Hampi

Hot air balloon ರೈಡ್ ಮೂಲಕ ಹಂಪಿ ವೀಕ್ಷಣೆಗೆ ಅವಕಾಶ!
ಕೆಲ ತಿಂಗಳ ಹಿಂದಷ್ಟ ಹಂಪಿ ಬಳಿಯಿರುವ ಹೋಟೆಲ್ ವೊಂದು ಗ್ರಾಹಕರಿಗೆ ಹಾಟ್ ಏರ್ ಬಲೂನ್'ನಲ್ಲಿ ಹಂಪಿ ವೀಕ್ಷಿಸುವ ಅವಕಾಶ ನೀಡಿತ್ತು. ಇದೇ ನೆಪದಲ್ಲಿ ನಿರ್ವಾಹಕರು ಸ್ಮಾರಕಗಳ ಸಮೀಪ ತೆರಳಲು ಶುರು ಮಾಡಿತ್ತು. ಮಾರ್ಗಸೂಚಿಗಳನ್ನು ಅನುಸರಿಸಿರಲಿಲ್ಲ. ಇದೀಗ ಮತ್ತೊಮ್ಮೆ ವಿಜಯನಗರ ಜಿಲ್ಲಾಡಳಿತ ಬಲೂನ್ ರೈಡ್ ಗೆ ಅನುಮತಿ ನೀಡಿದೆ.

ಹಂಪಿ ಪಾರಂಪರಿಕ ಸ್ಮಾರಕದಲ್ಲಿ ಫೋಟೋಗ್ರಫಿಗೆ ನಿಷೇಧ: ಪ್ರವಾಸಿಗರಿಂದ ಆಕ್ರೋಶ
ಸ್ಮಾರಕದ ಸುತ್ತಮುತ್ತಲಿನ ಹಸಿರು ಹೊದಿಕೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿ ಫೋಟೋ ತೆಗೆದುಕೊಳ್ಳಲು ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಸಂಭ್ರಮ-50: ಕಾರ್ಯಕ್ರಮ ನಡೆದು 10 ತಿಂಗಳಾದರೂ ಕಲಾವಿದರಿಗೆ ಸಿಗದ ಸಂಭಾವನೆ..!
ಕಳೆದ ನವೆಂಬರ್‌ನಲ್ಲಿ ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಆದರೆ, 10 ತಿಂಗಳು ಕಳೆದರೂ ಸರ್ಕಾರ ಕಲಾವಿದರಿಗೆ ಸಂಭಾವನೆ ನೀಡಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಕಲಾವಿದರು ಮುಂದಾಗಿದ್ದಾರೆ.

ವಿಜಯನಗರ: ಭಾರೀ ಮಳೆಯಿಂದ ಹಂಪಿಯಲ್ಲಿ ಕನಿಷ್ಠ 12 ಸ್ಮಾರಕಗಳು ಮುಳುಗಡೆ
ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ 20 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಂಪಿಯ ಪುರಂದರ ಮಂಟಪ, ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ಹನುಮ ದೇವಸ್ಥಾನ ಸೇರಿದಂತೆ 12 ಸ್ಮಾರಕಗಳು ಮುಳುಗಡೆಯಾಗಿವೆ.

ಹಂಪಿಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಚಿರತೆ: ಪ್ರವಾಸಿಗರಲ್ಲಿ ಆತಂಕ
ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅನೇಕ ಪ್ರವಾಸಿಗರ ಕಣ್ಣಿಗೆ ಚಿರತೆ ಬಿದ್ದಿದೆ. ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನ ಅರಣ್ಯ ಇಲಾಖೆ ಚಿರತೆ ಹಿಡಿಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.

ಕರ್ನಾಟಕ: ಚೆನ್ನೈನ ವಸ್ತು ಸಂಗ್ರಹಾಲಯದಲ್ಲಿರುವ ವಿಠಲನ ಪ್ರತಿಮೆ ಹಿಂತಿರುಗಿಸಲು ಹಂಪಿ ನಾಗರಿಕರ ಒತ್ತಾಯ
ಬ್ರಿಟಿಷರ ಆಳ್ವಿಕೆಯಲ್ಲಿ ಚೆನ್ನೈನ ಮ್ಯೂಸಿಯಂಗೆ ಕೊಂಡೊಯ್ಯಲಾಗಿದ್ದ ಹಂಪಿಗೆ ಸೇರಿದ್ದ ವಿಠಲನ ಪ್ರತಿಮೆಯನ್ನು ವಾಪಸ್ ನೀಡುವಂತೆ ಹಂಪಿಯ ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಪಮಾನ ಹೆಚ್ಚಳ: ಕಳೆದ 10 ವರ್ಷಗಳಲ್ಲೇ ಈ ಬಾರಿ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ!
ಮಳೆ ಕೊರತೆ, ತಾಪಮಾನ ಹೆಚ್ಚಳದಿಂದಾಗಿ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 10 ವರ್ಷಗಳ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

ಹಂಪಿ ಉತ್ಸವ: ಫೆಬ್ರವರಿ 1ರಿಂದ 'ಹಂಪಿ ಬೈ ಸ್ಕೈ' ಹೆಲಿಕಾಪ್ಟರ್ ಯಾನ ಆರಂಭ
ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 2 ರಿಂದ 3 ದಿನಗಳ ಕಾಲ ನಡೆಯಲಿದ್ದು, ಉತ್ಸವ ಆರಂಭಕ್ಕೂ ಮುನ್ನಾ ದಿನ ಫೆ.1ರಂದು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಯಾನ ಆರಂಭವಾಗಲಿದೆ.

ಹಂಪಿಯಲ್ಲಿ ವಿಶ್ರಾಂತಿ ಕೊಠಡಿ, ಕೆಫೆ ಸೇರಿ ವಸತಿ ಸೌಲಭ್ಯಗಳ ಒದಗಿಸಲು ಎಎಸ್ಐ ಮುಂದು!
ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ, ಕೆಫೆ, ರೆಸ್ಟೋರೆಂಟ್ ಸೇರಿದಂತೆ ಇತರೆ ವಸತಿ ಸೌಲಭ್ಯಗಳ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮುಂದಾಗಿದೆ.

