂಚ ನೀಡಲು ಹಣವಿಲ್ಲದ ಕಾರಣ ತನ್ನ ದುಡಿಮೆಯ ಎತ್ತನ್ನೇ ಲಂಚವಾಗಿ ನೀಡಲು ಪುರಸಭೆ ಕಚೇರಿಗೆ ತೆರಳಿದ ಮನಕಲಕುವ ಹಾಗೂ ಆಘಾತಕಾರಿ ಘಟನೆ ಹಾವೇರಿಯಲ್ಲಿ ವರದಿಯಾಗಿದೆ.

ನಾಳೆ ಹಾವೇರಿಗೆ ಸಿಎಂ ಬೊಮ್ಮಾಯಿ: ಕಲ್ಯಾಣ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿ
ಮಾರ್ಚ್.10ರಂದು ಹಾವೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡುತ್ತಿದ್ದು, ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಲಿದ್ದಾರೆಂದು ತಿಳಿದುಬಂದಿದೆ.

ಬಿಜೆಪಿ ಶಾಸಕ ಓಲೇಕಾರ್‌ಗೆ ಬಿಗ್ ರಿಲೀಫ್: ಜೈಲು ಶಿಕ್ಷೆ ಅಮಾನತಿನಲ್ಲಿರಿಸಿ, ಹೈಕೋರ್ಟ್ ನಿಂದ ಜಾಮೀನು ಮಂಜೂರು!
ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಬಿಜೆಪಿಯ ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರಿಗೆ ವಿಚಾರಣಾಧೀನ ನ್ಯಾಯಾಲಯವು ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ಶುಕ್ರವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಸಂತ ಶಿಶುನಾಳ ಶರೀಫರ ತತ್ವಪದ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ: ಮುಖ್ಯಮಂತ್ರಿ ಬೊಮ್ಮಾಯಿ
ಸುಕ್ಷೇತ್ರ ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರ ಸಕ್ಕರೆ ಕಾರ್ಖಾನೆ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

