Hamas

ಹಮಾಸ್ ಉಗ್ರರ ನಿರ್ನಾಮದ ಹೊರತು ಕದನ ವಿರಾಮ ಅಸಾಧ್ಯ ಎಂದ ಇಸ್ರೇಲ್; ಗಾಜಾದಲ್ಲಿ 2ನೇ ಹಂತದ ದಾಳಿ ಆರಂಭ
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕದನ ವಿರಾಮ ಘೋಷಣೆ ಕುರಿತು ವಿಶ್ವಸಂಸ್ಥೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಾವುದನ್ನೂ ಲೆಕ್ಕಿಸದ ಇಸ್ರೇಲ್, ಹಮಾಸ್ ಉಗ್ರರ ನಿರ್ನಾಮ ನಿರ್ಧಾರದಿಂದ ಹಿಂದೆ ಸರಿಯದೆ, 2ನೇ ಹಂತ ದಾಳಿಗೆ ಮುಂದಾಗಿದೆ.

ಹಮಾಸ್ ವಿರುದ್ಧ ಮುಂದುವರೆದ ಇಸ್ರೇಲ್ ದಾಳಿ: ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು!
ಹಮಾಸ್ ವಿರುದ್ಧ ಇಸ್ರೇಲ್ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಈ ಯುದ್ಧದಲ್ಲಿ ಇದುವರೆಗೂ ಪ್ಯಾಲಿಸ್ಟೈನ್ನಲ್ಲಿ ಸುಮಾರು 8ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಹಮಾಸ್ ನಿರ್ನಾಮಕ್ಕೆ ಗಾಜಾ ಪ್ರವೇಶಿಸಿದ ಇಸ್ರೇಲ್ ಸೇನೆ: ವೈಮಾನಿಕ ದಾಳಿ 3 ಪ್ರಮುಖ ಭಯೋತ್ಪಾದಕರು ಹತ!
ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧದಲ್ಲಿ ಎರಡೂ ಕಡೆಯಿಂದ 8500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಹಮಾಸ್ ಉಗ್ರ ಸಂಘಟನೆ ಎಂದು ಘೋಷಿಸಿ: ಭಾರತಕ್ಕೆ ಇಸ್ರೇಲ್ ಒತ್ತಾಯ
ಇತರ ಹಲವು ರಾಷ್ಟ್ರಗಳು ಮಾಡಿರುವಂತೆ ಹಮಾಸ್ ಉಗ್ರ ಸಂಘಟನೆ ಎಂದು ಭಾರತ ನಿಷೇಧಿಸುವ ಸಮಯ ಬಂದಿದೆ ಎಂದು ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಬುಧವಾರ ಹೇಳಿದ್ದಾರೆ.

ಗಾಜಾ ಪಟ್ಟಿ ಮೇಲೆ ದಾಳಿ ಹೆಚ್ಚಿಸಿದ ಇಸ್ರೇಲ್: 24 ಗಂಟೆಗಳಲ್ಲಿ 700 ಮಂದಿ ಸಾವು; ಅಮೆರಿಕಾ ಕಳವಳ
ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಇಸ್ರೇಲ್, ಗಾಜಾ ಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಂಗಳವಾರ ತಡರಾತ್ರಿ ಗಾಜಾ ನಗರದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಹಮಾಸ್ ಉಗ್ರರೇ ಮಾಹಿತಿ ನೀಡಿದ್ದಾರೆ.

ಹಮಾಸ್ ಬಳಿ 222 ಒತ್ತೆಯಾಳುಗಳಿದ್ದಾರೆ: ಇಸ್ರೇಲ್
ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಗಾಜಾದಲ್ಲಿ ಹಮಾಸ್ 222 ಮಂದಿಯನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡಿದೆ ಎಂದು ಹೇಳಿದೆ.

ಆಪರೇಷನ್ ಅಜಯ್; ಇಸ್ರೇಲ್‌ನಿಂದ ದೆಹಲಿಗೆ ಬಂದಿಳಿದ ಇಬ್ಬರು ನೇಪಾಳೀಯರು ಸೇರಿ 143 ಭಾರತೀಯರು!
'ಆಪರೇಷನ್ ಅಜಯ್' ಕಾರ್ಯಾಚರಣೆ ಭಾಗವಾಗಿ ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯಲು ಬಯಸಿದ್ದ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಭಾನುವಾರ ದೆಹಲಿಗೆ ಬಂದಿಳಿದಿದೆ.

ಭಯೋತ್ಪಾದಕರು ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಬಳಸುತ್ತಿದ್ದರು: ಮಸೀದಿ ಮೇಲಿನ ವೈಮಾನಿಕ ದಾಳಿ ಕುರಿತು ಇಸ್ರೇಲ್ ಸ್ಪಷ್ಟನೆ
ಹಮಾಸ್ ಉಗ್ರರು ತಮ್ಮ ದಾಳಿಗೆ ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಬಳಕೆ ಮಾಡುತ್ತಿದ್ದರು. ಹೀಗಾಗಿಯೇ ಮಸೀದಿ ಮೇಲೆ ವೈಮಾನಿಕ ದಾಳಿ ನಡೆಸಿ ಭಯೋತ್ಪಾಕರನ್ನು ಹತ್ಯೆ ಮಾಡಲಾಯಿತು ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.

ಮಾನವೀಯ ಆಧಾರದ ಮೇಲೆ ಇಬ್ಬರು ಅಮೆರಿಕಾ ಪ್ರಜೆಗಳ ಬಿಡುಗಡೆ ಮಾಡಿದ ಹಮಾಸ್, ಅಧ್ಯಕ್ಷ ಬೈಡನ್ ಸ್ವಾಗತ
ಹಮಾಸ್ ಉಗ್ರರು ಅಪಹರಿಸಿರುವ 200 ಒತ್ತೆಯಾಳುಗಳು ಪೈಕಿ 20 ಮಕ್ಕಳು ಸೇರಿ ಬಹುತೇಕರು ಜೀವಂತವಾಗಿದ್ದಾರೆಂದು ಇಸ್ರೇಲ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಜಾದಲ್ಲಿ ಬಂಧಿಸಲಾಗಿದ್ದ ಇಬ್ಬರು ಅಮೆರಿಕಾದ ಪ್ರಜೆಗಳನ್ನು ಹಮಾಸ್ ಬಿಡುಗಡೆ ಮಾಡಿದೆ.

