Hasana

ಹಾಸನ: ದ್ವಿಚಕ್ರ ವಾಹನ ನಿಲ್ಲಿಸಿ ನಾಪತ್ತೆಯಾಗಿದ್ದ ಯುವ ಪ್ರೇಮಿಗಳು ಶವವಾಗಿ ಪತ್ತೆ
ಜಿಲ್ಲೆಯ ಬಾಗೂರು ನವಿಲೆ ಸುರಂಗದ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಯುವ ಪ್ರೇಮಿಗಳ ಮೃತದೇಹ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ.

ಪ್ರತಿಪಕ್ಷಗಳನ್ನು ಗುರಿಯಾಗಿಸಿ ಕೇಂದ್ರ ಸರ್ಕಾರದಿಂದ ಸ್ವತಂತ್ರ ತನಿಖಾ ಸಂಸ್ಥೆಗಳ ದುರ್ಬಳಕೆ - ಮಾಜಿ ಸಚಿವ ರೇವಣ್ಣ
ರಾಜ್ಯದಲ್ಲಿ ಪ್ರತಿಪಕ್ಷಗಳ ಮುಖಂಡರನ್ನು ಗುರಿಯಾಗಿಸಿ ಸ್ವಾತಂತ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಆರೋಪಿಸಿದ್ದಾರೆ.

ಹಾಸನ: ಬೆಳಂಬೆಳಿಗ್ಗೆ ಜನವಸತಿ ಪ್ರದೇಶಕ್ಕೆ ಆನೆ ಹಿಂಡು ಲಗ್ಗೆ, ಕಾಡಿಗಟ್ಟಲು ಅರಣ್ಯಾಧಿಕಾರಿಗಳ ಹರಸಾಹಸ
ಹಾಸನ ಜಿಲ್ಲೆಯ ಬೇಲೂರು ಪಟ್ಣಣದ ಬಿಕ್ಕೋಡು ರಸ್ತೆಯ ಜನವಸತಿ ಪ್ರದೇಶಕ್ಕೆ ಇಂದು ಬೆಳಗ್ಗೆ 6 ಕಾಡಾನೆಗಳ ಹಿಂಡು ದಾಳಿ ಇಟ್ಟಿದ್ದು ಜನ ಭಯಭೀತರಾಗಿದ್ದಾರೆ. ಆನೆಯನ್ನು ಕಾಡಿಗಟ್ಟಲು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಈ ಬಾರಿ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನವಿಲ್ಲ: ವಿವಿಐಪಿಗಳಿಗೆ ಮಾತ್ರ ಅವಕಾಶ- ಸಚಿವ ಗೋಪಾಲಯ್ಯ
ಕೊರೋನಾ ಸೋಂಕು ತೀವ್ರತೆ ಹಿನ್ನೆಲೆಯಲ್ಲಿ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಹಾಸನ: ಕಾಡಾನೆ ತುಳಿತದಿಂದ ದೇವಸ್ಥಾನದ ಅರ್ಚಕ ಸಾವು
ಜಿಲ್ಲೆಯ ಸಕಲೇಶಪುರ ಹೊರವಲಯದಲ್ಲಿರುವ ಕೊಲ್ಲಹಳ್ಳಿಯಲ್ಲಿ 48 ವರ್ಷದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿದೆ.

ಹೇಮಾವತಿ ಜಲಾಶಯ ಪರಿಶೀಲಿಸಿದ ಸಚಿವ ಗೋಪಾಲಯ್ಯ: ಕೆರೆ, ಕಟ್ಟೆ, ನಾಲೆಗಳಿಗೆ ನೀರು ಬಿಡಲು ಸೂಚನೆ
ಹೇಮಾವತಿ ಜಲಾನಯನ ಪ್ರದೇಶಗಳ ಕೆರೆ-ಕಟ್ಟೆಗಳನ್ನು ತುಂಬಿಸಲು ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ನೀರನ್ನು ಹರಿಬಿಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹಾಸನ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಅಗರ: ಡಿಸ್ಚಾರ್ಜ್ ಆದ ರೋಗಿಗಳಿಂದ ದೂರುಗಳು
ಹಾಸನದ ನಿಗದಿತ ಕೋವಿಡ್ -19 ಆಸ್ಪತ್ರೆ ಅವ್ಯವಸ್ಥೆಯ ಅಗರವಾಗಿರುವುದಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಅನೇಕ ರೋಗಿಗಳು ದೂರುಗಳನ್ನು ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು: ಎಸ್.ಟಿ. ಸೋಮಶೇಖರ್
ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮದುವೆ ಒಲ್ಲೆ ಎಂದ ಯುವತಿ ಕಿಡ್ನಾಪ್ ಮಾಡಿ ಕಾರಲ್ಲೇ ತಾಳಿ ಕಟ್ಟಿದ ಯುವಕ!
ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಅಪಹರಿಸಿದ ಯುವಕನೊಬ್ಬ ಕಾರಿನಲ್ಲಿಯೇ ತಾಳಿ ಕಟ್ಟಿರುವ ಘಟನೆ ನಡೆದಿದೆ. ಮನು ಎಂಬ ಈ ಯುವಕ ಈ ಕೃತ್ಯವೆಸಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಸಖತ್ ವೈರಲ್ ಆಗಿದೆ.

